ಕಿನ್ನಿಗೋಳಿ :ಎಲ್ಲರೂ ಮುಖವಾಡಗಳನ್ನು ಧರಿಸಿಯೇ ಬಾಳುತ್ತಾರೆ. ಮುಖವಾಡಗಳ ಹಿಂದಿನ ನೋವುನಲಿವುಗಳನ್ನು ಅರ್ಥೈಸಿಕೊಂಡು ಬಾಳನ್ನು ಹಸನುಗೊಳಿಸಿಕೊಳ್ಳಬೇಕು ಎಂದು ಡಾ. ಜೀವನ್ ರಾಂ ಸುಳ್ಯ ಹೇಳಿದರು.
ಅವರು ಕಿನ್ನಿಗೋಳಿ ಸಮೀಪದ ಐಕಳ ಪೊಂಪೈ ಕಾಲೇಜಿನ ವಾರ್ಷಿಕೋತ್ಸವ ದ ಸಾಂಸ್ಕೃತಿಕ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ ತಟ್ಟಿಯ ಗೋಡೆಯ , ಮುಳಿಹುಲ್ಲು ಮಾಡಿನ ಮನೆಯಿಂದ ಇಂದಿನವರೆಗೆ ಸಾಗಿಬಂದ ಜೀವನದ ಅನುಭವ ಕಥನದೊಂದಿಗೆ ತಮ್ಮ ನೋವು ನಲಿವಿನ ಜೀವನ ಪಾಠವನ್ನು ತೆರೆದಿಟ್ಟರು.
ಕಾಲೇಜಿನ ಪ್ರಾಂಶುಪಾಲ ಡಾ. ಪುರುಷೋತ್ತಮ ಕೆ.ವಿ.ಯವರು ಸಭಾಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ ಪಿಟಿಎ ಅಧ್ಯಕ್ಷ ಯೋಗೀಂದ್ರ ಬಿ. , ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ರಿಚಾರ್ಡ್ ಸಿಕ್ವೇರಾ, ಸಾಂಸ್ಕೃತಿಕ ಸಂಘದ ಸಂಚಾಲಕರಾದ ಡಾ. ಮಂಜುನಾಥ ಎಸ್. ಎ ,ಸ್ನಾತಕೊತ್ತರ ವಿಭಾಗದ ಪ್ರಾಧ್ಯಾಪಕ ರೆ.ಫಾ. ಸುನಿಲ್ ಜಾರ್ಜ್ ಡಿ’ಸೋಜಾ,ಇತಿಹಾಸ ಉಪನ್ಯಾಸಕಿ ಅಶಿತಾ ಜೆ ಕಲಾ ಸಂಘದ ಕಾರ್ಯದರ್ಶಿ ನವೀನ್ ಕುಲಾಲ್ ಸ್ವಾತಿಪ್ರಭು ಮತ್ತಿತರರು ಉಪಸ್ಥಿತರಿದ್ದರು