ವಾರಾಂತ್ಯವನ್ನು ಸ್ವಲ್ಪ ರೋಮಾಂಚನಕಾರಿಯಾಗಿ ಕಳೆಯಲು ಗುಡ್ಡ ಹತ್ತುವುದೇ ಬೆಸ್ಟ್. ಗುಡ್ಡದ ಮೇಲೆ ಚಾರಣ ಮಾಡುವುದರಿಂದ ದೇಹವೂ ದಂಡಿಸಲ್ಪಡುತ್ತದೆ, ಮನಸ್ಸೂ ಹಗುರಾಗಿ ರಿಲ್ಯಾಕ್ಸ್ ಆಗುತ್ತದೆ. ಜೊತೆಗೆ ಪ್ರಕೃತಿಯ ಸುಂದರ ಹವ ನಿಮ್ಮ ಆರೋಗ್ಯಕ್ಕೆ ಉತ್ತಮ ಫಲಿತಾಂಶ ನೀಡುತ್ತದೆ. ವಾರಾಂತ್ಯವನ್ನು ರಿಲಾಕ್ಸ್ ಮೂಡಿಗೆ ತರಲು ಕೆಲವೊಂದು ಪ್ರಸಿದ್ಧ ಬೆಟ್ಟಗಳ ಪಟ್ಟಿ ಇಲ್ಲಿದೆ. ನಿಮ್ಮ ಫ್ರೆಂಡ್ಸ್ ಜೊತೆ ಒಮ್ಮೆ ಬೆಟ್ಟ ಹತ್ತಿ ನಿಮ್ಮ ಅನುಭವಗಳನ್ನು ನಮಗೆ ಕಮೆಂಟ್ ಮಾಡಿ..
ಬಿಳಿಗಿರಿರಂಗನಬೆಟ್ಟ : ಈ ಬೆಟ್ಟವು ಚಾಮರಾಜನಗರ ಜಿಲ್ಲೆಯ, ಯಳಂದೂರು ತಾಲೂಕಿನಲ್ಲಿದೆ. ಇದನ್ನು ಬಿ.ಆರ್. ಹಿಲ್ಸ್ ಎಂದು ಕೂಡ ಕರೆಯುತ್ತಾರೆ. ಇಲ್ಲಿ ಬಿಳಿಗಿರಿರಂಗನಾಥ ಸ್ವಾಮಿ ದೇವಾಲಯವಿದೆ. ಸ್ವಾಮಿ ನಿರ್ಮಲಾನಂದರು ಸ್ಥಾಪಿಸಿದ ವಿಶ್ವಶಾಂತಿ ಆಶ್ರಮ ಹಾಗೂ ಹೆಸರಾಂತ ಸಮಾಜ ಸೇವಕ ಡಾ. ಸುದರ್ಶನರವರು ಸ್ಥಾಪಿಸಿರುವ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರ’ ಗಳು ಇಲ್ಲಿವೆ.
ನಂದಿ ಬೆಟ್ಟ : ಇದು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಕ್ಕಬಳ್ಳಾಪುರ ತಾಲೂಕಿನಲ್ಲಿದೆ. ಬ್ರಿಟಿಷ್ ಕ್ಯಾಪ್ಟನ್ ಕನ್ನಿಂಗ್‍ಹಾಂನಿಂದ ನಿರ್ಮಿತವಾದ ‘ಓಕ್‍ಲ್ಯಾಂಡ್’ ಕಟ್ಟಡ ಇಲ್ಲಿದೆ. ಮಹಾತ್ಮಾಗಾಂಧಿಯವರು ಕರ್ನಾಟಕಕ್ಕೆ ಭೇಟಿ ನೀಡಿದಾಗ ಈ ಕಟ್ಟಡದಲ್ಲಿ ತಂಗಿದ್ದರು. ಹಾಗಾಗಿ ಇದಕ್ಕೆ ‘ಗಾಂಧಿ ನಿಲಯ’ ಎಂದು ಕರೆಯಲಾಗುತ್ತದೆ. ನಂದಿ ಬೆಟ್ಟದಿಂದ ಚಿತ್ರಾವತಿ, ಅರ್ಕಾವತಿ, ಪಾಪಾಗ್ನಿ ಮತ್ತು ಪಿನಾಕಿನಿ ನದಿಗಳು ಹುಟ್ಟುತ್ತವೆ.
