ಮೂಲ್ಕಿ: ಬಡವ ಬಲ್ಲಿದ ಎಂಬ ಭೇಧರಹಿತವಾಗಿ ಪ್ರಾಮಾಣಿಕ ಸೇವೆ ನೀಡುವ ವ್ಯಕ್ತಿಗೆ ಶ್ರೀದೇವರ ಆಶೀವರ್ಾದ ಸಹಿತ ಶೀಘ್ರ ಪದೋನ್ನತಿ ಲಭ್ಯವಾಗುತ್ತದೆಎಂದು ಮೂಲ್ಕಿ ಬಪ್ಪನಾಡು ಶ್ರೀ ದುಗರ್ಾಪರಮೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ಮನೋಹರ ಶೆಟ್ಟಿ ಹೇಳಿದರು.
ಬ್ಯಾಂಕ್ ಆಫ್ ಬರೋಡಾ ಮೂಲ್ಕಿ ಶಾಖೆಯ ಹಿರಿಯ ಪ್ರಭಂದಕ ಪ್ರಣಾಮ್ ಕುಮಾರ್ ಮುಖ್ಯ ಪ್ರಭಂದಕರಾಗಿ ಪದೋನ್ನತಿಗೊಂಡು ದಾವಣಕೆರೆಗೆ ವಗರ್ಾವಣೆಯಾದ ಸಂದರ್ಭ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಅಭಿನಂದನಾ ಮಾತುಗಳನ್ನಾಡಿದರು. ಮೂಲ್ಕಿ ವೆಂಕಟರಮಣ ದೇವಸ್ಥಾನದ ಮಾಜಿ ಮೊಕ್ತೇಸರ ನಾರಾಯಣ ಶೆಣೈ ಮಾತನಾಡಿ,ವ್ಯಕ್ತಿಯ ಸೇವಾ ತತ್ಪರತೆಯು ಸಂಸ್ಥೆಯ ಅಭಿವೃದ್ಧಿಯ ಜೊತೆಗೆ ವ್ಯಕ್ತಿಯ ಉನ್ನತಿಗೆ ಕಾರಣವಾಗುತ್ತದೆ ಪ್ರಣಾಮ್ ರವರು ಮೂಲ್ಕಿಯ ಜನತೆಗೆ ನೀಡಿದ ಸೇವೆ ಸ್ಮರಣೀಯವಾಗಿದ್ದು ಮುಂದೆಯೂ ಹೆಚ್ಚು ಪದೋನ್ನತಿಗಳು ಲಭಿಸಲಿ ಎಂದರು.
ಈ ಸಂದರ್ಭ ಉದ್ಯಮಿಗಳಾದ ಹರೀಶ್ ಪುತ್ರನ್, ಶಶಿಅಮೀನ್,ಮುರಳೀಧರ ಭಂಡಾರಿ, ವಿಜಯಾ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಂಗನಾಥ ಶೆಟ್ಟಿ ಅಭಿನಂದನಾ ಮಾತುಗಳನ್ನಾಡಿದರು. ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಪ್ರಧಾನ ಕಾರ್ಯದಶರ್ಿ ವಿಜಯ ಕುಮಾರ್ ಕುಬೆವೂರು, ವಿಜಯಾ ರೈತರ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶಿವರಾಮ ಶೆಟ್ಟಿ,ಚಂದ್ರಹಾಸ ಆಳ್ವ, ಉದ್ಯಮಿ ವೀರಯ್ಯ ಹಿರೇಮಠ,ಹಾಗೂ ಬ್ಯಾಂಕ್ ಪ್ರಬಂದಕ ಪ್ರಜ್ವಲ್ ಹಾಗೂ ಸಿಬ್ಬಂದಿಗಳು ಹಾಜರಿದ್ದರು.ಚಿತ್ರ:ಎಂಯುಎಲ್_ಜು14_2 ಬ್ಯಾಂಕ್ ಆಫ್ ಬರೋಡಾ ಮೂಲ್ಕಿ ಶಾಖೆಯ ಹಿರಿಯ ಪ್ರಭಂದಕ ಪ್ರಣಾಮ್ ಕುಮಾರ್ ಮುಖ್ಯ ಪ್ರಭಂದಕರಾಗಿ ಪದೋನ್ನತಿಗೊಂಡು ದಾವಣಕೆರೆಗೆ ವಗರ್ಾವಣೆಯಾದ ಸಂದರ್ಭ ನಡೆದ ಬೀಳ್ಕೊಡುಗೆ ಸಮಾರಂಭ ನಡೆಯಿತು.