ಫೆ.28ರಿಂದ ಮಾ.3ರವರೆಗೆ “ನಿರ್ದಿಗಂತ ಉತ್ಸವ“

ಮಂಗಳೂರು: ನಿರ್ದಿಗಂತ ಸಂಸ್ಥೆಯಿಂದ ಫೆಬ್ರವರಿ 28ರಿಂದ ಮಾರ್ಚ್ 3ರವರೆಗೆ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ `ನಿರ್ದಿಗಂತ ಉತ್ಸವ’
ರಂಗಹಬ್ಬವನ್ನು ಆಯೋಜಿಸುತ್ತಿದ್ದು, ರಾಜ್ಯದ ನಾನಾ ಭಾಗದಿಂದ ಕಲಾತಂಡಗಳು, ಕಲಾವಿದರು, ಸಾಹಿತಿಗಳು ಆಗಮಿಸಿ ನಾಟಕ, ಸಂಗೀತ ಮತ್ತು ಗೋಷ್ಠಿಗಳನ್ನು ನಡೆಸಲಿದ್ದಾರೆ“ ಎಂದು ನಟ ಪ್ರಕಾಶ್ ರಾಜ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

”ಸೌಹಾರ್ದದ ಬಳಿ ನಮ್ಮ ಕರಾವಳಿ ಎಂಬ ಶೀರ್ಶಿಕೆಯಡಿ ಕಲೆಯ ಮೂಲಕ ಭಾವೈಕ್ಯತೆಯ ಸಾರುವ ಆಶಯ ಹೊತ್ತು ಮತ್ತು ಕರಾವಳಿಯ ರಂಗಭೂಮಿಯ ತಲುಪುವ ನಿಟ್ಟಿನಲ್ಲಿ ತುಳು ಹಾಗು ಕೊಂಕಣಿ ನಾಟಕಗಳನ್ನು ಒಳಗೊಂಡು ಈ ಬಾರಿಯ ಉತ್ಸವವನ್ನು ರೂಪಿಸಲಾಗಿದೆ. ಕಳೆದ ವರ್ಷವೂ ನಡೆದಿದ್ದ ನಮ್ಮ ರಂಗೋತ್ಸವದಲ್ಲಿ ಜನ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಅದರ ಯಶಸ್ಸಿಗೆ ಕಾರಣರಾಗಿದ್ದಾರೆ“ ಎಂದರು.
ಪತ್ರಿಕಾಗೋಷ್ಠಿಯಲ್ಲಿ ವಿದ್ದು ಉಚ್ಚಿಲ, ಅನುಷ್ ಶೆಟ್ಟಿ, ಕ್ರಿಸ್ಟಿ ಉಪಸ್ಥಿತರಿದ್ದರು.

error: Content is protected !!