ಬಾಬಾಬುಡನ್‍ಗಿರಿ : ಇದು ಚಿಕ್ಕಮಗಳೂರು ಜಿಲ್ಲೆಯ ಪಶ್ಚಿಮ ಘಟ್ಟ ಶ್ರೇಣಿಯಲ್ಲಿದ್ದು, ಇದು ಸಮುದ್ರ ಮಟ್ಟದಿಂದ ಎತ್ತರದಲ್ಲಿದೆ. ಈ ಗಿರಿಯಲ್ಲಿ ‘ದಾದ ಹಯಾತ್ ಖಲಂದರ್’ ಎಂಬ ಸಂತನ ‘ ದರ್ಗಾ’ ಮತ್ತು ‘ ದತ್ತಪೀಠ’ ಗಳು ಇವೆ. ವಿವಾದದಲ್ಲಿರುವ ಈ ಗುಡ್ಡ ಹತ್ತುವ ಮುನ್ನ ಎಚ್ಚರವಹಿಸೋದು ಸೂಕ್ತ
ಆದಿಚುಂಚನಗಿರಿ : ಇದು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿದೆ. ಈ ಬೆಟ್ಟದಲ್ಲಿ ಭೈರವೇಶ್ವರ ದೇವಸ್ಥಾನ ಮತ್ತು ಆದಿಚುಂಚನಗಿರಿ ಮಠಗಳಿವೆ.
ಆದಿಚುಂಚನಗಿರಿ : ಇದು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿದೆ. ಈ ಬೆಟ್ಟದಲ್ಲಿ ಭೈರವೇಶ್ವರ ದೇವಸ್ಥಾನ ಮತ್ತು ಆದಿಚುಂಚನಗಿರಿ ಮಠಗಳಿವೆ.
ಗೋಪಾಲಸ್ವಾಮಿ ಬೆಟ್ಟ : ಈ ಬೆಟ್ಟವು ಚಾಮರಾಜನಗರ ಜಿಲ್ಲೆಯ, ಗುಂಡ್ಲುಪೇಟೆ ತಾಲೂಕಿನಲ್ಲಿದೆ. ಬಂಡೀಪುರ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಗೆ ಸೇರಿರುವ ಈ ಬೆಟ್ಟದ ಮೇಲೆ ಶ್ರೀ ಗೋಪಾಲಸ್ವಾಮಿ ದೇವಸ್ಥಾನವಿದೆ.
ಮುಳ್ಳಯ್ಯನಗಿರಿ : ಕರ್ನಾಟಕದ ಅತ್ಯಂತ ಎತ್ತರವಾದ ಶಿಖರವಾದ ಮುಳ್ಳಯ್ಯನಗಿರಿಯು ಚಿಕ್ಕಮಗಳೂರು ಜಿಲ್ಲಿಯಲ್ಲಿದ್ದು, ಸಮುದ್ರ ಮಟ್ಟದಿಂದ 1925 ಮೀ ಎತ್ತರದಲ್ಲಿದೆ. ಚಾರಣಿಗರ ನೆಚ್ಚಿನ ತಾಣವಾಗಿರುವ ಮುಳ್ಳಯ್ಯನಗಿರಿಗೆ ಹಲವು ಪ್ರವಾಸಿಗರು ಆಗಮಿಸುತ್ತಾರೆ.
ಆದಿಚುಂಚನಗಿರಿ : ಇದು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿದೆ. ಈ ಬೆಟ್ಟದಲ್ಲಿ ಭೈರವೇಶ್ವರ ದೇವಸ್ಥಾನ ಮತ್ತು ಆದಿಚುಂಚನಗಿರಿ ಮಠಗಳಿವೆ.
