ಮಾ.15-16: ಸಂತ ಆಗ್ನೆಸ್ ಕಾಲೇಜಿನಲ್ಲಿ “ವಿಕಸಿತ ಭಾರತ ಯುವ ಸಂಸತ್ತು”

ಮಂಗಳೂರು: ದಕ್ಷಿಣ ಕನ್ನಡ, ಉಡುಪಿ ಹಾಗೂ ಕೊಡಗು ಜಿಲ್ಲೆಗಳನ್ನೊಳಗೊಂಡ ವಿಕಸಿತ ಭಾರತ ಯುವ ಸಂಸತ್ತು ಕಾರ್ಯಕ್ರಮವು ಮಾ.15 ಮತ್ತು 16ರಂದು ಸಂತ ಆಗ್ನೆಸ್ ಕಾಲೇಜು ಮಂಗಳೂರಿನಲ್ಲಿ ನಡೆಯಲಿದೆ ಎಂದು ಕಾಲೇಜು ಪ್ರಾಂಶುಪಾಲೆ ಡಾ.ವೆನೆಸ್ಸಾ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.
ದೇಶದ 300ಕ್ಕೂ ಹೆಚ್ಚು ನೋಡಲ್ ಜಿಲ್ಲೆಗಳಲ್ಲಿ ಈ ಕಾರ್ಯಕ್ರಮ ಆಯೋಜಿಸುತ್ತಿದ್ದು, ಕೇಂದ್ರ ಯುವಕಾರ್ಯ ಮತ್ತು ಕ್ರೀಡಾ ಸಚಿವಾಲಯ, ಮೈ ಭಾರತ್, ನೆಹರು ಯುವ ಕೇಂದ್ರ ಹಾಗು ಮಂಗಳೂರು ವಿಶ್ವ ವಿದ್ಯಾನಿಲಯ, ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಸಂತ ಆಗ್ನೆಸ್‌ ಕಾಲೇಜು (ಸ್ವಾಯತ್ತ), ಮಂಗಳೂರಿನಲ್ಲಿ ನಡೆಸಲು ತೀರ್ಮಾನಿಸಲಾಗಿದೆ.
18 ರಿಂದ 25 ವರ್ಷದೊಳಗಿನ ಯುವಜನರು ಮಾರ್ಚ್ 9ರೊಳಗೆ ಮೈ ಭಾರತ್ ಪೋರ್ಟಲ್‌ನಲ್ಲಿ ನೋಂದಾಯಿಸಬೇಕು ಮೊದಲ ಹಂತದಲ್ಲಿ ತಮ್ಮ ದೃಷ್ಟಿಯಲ್ಲಿ ವಿಕಾಸ ಭಾರತವೆಂದರೆ ಏನೆಂಬ’ ವಿಷಯದ ಕುರಿತು ಒಂದು ನಿಮಿಷದ ವೀಡಿಯೋ ಅಪ್‌ಲೋಡ್ ಮಾಡಬೇಕು. ಎರಡನೇ ಹಂತದಲ್ಲಿ ಈ ವೀಡಿಯೋ ತುಣುಕುಗಳನ್ನು ಸ್ತ್ರೀನಿಂಗ್ ಕಮಿಟಿಯವರು ಮಾ. 10ರ ನಂತರ ಮೂರು ಜಿಲ್ಲೆಗಳಿಂದ ತಲಾ 50ರಂತೆ 150 ಯುವಜನರನ್ನು ಆಯ್ಕೆ ಮಾಡಲಿದ್ದಾರೆ.
ಆಯ್ಕೆಗೊಂಡ 150 ಯುವಜನರು ‘ಒಂದು ದೇಶ ಒಂದು ಚುನಾವಣೆ” ಎಂಬ ವಿಷಯದ ಕುರಿತು ಪ್ರತೀ ಸ್ಪರ್ಧಿಗೆ ಮೂರು ನಿಮಿಷಗಳ ಭಾಷಣ ಸ್ಪರ್ಧೆಯನ್ನು ಸಂತ ಆಗ್ನೆಸ್ ಕಾಲೇಜು (ಸ್ವಾಯತ್ತ), ಮಂಗಳೂರಿನಲ್ಲಿ ದಿನಾಂಕ 15 ಮತ್ತು 16ರ ಮಾರ್ಚ್ 2025 ರಂದು ನಡೆಸಲಾಗುತ್ತದೆ.
ಐವರು ತೀರ್ಪುಗಾರರ ಸಮಿತಿಯು ಹತ್ತು ವಿಜೇತರನ್ನು ಜಿಲ್ಲೆಯಿಂದ ರಾಜ್ಯ ಮಟ್ಟಕ್ಕೆ ಆಯ್ಕೆ ಮಾಡಲಿದೆ. “ಯುವ ಸಮೂಹಕ್ಕೆ ದೇಶದ ಸಂವಿಧಾನ ಸಂಸತ್ತಿನ ಕುರಿತು ಅರಿವು ಉಂಟು ಮಾಡುವ ಉದ್ದೇಶ ಇದರದ್ದಾಗಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ರಾಷ್ಟ್ರೀಯ ಸೇವಾ ಯೋಜನೆ ಸಂಯೋಜನ ಅಧಿಕಾರಿ ಶೇಷಪ್ಪ ಅಮೀನ್, ಡಾ ಉದಯ್ ಕುಮಾರ್, ಲೋಕೇಶ್ ಕುಮಾರ್, ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!