ಶಿಬರೂರು ಬ್ರಹ್ಮಕಲಶೋತ್ಸವಕ್ಕೆ ನಟಿ ಶಿಲ್ಪಾ ಶೆಟ್ಟಿಯಿಂದ ಬೆಳ್ಳಿಕಲಶ ಸಮರ್ಪಣೆ


ಸುರತ್ಕಲ್: ಶಿಬರೂರುನಲ್ಲಿ ನಡೆಯುವ ಮೂರನೇ ಬ್ರಹ್ಮ‌ಕಲಶೋತ್ಸವ ನೋಡುವ ಭಾಗ್ಯ ನನಗೆ ಸಿಕ್ಕಿದೆ, ಊರ ಪರವೂರ ಗ್ರಾಮಸ್ಥರ ಸಹಕಾರದಿಂದ ಮುಂದಿನ ಎಪ್ರೀಲ್ ನಲ್ಲಿ ನಡೆಯುವ ಬ್ರಹ್ಮಕಲಶೋತ್ಸವ ಮತ್ತು ನಾಗಮಂಡಲ ವಿಜೃಂಭಣೆಯಿಂದ ನಡೆಯಲಿದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಶಿಬರೂರುಗುತ್ತು ಗುತ್ತಿನಾರ್ ಉಮೇಶ್ ಎನ್ ಶೆಟ್ಟಿ ಹೇಳಿದರು.

ಅವರು ಶಿಬರೂರು ಶ್ರೀ ಉಳ್ಳಾಯ ಮತ್ತು ಕೊಡಮಣಿತ್ತಾಯ ದೈವಸ್ಥಾನದಲ್ಲಿ ಏಪ್ರೀಲ್ 26 ರಂದು ನಡೆಯಲಿರುವ ಬ್ರಹ್ಮಕಲಶೋತ್ಸವ ಮತ್ತು ನಾಗಮಂಡಲದ ಪೂರ್ವಭಾವಿಯಾಗಿ ಶಿಬರೂರು ದೈವಸ್ಥಾನದಲ್ಲಿ ನಡೆದ ಪೂರ್ವಭಾವಿಯಾಗಿ ಸಭೆಯಲ್ಲಿ ಮಾತನಾಡಿದರು.

ಜೀರ್ಣೋದ್ದಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಪ್ರಭಾಕರ ಎಸ್ ಶೆಟ್ಟಿ ಕೋಂಜಾಲಗುತ್ತು ಮಾತನಾಡಿ ಶಿಬರೂರು ಬ್ರಹ್ಮಕಲಶೋತ್ಸವಕ್ಕೆ ಮುಂಬೈ ಭಕ್ತರು ಕೈ ಜೋಡಿಸುತ್ತಿದ್ದು, ಉದ್ಯಮಿಗಳ ಸಹಕಾರ ಹರಿದು ಬರುತ್ತಿದೆ, ಕೊಡಮಣಿತ್ತಾಯನ ಶಕ್ತಿ ಏನೆಂಬುದು ಭಕ್ತರಿಗೆ ತಿಳಿದಿದೆ, ಕೊಡಮಣಿತ್ತಾಯನಿಗೆ ಈಗಾಗಲೇ ಚಿನ್ನದ ಪಲಕ್ಕಿ ಅರ್ಪಿಸುವ ನಿರ್ದಾರ ಮಾಡಿದ್ದು, ದಾನಿಗಳ ಸಹಕಾರದಿಂದ ಅದು ಕೂಡ ಪೂರ್ಣಗೊಳ್ಳಲಿದೆ ಎಂದರು.


