ಮಂಗಳೂರು: “ಸ್ನಾತಕೋತ್ತರ ಪದವಿ ಕೌನ್ಸಿಲಿಂಗ್ ವಿಭಾಗ, ಸ್ಕೂಲ್ ಆಫ್ ಸೋಶಿಯಲ್ ವರ್ಕ್, ರೋಶನಿ ನಿಲಯ ಮತ್ತು ಆಂತರಿಕ ಗುಣಮಟ್ಟ ಭರವಸೆ ಕೋಶ (IQAC) ಸಹಯೋಗದಲ್ಲಿ “PERCEPTIO ಕ್ರೇಫ್ಟಿಂಗ್ Reality with the Mind’s Eye” ಎಂಬ ವಿಷಯಾಧಾರಿತ ರಾಷ್ಟ್ರೀಯ ಸಮ್ಮೇಳನ ಸಿಂಟಿಲ್ಲ 2025 ಅನ್ನು ಫೆಬ್ರವರಿ 21 ಮತ್ತು 22ರಂದು ಕಾಲೇಜಿನ ಆವರಣದಲ್ಲಿ ಆಯೋಜಿಸಲಾಗಿದೆ“ ಎಂದು ಹೆಚ್ ಓಡಿ ಡಾ.ರೋಜಾ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.
SCINTILLA 2025 ಪ್ರಮುಖ ಅಂಶಗಳು:
ತಾಂತ್ರಿಕ ಅಧಿವೇಶನಗಳು ಮಾಧ್ಯಮ ಪ್ರಭಾವ, ಮಾನಸಿಕ ಆರೋಗ್ಯ, ಗುರುತು ಮತ್ತು ಮಾರ್ಕೆಟಿಂಗ್ ಗ್ರಹಿಕೆಗಳ ಬಗ್ಗೆ ಚರ್ಚೆಗಳು,
ಶೋಧ ಪತ್ರ ಪ್ರಸ್ತುತಿ
“ತಂತ್ರಜ್ಞಾನ ಮಾನವ ಗ್ರಹಿಕೆಗೆ ಇರುವ ಪ್ರಭಾವ,” “ಮಾಯೆಯ ಗ್ರಹಿಕೆ,” “ಸಾಮಾಜಿಕ ಪಾಂಗತ ಮತ್ತು ಗ್ರಹಿಕೆ” ಮೊದಲಾದ ಉಪ ಶೀರ್ಷಿಕೆಗಳ ಮೇಲೆ ಸಂಶೋಧನಾ ಪ್ರಬಂಧಗಳು.
ಸ್ಪರ್ಧೆಗಳು – ರಚನಾತ್ಮಕತೆ ಮತ್ತು ಬೌದ್ಧಿಕ ಚಟುವಟಿಕೆಗಳನ್ನು ಉತ್ತೇಜಿಸುವ ಅವಕಾಶ.
ಶೋಧಪತ್ರ ಆಹ್ವಾನ:
ಶೋಧಕರು ಮತ್ತು ವಿದ್ಯಾರ್ಥಿಗಳು ಜನವರಿ 7, 2025ರೊಳಗಾಗಿ 250 ಪದಗಳ ಸಂಕ್ಷಿಪ್ತ ಸಾರಾಂಶವನ್ನು ಕಳುಹಿಸುವುದು. ಫೆಬ್ರವರಿ 7 2025ರೊಳಗಾಗಿ ಅಂಗೀಕರಿಸಲಾದ ಸಂಪೂರ್ಣ ಪೇಪರ್ ಅನ್ನು ನಿಗದಿತ ಶೈಲಿಯಲ್ಲಿ ಸಲ್ಲಿಸಬೇಕು.
ನೋಂದಣಿ ವಿವರಗಳು:
ವಿದ್ಯಾರ್ಥಿಗಳು: 600 ರೂ.
ಸಂಶೋಧನಾರ್ಥಿಗಳು: 700 ರೂ.
ಉಪನ್ಯಾಸಕರು: 900 ರೂ.
ಸಂಪರ್ಕ ಮಾಹಿತಿ:
sswmscscintilla@gmail.com
ಸಂಯೋಜಕರು:
ಥಾನಿ ಅನ್ವರ್ (+91 97318 32553)
ಡಾ.ವಿಲ್ಲಿ ಫ್ರಾನ್ಸಿಸ್ (+91 75589 40907)
ವಿದ್ಯಾರ್ಥಿ ಸಂಯೋಜಕರು:
ಅಲಿಮಾಬಾಜಿ (+91 94818 43622)
(+91 63660 53080)
ಈ ವರ್ಷ ಎಂ ಆರ್ ಪಿ ಎಲ್ ಜೊತೆ ಪಾಲುದಾರಿಕೆಯಲಿ ನಿರ್ವಹಿಸುತ್ತಿದ್ದು, ಮಾನಸಿಕ ಆರೋಗ್ಯ, ಮನಃಶಾಸ್ತ್ರ ಮತ್ತು ಗ್ರಹಿಕೆಯ ಅಧ್ಯಯನದಲ್ಲಿ ಬೌದ್ಧಿಕ ಚರ್ಚೆ ಮತ್ತು ನಾವೀನ್ಯತೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತಿದೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಟಿಯಲ್ಲಿ ಡಾ.ಮೀನಾ ಮೊಂತೇರೋ, ಡಾ.ಸೆಬಸ್ಟಿಯನ್ ಕೆ.ವಿ., ಥಾನಿ ಅನ್ವರ್, ಅಲಿಮಾಬಾಜಿ, ಮಿತ್ರಾ, ಸ್ವಾಲಿಹಾ ಮತ್ತಿತರರು ಉಪಸ್ಥಿತರಿದ್ದರು.