ಹಳೆಯಂಗಡಿ. : ಊರ ಪರವೂರ ಹತ್ತು ಸಮಸ್ತರ ಮತ್ತು ಯಕ್ಷ ಕಲಾರಂಗ ತೋಕೂರು ಇವರ15ನೇ ವರ್ಷದ ಕಿರು ಷಷ್ಠಿ ಜಾತ್ರಾ ಮಹೋತ್ಸವದ ಪ್ರಯುಕ್ತ ಕಟೀಲು ಮೇಳದವರಿಂದ ಯಕ್ಷಗಾನ ಬಯಲಾಟ ಶ್ರೀದೇವಿ ಮಹಾತ್ಮೆ ನಡೆಯಿತು,
ಈ ಸಂದರ್ಭದಲ್ಲಿ ಕಟೀಲು ಮೇಳದ ಹಿರಿಯ ಕಲಾವಿದರಾದ ನಾರಾಯಣ ಕುಲಾಲ್, ರವಿ ಮುಂಡಾಜೆ, ಸಂದೀಪ್ ಕೋಳ್ಯೂರು, ಭಾಗವತರಾದ ಸತೀಶ್ ಶೆಟ್ಟಿ ಬೊಂದೆಲ್, ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಸುಮಾರು ವರ್ಷಗಳಿಂದ ಸೇವಾಕರ್ತರಾಗಿ ಸೇವೆ ಸಲ್ಲಿಸಿರುವ ವೆಂಕಪ್ಪ ಶೆಟ್ಟಿ ಮೂಡುಮನೆ, ಸುಮತಿ ದೇವಾಡಿಗ, ಇವರನ್ನು ರಂಗಸ್ಥಳದಲ್ಲಿ ಸನ್ಮಾನಿಸಲಾಯಿತು, ಈ ಸಂದರ್ಭದಲ್ಲಿ ಕಟೀಲು ದೇವಳದ ಅನುವಂಶಿಕ ಅರ್ಚಕರಾದ ವೆಂಕಟ್ರಮಣ ಅಸ್ರಣ್ಣ, ಆಶೀರ್ವದಿಸಿದರು. ಸುಬ್ರಹ್ಮಣ್ಯ ದೇವಸ್ಥಾನದ ತೋಕೂರು ಇದರ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಗುರುರಾಜ ಎಸ್ ಪೂಜಾರಿ, ವ್ಯವಸ್ಥಾಪನ ಸಮಿತಿ ಸದಸ್ಯರಾದ ಸವಿತಾ ಶರತ್ ಬೆಳ್ಳಾಯರು, ಅಶೋಕ್ ಕುಂದರ್, ಪುರುಷೋತ್ತಮ ಕೋಟ್ಯಾನ್, ಸಂಪತ್ ಶೆಟ್ಟಿ ತೋಕೂರು ಗುತ್ತು, ಮಾಜಿ ಅಧ್ಯಕ್ಷರಾದ ಹರಿದಾಸ್ ಭಟ್, ಯುವಕ ಸಂಘದ ಅಧ್ಯಕ್ಷರಾದ ರಮೇಶ್ ದೇವಾಡಿಗ, ಶ್ರೀ ಸುಬ್ರಹ್ಮಣ್ಯ ಮಹಾ ಗಣಪತಿ ಸ್ಪೋರ್ಟ್ಸ್ ಕ್ಲಬ್ ಇದರ ಅಧ್ಯಕ್ಷರಾದ ದೀಪಕ್ ಸುವರ್ಣ, ಗಜಾನನ ಸ್ಪೋರ್ಟ್ಸ್ ಕ್ಲಬ್ಬಿನ ನವೀನ್ ಶೆಟ್ಟಿಗಾರ್, ಪತ್ರಕರ್ತರಾದ ರಮೇಶ್ ಅಮೀನ್ ಮುಂಬೈ, ಗಣೇಶ್ ದೇವಾಡಿಗ ಪಂಜ, ಯಕ್ಷ ಕಲಾರಂಗದ ಭಾಸ್ಕರ್ ದೇವಾಡಿಗ, ಹಿಮಕರ್ ಕೋಟ್ಯಾನ್, ಗಣೇಶ್ ಪೂಜಾರಿ ತೋಕೂರು, ಸಂತೋಷ್ ಕುಮಾರ್, ಶಿವ ದೇವಾಡಿಗ, ಸಂಪತ್ ದೇವಾಡಿಗ, ಅಕ್ಷಯ್ ಭಂಡಾರಿ, ಸೋಮನಾಥ, ಸಂತೋಷ್ ದೇವಾಡಿಗ ಸ್ವಾಗತಿಸಿ, ಸುರೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.