ಮಲೈ ಮಹದೇಶ್ವರ ಬೆಟ್ಟ : ‘ಏಳು ಮಲೆ’ ಎಂದು ಕರೆಯಲ್ಪಡುವ ಮಲೈ ಮಹದೇಶ್ವರ ಬೆಟ್ಟವು ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲ್ಲೂಕಿನಲ್ಲಿದೆ. ಸಂಪದ್ಭರಿತ ಅರಣ್ಯ ಆವರಿಸಿರುವ ಈ ಬೆಟ್ಟದ ಮೇಲೆ ‘ಮಲೈ ಮಹದೇಶ್ವರ ಸ್ವಾಮಿ’ ದೇವಸ್ಥಾನವಿದೆ.
ಚಾಮುಂಡಿಬೆಟ್ಟ : ಮೈಸೂರು ನಗರಕ್ಕೆ ತೀರಾ ಹತ್ತಿರದಲ್ಲಿರುವ ಇದು, ಈ ಹಿಂದೆ ಮಬ್ರ್ಬಳ ತೀರ್ಥವೆಂದು ಕರೆಯಲ್ಪಡುತ್ತಿದ್ದ ಈ ಬೆಟ್ಟದ ಮೇಲೆ ಪ್ರಸಿದ್ಧ ಚಾಮುಂಡೇಶ್ವರಿ ದೇವಾಲಯ ಮತ್ತು ಮಹಿಷಾಸುರನ ಮೂರ್ತಿಗಳು ಇವೆ. ಸಾವಿರ ಮೆಟ್ಟಿಲುಗಳನ್ನು ಹೊಂದಿರುವ ಈ ಬೆಟ್ಟದ ಮೆಟ್ಟಿಲ ಬಳಿ ಕರ್ನಾಟಕದ ಬೃಹತ್ ನಂದಿ ವಿಗ್ರಹವಿದೆ.
ಕೊಡಚಾದ್ರಿ ಬೆಟ್ಟಗಳು : ಈ ಬೆಟ್ಟವು ಶಿವಮೊಗ್ಗ ಜಿಲ್ಲೆಯಲ್ಲಿದೆ. ಇದು ನಿಸರ್ಗ ಸೌಂದರ್ಯಕ್ಕೆ ತುಂಬಾ ಹೆಸರುವಾಸಿಯಾಗಿದೆ. ಈ ಬೆಟ್ಟ ಪ್ರಮುಖವಾದ ಹಾಗೂ ಪ್ರಸಿದ್ಧವಾದ ಯಾತ್ರ ಸ್ಥಳವಾದ ಕೊಲ್ಲೂರು ಮೂಕಾಂಬಿಕ ದೇವಸ್ಥಾನದ ಹಿನ್ನಲೆಯಲ್ಲಿದೆ.
ಆದಿಚುಂಚನಗಿರಿ : ಇದು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನಲ್ಲಿದೆ. ಈ ಬೆಟ್ಟದಲ್ಲಿ ಭೈರವೇಶ್ವರ ದೇವಸ್ಥಾನ ಮತ್ತು ಆದಿಚುಂಚನಗಿರಿ ಮಠಗಳಿವೆ.
ಜೇನುಕಲ್ಲು ಗುಡ್ಡ : ಹಾಸನ ಜಿಲ್ಲೆಯ ಸಕಲೇಶಪುರದಿಂದ ಸುಮಾರು 29 ಕಿ.ಮೀ ದೂರವಿರುವ ಈ ಗುಡ್ಡ ಪಶ್ಚಿಮ ಘಟ್ಟಗಳ ವ್ಯಾಪ್ತಿಯಲ್ಲಿದೆ.
