©️ಶಶಿ ಬೆಳ್ಳಾಯರು
ಮಂಗಳೂರು: ಅವಿಕಾ ಪ್ರೊಡಕ್ಷನ್ ಬ್ಯಾನರ್ ನಲ್ಲಿ ನಿರ್ಮಾಣವಾಗಲಿರುವ “ಟಾಸ್” ತುಳು ಕನ್ನಡ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು ತುಳುವರು ಶಹಾಬ್ಬಾಸ್ ನೀಡಿದ್ದಾರೆ.
ಡಾ.ದೇವದಾಸ್ ಕಾಪಿಕಾಡ್ ಕಥೆ ಚಿತ್ರಕತೆ ಸಂಭಾಷಣೆ ಬರೆದಿರುವ ಟಾಸ್ ಸಿನಿಮಾದಲ್ಲಿ ಅರ್ಜುನ್ ಕಾಪಿಕಾಡ್ ಪ್ರಧಾನ ಭೂಮಿಕೆಯಲ್ಲಿದ್ದು ಅವರೇ ನಿರ್ದೇಶನ ಮಾಡುತ್ತಿದ್ದಾರೆ. ಹಿರಿಯ ರಂಗಭೂಮಿ ಕಲಾವಿದ, ಸಾಹಿತಿ ಶಶಿರಾಜ್ ರಾವ್ ಕಾವೂರು ಸಿನಿಮಾದಲ್ಲಿ ಖಡಕ್ ವಿಲನ್ ಪಾತ್ರದಲ್ಲಿರುವ ಸುಳಿವನ್ನು ನೀಡಿದ್ದು ಟೀಸರ್ ನಲ್ಲಿ ಅವರ ರಗಡ್ ಲುಕ್ ಎಲ್ಲರ ಗಮನ ಸೆಳೆಯುವಂತಿದೆ.
ಸಿನಿಮಾದ ಚಿತ್ರೀಕರಣ ಶೀಘ್ರದಲ್ಲಿ ಆರಂಭವಾಗಲಿದ್ದು ಸಿನಿಮಾಕ್ಕೆ ಪಿ ಆಂಡ್ ವೈ ವರ್ಲ್ಡ್ ಟೂರ್ ಹಾಗೂ ಸಾಗರ್ ಪೂಜಾರಿ ಬಂಡವಾಳ ಹೂಡಿದ್ದಾರೆ. ಕದ್ರಿ ಮಣಿಕಾಂತ್ ಸಿನಿಮಾಕ್ಕೆ ಸಂಗೀತ ನಿರ್ದೇಶಕರಾಗಿದ್ದಾರೆ. ಜೊಯೆಲ್ ಶಮಿನ್ ಡಿಸೋಜ ಕೆಮರಾಮ್ಯಾನ್ ಆಗಿದ್ದಾರೆ.
ಅರ್ಜುನ್ ಕಾಪಿಕಾಡ್, ಕದ್ರಿ ಮಣಿಕಾಂತ್, ಡಾ.ದೇವದಾಸ್ ದೇವದಾಸ್ ಮತ್ತೊಮ್ಮೆ ಟಾಸ್ ಮೂಲಕ ಒಂದಾಗಿದ್ದು ಈ ಬಾರಿ ತುಳುವರಿಗೆ ಮಾತ್ರವಲ್ಲದೆ ಕನ್ನಡ ಸಿನಿಮಾ ಪ್ರೇಮಿಗಳಿಗೂ ರಸದೌತಣ ನೀಡಲು ಚಿತ್ರತಂಡ ಸಜ್ಜಾಗಿದೆ. ಸಿನಿಮಾ ಟೈಟಲ್ ಟೀಸರ್ ತುಳು ಚಿತ್ರರಂಗದಲ್ಲಿ ಹವಾ ಎಬ್ಬಿಸಿದ್ದು ಆದಷ್ಟು ಶೀಘ್ರದಲ್ಲಿ ಸಿನಿಮಾ ಚಿತ್ರೀಕರಣ ಮುಗಿಸಿ ತೆರೆಗೆ ಬರುವ ಸುಳಿವನ್ನು ಚಿತ್ರತಂಡ ನೀಡಿದೆ.