ಸುರತ್ಕಲ್ ನಲ್ಲಿ ಯಕ್ಷದ್ಯುತಿ ಕಾರ್ಯಕ್ರಮ

ಪೂರ್ಣಿಮಾ ಯತೀಶ್ ರೈಯವರ 35 ವರ್ಷಗಳ ಯಕ್ಷಗಾನದ ಸಂಭ್ರಮ
ಸುರತ್ಕಲ್: ಯಕ್ಷಗಾನ ದಕ್ಷಿಣ ಕನ್ನಡ ಜಿಲ್ಲೆಯ ಗಂಡುಕಲೆ. ಆದರೆ ಈಗ ಮಹಿಳೆಯರೂ ಯಕ್ಷಗಾನದಲ್ಲಿ ತಮ್ಮನ್ನು ತೊಡಗಿಸಿ ಕೊಳ್ಳುವ ಮೂಲಕ ಯಕ್ಷಗಾನವನ್ನು ಇನ್ನಷ್ಟು ಶ್ರೀಮಂತಗೊಳಿಸಿದ್ದಾರೆ ಎಂದು ಶ್ರೀ ಗುರುದೇವದತ್ತ ಸಂಸ್ಥಾಮ್ ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮಿಜಿ ನುಡಿದರು.

ಸುರತ್ಕಲ್ ಗೋವಿಂದದಾಸ ಕಾಲೇಜ್ ನಲ್ಲಿ ಯಕ್ಷ ದ್ಯುತಿ ಅಭಿನಂದನಾ ಸಮಿತಿ ಮತ್ತು ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇದರ ಆಶ್ರಯದಲ್ಲಿ ನಡೆದ ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ ಪುರಸ್ಕೃತೆ ಪೂರ್ಣಿಮಾ ಯತೀಶ್ ರೈಯವರ 35 ವರುಷಗಳ ಯಕ್ಷಯಾನದ ಸಂಭ್ರಮ ಯಕ್ಷದ್ಯುತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಯಕ್ಷಗಾನದ ಮೂಲಕ ಮಕ್ಕಳಲ್ಲಿ ಅರಿವು ಮೂಡಿಸುವ ಕೆಲಸ ನಡೆಯಬೇಕಾಗಿದೆ. ಯಕ್ಷಗಾನದಿಂದ ಸಂಸ್ಕೃತಿ ಆಚಾರ, ವಿಚಾರಗಳನ್ನು ತಿಳಿಯ ಬಹುದಾಗಿದೆ ಎಂದರು.
ಸಮಾರಂಭದಲ್ಲಿ ಹರಿನಾರಾಯಣ ದಾಸ ಅಸ್ರಣ್ಣ, ನಾಗೇಂದ್ರ ಭಾರದ್ವಾಜ್, ಕರುಣಾಕರ ಎಂ ಶೆಟ್ಟಿ ಮಧ್ಯಗುತ್ತು, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಭುಜಬಲಿ ಧರ್ಮಸ್ಥಳ, ಪಟ್ಲ ಸತೀಶ್ ಶೆಟ್ಟಿ, ಶ್ರೀಪತಿ ಭಟ್ ಮೂಡಬಿದ್ರೆ, ಸುಧಾಕರ ಪೂಂಜ, ಉಲ್ಲಾಸ್ ಶೆಟ್ಟಿ ಪೆರ್ಮುದೆ, ಯಶಸ್ವಿನಿ ಶೆಟ್ಟಿ, ಪುರಂದರ ರೈ ಮಿತ್ರಂಪಾಡಿ, ಚಿತ್ತರಂಜನ್ ರೈ ನುಳಿಯಾಲು, ದೇವಿಪ್ರಸಾದ್ ಶೆಟ್ಟಿ ಬೆಂಗಳೂರು, ಮೋಹನ್ ಕೊಪ್ಪಳ, ಮಾಧವ ಶೆಟ್ಟಿ ಬಾಳ ಮೊದಲಾದವರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಗೌರವ ಪುರಸ್ಕಾರ, ಪ್ರತಿಭಾ ಪುರಸ್ಕಾರ ನಡೆಯಿತು. ಯಕ್ಷಸಾಧಕಿ ಪೂರ್ಣಿಮಾ ಯತೀಶ್ ರೈ ದಂಪತಿಗಳನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ವಿವಿಧ ಸಂಘ ಸಂಸ್ಥೆಯವರು ಕೂಡಾ ಪೂರ್ಣಿಮಾ ಯತೀಶ್ ರೈ ಅವರನ್ನು ಸನ್ಮಾನಿಸಿದರು.
ಕಳೆದ 35 ವರ್ಷಗಳ ಯಕ್ಷಗಾನ ರಂಗದಲ್ಲಿ ಬಣ್ಣ ಹಚ್ಚಿದ್ದೇನೆ, ಮನೆಯವರ ಸಹಕಾರದ ಜೊತೆಗೆ ಎಲ್ಲರ ಸಹಕಾರವೂ ದೊರೆತಿದೆ. ಇದಕ್ಕೆ ನಾನು ಯಾವತ್ತೂ ಚಿರಋಣಿ ಎಂದು ಪೂರ್ಣಿಮಾ ಯತೀಶ್ ರೈ ತಿಳಿಸಿದರು.