ಮುಳ್ಳಯ್ಯನಗಿರಿ: ಪಶ್ಚಿಮಘಟ್ಟಗಳು ಮೊದಲೆ ಮಾದಕ ಪ್ರಕೃತಿ ಸೌಂದರ್ಯ ರಾಶಿಯಿಂದ ಕೂಡಿರುವ ಬೆಟ್ಟ-ಗುಡ್ಡ-ಪರ್ವತಗಳ ಶ್ರೇಣಿ. ಚಂದ್ರದ್ರೋಣ ಪರ್ವತ ಶ್ರೇಣಿಯ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಮುಳ್ಳಯ್ಯನಗಿ ಕರ್ನಾಟಕದ ಅತಿ ಎತ್ತರದ ಪರ್ವತ ಶಿಖರ.
ತಡಿಯಾಂಡಮೋಲ್: ತಡಿಯಾಂಡಮೋಲ್, ಕೊಡಗಿನ ಅತ್ಯಂತ ಎತ್ತರದ, ಕರ್ನಾಟಕದ 2ನೇ ಅತ್ಯಂತ ಎತ್ತರದ ಶಿಖರವಾಗಿದೆ. ತಡಿಯಾಂಡಮೋಲ್ ಎಂಬುದು ಮಲೆಯಾಳಂ ಮೂಲದ ಪದವಾಗಿದ್ದು, ಇದರ ಅರ್ಥ ವಿಶಾಲವಾದದ್ದು ಮತ್ತು ಎತ್ತರವಾದದ್ದು ಎಂದು.
ಹಿಮವದ್ ಗೋಪಾಲಸ್ವಾಮಿ ಬೆಟ್ಟ : ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಬರುವ ಗೋಪಾಲಸ್ವಾಮಿ ಬೆಟ್ಟವು ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿನ ಅತಿ ಎತ್ತರದ ಪ್ರದೇಶವಾಗಿದ್ದು ಬೆಟ್ಟದ ತುದಿಯಲ್ಲಿ ವೇಣುಗೋಪಾಲಸ್ವಾಮಿಯ ದೇವಸ್ಥಾನವಿದೆ.
ಕೆಮ್ಮಣ್ಣುಗುಂಡಿ : ಕೆಮ್ಮಣ್ಣುಗುಂಡಿ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿರುವ ಅತ್ಯುತ್ತಮ ನಿಸರ್ಗಧಾಮ. ಕೆಮ್ಮಣ್ಣುಗುಂಡಿ ದಟ್ಟ ಹಸುರಿನ ಸುಂದರ ಬೆಟ್ಟಗುಡ್ಡಗಳಲ್ಲಿ ನಿಸರ್ಗ ನಿರ್ಮಿತ ಜಲಪಾತಗಳಿವೆ.
ಬ್ರಹ್ಮಗಿರಿ : ಈ ಪರ್ವತ ಪ್ರದೇಶವು ಕರ್ನಾಟಕದ ಕೊಡಗು ಹಾಗೂ ಕೇರಳದ ವಯನಾಡ್ ಜಿಲ್ಲೆಗಳ ಗಡಿಗಳಲ್ಲಿ ಕಂಡುಬರುತ್ತದೆ. ಎರಡೂ ರಾಜ್ಯಗಳ ಭಾಗದಿಂದ ಬ್ರಹ್ಮಗಿರಿಯನ್ನು ಟ್ರೆಕ್ಕಿಂಗ್ ಮುಖಾಂತರ ಮಾತ್ರವೆ ತಲುಪಬಹುದು.
ಹೇಮಕೂಟ : ಬಳ್ಳಾರಿ ಜಿಲ್ಲೆಯ ಹಂಪಿಯ ದಕ್ಷಿಣಕ್ಕೆ ಹೇಮಕೂಟ ಬೆಟ್ಟವಿದೆ. ಕಲ್ಲು ಬಂಡೆಗಳಿರುವ ಬೆಟ್ಟ ಪ್ರದೇಶದಲ್ಲಿ ವಿಜಯನಗರ ಕಾ ಪುರಾತನ ದೇಗುಲಗಳಿವೆ.