ಐಶ್ವರ್ಯಾ ರೈ ಕಾರ್‌ಗೆ ಬಸ್‌ ಢಿಕ್ಕಿ: ಸಿಟ್ಟಿನಿಂದ ಅಮಿತಾ ಬಚ್ಚನ್‌ ಬೌನ್ಸರ್‌ ಮಾಡಿದ್ದೇನು?

ಐಶ್ವರ್ಯಾ ರೈ ಕಾರ್‌ಗೆ ಬಸ್‌ ಢಿಕ್ಕಿ: ಸಿಟ್ಟಿನಿಂದ ಅಮಿತಾ ಬಚ್ಚನ್‌ ಬೌನ್ಸರ್‌ ಮಾಡಿದ್ದೇನು?

Aishwarya Rai

ಮುಂಬೈ: ಇಲ್ಲಿನ ಜುಹು ಉಪನಗರದಲ್ಲಿ ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಅವರ ಐಷಾರಾಮಿ ಕಾರಿಗೆ ಬಸ್ ಡಿಕ್ಕಿ ಹೊಡೆದಿದೆ. ಕಾರು ಅಪಘಾತದ ಬಳಿಕ ಅಮಿತಾಬ್ ಬಚ್ಚನ್ ಅವರ ನಿವಾಸದ ಬೌನ್ಸರ್ ಬಸ್ ಚಾಲಕನಿಗೆ ಕಪಾಳಕ್ಕೆ ಬಾರಿಸಿದ್ದಾನೆ ಎಂದು ಬೆಸ್ಟ್‌ ಸಂಸ್ಥೆಯ ಅಧಿಕಾರಿ ತಿಳಿಸಿದ್ದಾರೆ.

ಅದೃಷ್ಟವಶಾತ್‌ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Aaradhya runs to hug Aishwarya Rai at SIIMA 2024, touches Kannada actor Shiva Rajkumar's feet - India Today

ಮುಂಬೈನ ಎಲೆಕ್ಟ್ರಿಕ್‌ ಸಪ್ಲೈ ಅಂಡ್‌ ಟ್ರಾನ್ಸ್‌ಪೋರ್ಟ್‌ ಸಂಸ್ಥೆಯ ಬಸ್‌ ನಟಿಯ ಕಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ಸಂದರ್ಭದಲ್ಲಿ ನಟಿ ಕಾರಿನಲ್ಲಿ ಇರಲಿಲ್ಲ. ಆದ್ರೆ ನಂಬರ್‌ ಪ್ಲೇಟ್‌ ಪರಿಶೀಲಿಸಿದಾಗ ಅದು ಐಶ್ವರ್ಯ ರೈ ಅವರದ್ದೇ ಕಾರು ಎಂಬುದು ಗೊತ್ತಾಗಿದೆ.

ಅಪಘಾತ ದೃಶ್ಯದ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಒಂದಿಷ್ಟು ಹೈಡ್ರಾಮಾದ ಬಳಿಕ ಬೌನ್ಸರ್‌ ಪೊಲೀಸರ ಎದುರು ಚಾಲಕನ ಕ್ಷಮೆ ಕೋರಿದ್ದಾನೆ ಎಂಬುದಾಗಿ ತಿಳಿದುಬಂದಿದೆ.

error: Content is protected !!