ದೇಶ ಭಕ್ತಿ, ಸಮರ್ಪಣಾ ಮನೋಭಾವ ಸರ್ವರಲ್ಲಿಯೂ ಇರಬೇಕು: ಡಾ.ಭರತ್ ಶೆಟ್ಟಿ ವೈ

ಮಂಗಳೂರು: ದೇಶದ ಮೇಲೆ ಪ್ರೀತಿ, ಸಮರ್ಪಣಾ ಮನೋಭಾವ ದೇಶದ ಪ್ರತೀ ಪ್ರಜೆಯಲ್ಲಿಯೂ ಇದ್ದಾಗ ಎಂತಹ ಸಂಕಷ್ಟ ಬಂದರೂ ಎದುರಿಸಲು ಸಾಧ್ಯವಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯ ವೀರ ಸ್ಮರಣೆಗಾಗಿ ಹಮ್ಮಿಕೊಂಡಿರುವ ನನ್ನ ಮಣ್ಣು ನನ್ನ ದೇಶ ಕಾರ್ಯಕ್ರಮ ಐತಿಹಾಸಿಕ ನಡೆಯಾಗಿದೆ ಎಂದು ಶಾಸಕರಾದ ಡಾ.ಭರತ್ ಶೆಟ್ಟಿ ವೈ ನುಡಿದರು.

ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಕನ್ನಡ ಸಂಸ್ಕೃತಿ ಇಲಾಖೆ, ಅಂಚೆ ಇಲಾಖೆ,ಲೀಡ್ ಬ್ಯಾಂಕ್, ರಾಷ್ಟ್ರೀಯ ಸೇವಾ ಯೋಜನೆ ಮಂಗಳೂರು ವಿಶ್ವವಿದ್ಯಾನಿಲಯದ ಹಾಗೂ ನೆಹರು ಯುವ ಕೇಂದ್ರ ಮಂಗಳೂರು ಇದರ ಸಹಯೋಗದೊಂದಿಗೆ ಮೇರಿ ಮಾಟಿ ಮೇರಾ ದೇಶ್ ನನ್ನ ಮಣ್ಣು ನನ್ನ ದೇಶ ಕಾರ್ಯಕ್ರಮದ ಅಂಗವಾಗಿ ಅಮೃತ ಕಲಶ ಯಾತ್ರೆ ಯ ಸಮಾರೋಪ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.


ಮಾತೃಭೂಮಿ ಎಂದು ಬಂದಾಗ ನಾವೆಲ್ಲಾ ಸಮರ್ಪಣಾ ಮನೋಭಾವ ಹೊಂದ ಬೇಕು.ದೇಶದ ವೀರ ಸ್ವಾತಂತ್ರ್ಯ ಹೋರಾಟಗಾರರು, ನಮ್ಮನ್ನು ಕಾಪಾಡುವಲ್ಲಿ ಬಲಿದಾನವನ್ನು ಮಾಡಿದ ವೀರ ಯೋಧರ ಸ್ಮರಣೆಯಲ್ಲಿ ರಾಜಧಾನಿಯಲ್ಲಿ ಉದ್ಯಾನವನ ನಿರ್ಮಾಣ ಆ ಮೂಲಕ ನಮ್ಮ ಮುಂದಿನ ಪೀಳಿಗೆಯಲ್ಲಿ ಸದಾ ಜಾಗೃತಿ ಮನಸ್ಥಿತಿಯನ್ನು ಮೂಡಿಸುವಲ್ಲಿ ಕಾರ್ಯಕ್ರಮ ಯಶಸ್ವಿಯಾಗಲಿದೆ ಎಂದರು.

ತಾಲೂಕು ಪಂಚಾಯತ್ ಕಾರ್ಯನಿರ್ವಹಣಾ„ಕಾರಿ ಮಹೇಶ್ ಹೊಳ್ಳ,ನೆಹರು ಯುವ ಕೇಂದ್ರ ದ ಜಗದೀಶ್ ಅಂಚೆ ಇಲಾಖೆಯ ಅ„ಕಾರಿಗಳಾದ ಶಂಕರ್, ಆಡಳಿತಾ„ಕಾರಿ ತಾಲೂಕು ಪಂಚಾಯತ್ ರವಿಕುಮಾರ್, ರಾಷ್ಟ್ರೀಯ ಸೇವಾ ಯೋಜನೆ ಪ್ರಮುಖರಾದ ನಾಗರತ್ನ, ಉದಯ್ ಕುಮಾರ್.ತಾಲೂಕು ಪಂಚಾಯತ್ ನಿರ್ದೇಶಕ ಮಹೇಶ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!