ಬೆಳಿಗ್ಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಐ ರಮಾನಂದಭಟ್, ವೆಂಕಟರಮಣ ಅಸ್ರಣ್ಣ, ರಮೇಶ ಭಟ್, ಶಾಸಕ ಡಾ ವೈ ಭರತ್ ಶೆಟ್ಟಿ,ವರುಣ್ ಚೌಟ, ಹರಿಕೃಷ್ಣ ಪುನರೂರು, ಗಿರೀಶ್ ಎಂ ಶೆಟ್ಟಿ ಕಟೀಲು, ವಾಸುದೇವ ಐತಾಳ್ , ಡಾ ಸತ್ಯಮೂರ್ತಿ, ಗುಣವತಿ ರಮೇಶ್, ಶ್ರೀರಂಗ ಹೊಸಬೆಟ್ಟು, ಬಾಳ ಜಗನ್ನಾಥ ಶೆಟ್ಟಿ, ಲಕ್ಷ್ಮೀ, ಹರೀಶ್ ಶೆಟ್ಟಿ ಆರತಿ ಆಳ್ವ, ಭಾಗವಹಿಸಿದ್ದರು‌.
ಮಧ್ಯಾಹ್ನ ನಡೆದ ಗೌರವ ಪುರಸ್ಕಾರದಲ್ಲಿ ಶಿವರಾಮ ಪಣಂಬೂರು, ರಮೇಶ್ ಶೆಟ್ಟಿ ಬಾಯಾರು, ಹರಿನಾರಾಯಣ ಬೈಪಾಡಿತ್ತಾಯ, ಶಂಕರ ನಾರಾಯಣ ಮೈರ್ಪಾಡಿ ಅವರನ್ನು ಸನ್ಮಾನಿಸಲಾಯಿತು.
ಸಮಿತಿಯ ಉಪಾಧ್ಯಕ್ಷರುಗಳಾದ ಲೀಲಾಧರ ಶೆಟ್ಟಿ ಕಟ್ಲ ಸ್ವಾಗತಿಸಿ, ಗಂಗಾಧರ ಪೂಜಾರಿ ಚೇಳಾರ್ ವಂದಿಸಿದರು.
ರಾತ್ರಿ ಯಕ್ಷಪೂರ್ಣಿಮಾ ಶಿಷ್ಯವೃಂದದವರಿಂದ ಶ್ರೀ ದೇವಿ ಮಹಾತ್ಮ್ಯೆ ಯಕ್ಷಗಾನ ನಡೆಯಿತು.

error: Content is protected !!