ವೈಟ್ ಫಿಲ್ದ್ , ಬೆಂಗಳೂರು : ಮಹಿಳೆಯರ ಮಾಸಿಕ ಋತುಚಕ್ರದ ನೋವು ಸಹಿಸೋದು ಕಷ್ಟಸಾಧ್ಯ. ಈ ರೀತಿಯ ನೋವು ಅನುಭವಿಸುತ್ತಿದ್ದ ರೋಗಿಯೊಬ್ಬರು ಮೆಡಿಕವರ್ ಆಸ್ಪತ್ರೆಗೆ ಬಂದು ಶಾಶ್ವತ ಪರಿಹಾರ ಕಂಡುಕೊಂಡಿದ್ದಾರೆ.
ಮೆಡಿಕವರ್ ಆಸ್ಪತ್ರೆ ಸ್ತ್ರೀ ರೋಗ ತಜ್ಞೆ ಡಾ. ಜಕ್ಕ ಸಾಯಿ ಮಾನಸ ರೆಡ್ಡಿಯವರು ಋತುಚಕ್ರ ನೋವಿನ ಸಮಸ್ಯಗೆ ಶಾಶ್ವತ ಪರಿಹಾರ ನೀಡಿದ್ದಾರೆ.
41 ವರ್ಷದ ಮಹಿಳೆ ಕಳೆದ ಒಂದು ವರ್ಷದಿಂದ ರಕ್ತಸ್ರಾವ ಹಾಗೂ ಹೊಟ್ಟೆನೋವಿನ ಸಮಸ್ಯೆಯಿಂದ ಬಳಲುತ್ತಾ ಇದ್ದರು . ಅನಿಯಮಿತ ಋತುಚಕ್ರ, ತಿಂಗಳಲ್ಲಿ15 ದಿನಕ್ಕೂ ಹೆಚ್ಚು ಕಾಲ ಭಾರೀ ರಕ್ತಸ್ರಾವ ಮತ್ತು ಹೊಟ್ಟೆ ನೋವು ಅನುಭವಿಸುತ್ತಿದ್ದರು. ಅವರ ಸಮಸ್ಯೆಯನ್ನು ಪರಿಹಾರ ಮಾಡಲು ಬೇರೆ ಆಸ್ಪತ್ರೆಯಲ್ಲಿ ಹಿಸ್ಟೆರೋಸ್ಕೋಪಿಕ್ ಡಿ&ಸಿ ಮತ್ತು ಮಿರೆನಾ ಅಳವಡಿಕೆ ನಿಯಂತ್ರಣಗೊಂಡಿಲ್ಲ.
ಹೀಗಾಗಿ ಆ ಮಹಿಳೆ ಮೆಡಿಕವರ್ ಆಸ್ಪತ್ರೆಗೆ ಬಂದು ತಮ್ಮ ಕಷ್ಟವನ್ನ ಹೇಳಿಕೊಂಡಿದ್ದಾರೆ. ಮೆಡಿಕವರ್ ಆಸ್ಪತ್ರೆಯಲ್ಲಿನ ಡಾ. ಮಾನಸ ರೆಡ್ಡಿಯವರನ್ನು ಭೇಟಿ ಮಾಡಿ , ಅಸಾಮಾನ್ಯ ಗರ್ಭಾಶಯ ರಕ್ತಸ್ರಾವ (AUB-A) ಮತ್ತು ಎಡಭಾಗದ ಅಂಡಾಶಯ ಸಿಸ್ಟ್ ಹೊಂದಿದ್ದ ರೋಗಿಗೆ ರೊಬೋಟಿಕ್ ಗರ್ಭಾಶಯ ಶಸ್ತ್ರಚಿಕಿತ್ಸೆ (BSO)ಯನ್ನು ಯಶ್ವಸಿಯಾಗಿ ನಡೆಸಲಾಯಿತು. ಈ ಚಿಕಿತ್ಸೆ ಮೂಲಕ ಕಡಿಮೆ ನೋವು ಹಾಗೂ ಬೇಗ ಗುಣಮುಖರಾಗುವುದಕ್ಕೆ ಸಾಧ್ಯವಾಯಿತು.
ಅಸಾಮಾನ್ಯ ಗರ್ಭಾಶಯ ರಕ್ತಸ್ರಾವ (AUB-A)ಗೆ ಹಾರ್ಮೋನ್ ಅಸಮಾತೋಲನ ಮೂಲ ಕಾರಣವೇಂದು ವೈದ್ಯರಿಗೆ ತಿಳಿದು ಬಂದಿದೆ . ಶಸ್ತ್ರ ಚಿಕಿತ್ಸೆ ನಡೆಸುವಾಗ ಅವರ ಗರ್ಭಾಶಯದ ಅಳತೆ 8 ವಾರಗಳ ಗರ್ಭದಾರಣೆಯಷ್ಟು ಬೃಹತ್ ಆಗಿತ್ತು. ಎಡ ಅಂಡಾಶಯದಸಿಸ್ಟ್ 3 x 2 ಸೆಂ.ಮೀ ಇತ್ತು . ರೋಬೊಟಿಕ್ ಮೂಲಕ ಶಸ್ತ್ರಚಿಕಿತ್ಸೆ ಮಾಡಿದ ಕಾರಣ ರಕ್ತಹಾನಿ ಕೇವಲ 300 ಎಂ ಎಲ್ ಅಷ್ಟು ಆಗಿತ್ತು. ಅಲ್ಲದೇ ಯಾವುದೇ ಜಟಿಲತೆ ಇಲ್ಲದೇ ರೋಗಿಯೂ ಕೂಡ ಆರಾಮದಾಯಕವಾಗಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ .
ರೊಬೋಟಿಕ್ ಶಸ್ತ್ರಚಿಕಿತ್ಸೆಯು ಹೆಚ್ಚಿನ ನಿಖರತೆ, ಉತ್ತಮ ಗುಣಮುಖತೆ ನೀಡುತ್ತದೆ. ಈ ರೀತಿಯ ತಂತ್ರಜ್ಞಾನ ಮಹಿಳೆಯರ ಆರೋಗ್ಯ ಸಂರಕ್ಷಣೆಗಾಗಿ ಬಹಳ ಮುಖ್ಯವಾಗಿದೆ ಎಂದು ಸ್ತ್ರಿ ರೋಗ ತಜ್ಞೆ ಅಭಿಪ್ರಾಯ ಪಟ್ಟಿದ್ದಾರೆ .ರೋಗಿ ಸಹ ಗುಣಮುಖರಾಗಿ, ಮೆಡಿಕವರ್ ಆಸ್ಪತ್ರೆಗೆ ಹಾಗೂ ವೈದ್ಯರಿಗೆ ಧನ್ಯವಾದ ತಿಳಿಸಿದ್ದಾರೆ.