ಕೊಡಗು: ಕೊಡಗಿನ ಪೊನ್ನಂಪೇಟೆಯಲ್ಲಿ ನಾಲ್ವರನ್ನು ಭೀಕರವಾಗಿ ಹತ್ಯೆ ಮಾಡಿದ ಆರೋಪಿ ಗಿರೀಶ್ ತಾನೇಕೆ ಈ ಕೃತ್ಯ ಎಸಗಿದ್ದೇನೆ ಎನ್ನುವುದರ ಬಗ್ಗೆ ಪೊಲೀಸರಲ್ಲಿ ಬಾಯ್ಬಿಟ್ಟಿದ್ದಾನೆ.
ಹತ್ಯೆಗೀಡಾದ ನಾಗಿಗೆ ಗಿರೀಶ್ ಮೂರನೇ ಗಂಡನಾಗಿದ್ದು, ನಾಗಿಗೆ ಗಿರೀಶ ಎರಡನೇ ಗಂಡ. ನಾಗಿಯ ಮೊದಲನೇ ಗಂಡ ಸುಬ್ರಮಣಿ. ನಾಗಿ ಸುಬ್ರಮಣಿ ಜೊತೆ ಅನೋನ್ಯವಾಗಿದ್ದಾನೆ ಎಂಬ ಕ್ಷುಲಕ ಕಾರಣವನ್ನಿಟ್ಟು, ನಾಲ್ವರು ಸುಖ ನಿದ್ರೆಯಲ್ಲಿದ್ದಾಗ ಎತ್ತಿಬಿಟ್ಟಿದ್ದಾನೆ.
ಗಿರೀಶನ ಹುಚ್ಚಾಟಕ್ಕೆ ಕರಿಯ (75̧) ಗೌರಿ (70) ಹಾಗೂ ಕಾವೇರಿ (7) ಅನ್ಯಾಯವಾಗಿ ಪ್ರಾಣ ಕಳೆದುಕೊಂಡಿದ್ದಾರೆ.
ಶುಕ್ರವಾರ ಮಧ್ಯಾಹ್ನ ಸುಮಾರು 01.30ರ ಸುಮಾರಿಗೆ ಪೊನ್ನಂಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬೇಗೂರು ಗ್ರಾಮ ಬಾಳಂಗಾಡು ಪ್ರದೇಶದ ಒಂಟಿ ಮನೆಯಲ್ಲಿ ನಾಲ್ಕು ಜನರ ಭೀಕರ ಕೊಲೆಯಾಗಿತ್ತು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಮತ್ತು ಅಪರಾಧ ಪತ್ತೆ ತಜ್ಞರ ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಅಪರಾಧ ಕೃತ್ಯದ ಕುರಿತು ಮಾಹಿತಿ ಹಾಗೂ ಸಾಕ್ಷ್ಯಾಧಾರಗಳನ್ನು ಕಲೆ ಹಾಕಿದ್ದರು.
ಬಳಿಕ ದೂರುದಾರರು ನೀಡಿದ ಮಾಹಿತಿ ಅನ್ವಯ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಸಲಾಯಿತು. ತಲೆಮರೆಸಿಕೊಂಡಿರುವ ಆರೋಪಿ ಪತ್ತೆಗಾಗಿ ವಿರಾಜಪೇಟೆ ಉಪವಿಭಾಗ ಡಿಎಸ್‌ಪಿ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಿ ತನಿಖೆ ಕೈಗೊಂಡಿದ್ದರು. ಕೃತ್ಯ ನಡೆದ 6 ಗಂಟೆಯ ಒಳಗಾಗಿ ಕೇರಳದ ತಲಪುಳ ಎಂಬಲ್ಲಿ ಆರೋಪಿಯನ್ನು ಬಂಧಿಸಿದ್ದರು.