ಸಮಿತಿಯ ಕಾರ್ಯಾಧ್ಯಕ್ಷ ಪ್ರದ್ಯುಮ್ನ ರಾವ್ ಕೈಯೂರುಗುತ್ತು ಮಾತನಾಡಿ ಶಿಬರೂರುನಲ್ಲಿ ನಡೆಯಲಿರುವ ಉತ್ಸವ ವಿಜೃಂಭಣೆಯಿಂದ ನಡೆಯಲಿದ್ದು ಹಿಂದಿ ಚಿತ್ರರಂಗದ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಉತ್ಸವದ ಪ್ರಧಾನ ಬೆಳ್ಳಿಯ ಕಲಶ ಈಗಾಗಲೇ ನೀಡಿದ್ದು, ಪ್ರಮುಖ ಮೂರು ದಿನಗಳಲ್ಲಿ ಇಲ್ಲಿನ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಲಿದ್ದಾರೆ. ಕೊಡಮಣಿತ್ತಾಯನಿಗೆ ಮೇಲಿನ ಭಕ್ತಿಯಿಂದ ಚಿನ್ನದ‌ ಪಲ್ಲಕಿಗಾಗಿ ಭಕ್ತರು ತಮ್ಮ ಒಡವೆಯನ್ನೇ ದಾನ ರೂಪವಾಗಿ ನೀಡುತ್ತಿದ್ದಾರೆ ಎಂದರು. ಈ ಸಂದರ್ಭ ತುಕರಾಮ ಶೆಟ್ಟಿ ಪರ್ಲಬೈಲ್ ಗುತ್ತು, ಶಿವಾನಂದ ಶೆಟ್ಟಿ ಪಡುಮನೆ, ಸೂರಿಂಜೆ ಪಂಚಾಯತ್ ಅಧ್ಯಕ್ಷೆ ಗೀತಾ ಶೆಟ್ಟಿ, ಮಧುಕರ ಅಮೀನ್ ಶಿಬರೂರು, ಪುರಂದರ ಎಂ ಶೆಟ್ಟಿ , ಸುಬ್ರಮಣ್ಯ ರಾವ್ ಕೋರ್ಯಾರು, ಕಾಂತಪ್ಪ ಸಾಲಿಯಾನ್, ದಿವಾಕರ ಸಾಮಾನಿ ಮತ್ತಿತರರು ಉಪಸ್ಥಿತರಿದ್ದರು.
ಸ್ವಾಗತ ಸಮಿತಿಯ ಜಿತೇಂದ್ರ ಶೆಟ್ಟಿ ಕೋರ್ಯಾರುಗುತ್ತು, ಸ್ವಯಂಸೇವಕ ಸಮಿತಿಯ ಗಿರೀಶ್ ಶೆಟ್ಟಿ ಪಡುಮನೆ, ಪ್ರಚಾರ ಮತ್ತು ಅಮಂತ್ರಣ ಸಮಿತಿಯ ವಿನೀತ್ ಶೆಟ್ಟಿ, ಮಾದ್ಯಮ ಸಮಿತಿಯ ಬಾಳ ಜಗನ್ನಾಥ ಶೆಟ್ಟಿ, ಮಾತೃ ಸಮಿತಿಯ ಆಶಾ ಶೆಟ್ಟಿ, ಸಾಂಸ್ಕ್ರತಿಕ ಸಮಿತಿಯ ವಿಜೇಶ್ ಶೆಟ್ಟಿ, ಅನ್ನಸಂತರ್ಪಣೆ ಸಮಿತಿಯ ಜಗದೀಶ್ ಶೆಟ್ಟಿ, ಉಗ್ರಾಣ ಸಮಿತಿ ದಯಾನಂದ ದೇವಾಡಿಗ, ಹೊರೆಕಾಣಿಕೆ ಸಮಿತಿಯ ಬಾಲಕೃಷ್ಣ ಕುಲಾಲ್, ಆರೋಗ್ಯ ಮತ್ತು ನೈರ್ಮಲ್ಯ ಸಮಿತಿಯ ಸುಜಾತ ಶೆಟ್ಟಿ, ಪ್ರಸಾದ ವಿತರಣಾ ಸಮಿತಿಯ ಸುಧಾಕರ ಶೆಟ್ಟಿ ಶಿಬರೂರುಗುತ್ತು, ವಾಹನ‌ ಪಾರ್ಕಿಗ್ ಸಮಿತಿಯ ದಿನಕರ ಕೈಯೂರು, ಅಲಂಕಾರ ಸಮಿತಿಯ ಭುವನೇಶ್ ಆಚಾರ್ಯ, ವಸತಿ ಸಮಿತಿ ಸಂದೀಪ್ ಶೆಟ್ಟಿ, ಮಾತೃ ಸಮಿತಿಯ ಶಾಮಲ ಪಿ ಶೆಟ್ಟಿ ಕೊಂಜಾಲಗುತ್ತು, ಅರ್ಥಿಕ ಸಮಿತಿ ಪ್ರವೀಣ್ ಶೆಟ್ಟಿ, ಮತ್ತಿತರರ ಸಮಿತಿಯ ಪ್ರಮುಖರು ಸಮಿತಿಯು ಇದುವರೆಗೆ ನಡೆಸಿದ ಕೆಲಸದ ಬಗ್ಗೆ ಮಾಹಿತಿ ಸಲಹೆ ನೀಡಿದರು. ಮಧುಕರ ಅಮೀನ್ ಧನ್ಯವಾದ ಸಮರ್ಪಿಸಿದರು. ಸುಬ್ರಮಣ್ಯ ರಾವ್ ಕೋರ್ಯಾರು ಕಾರ್ಯಕ್ರಮ ನಿರ್ವಹಿಸಿದರು.

error: Content is protected !!