ಅಡ್ಯಾರ್ ಗಾರ್ಡನ್ ನಲ್ಲಿ ಮೇ 27ರಂದು ಯಕ್ಷಗಾನ ಸ್ಪರ್ಧೆ, ಮೇ 28 ರಂದು “ಯಕ್ಷಧ್ರುವ ಪಟ್ಲ ಸಂಭ್ರಮ”


ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಮಂಗಳೂರು ಇದರ ಆಶ್ರಯದಲ್ಲಿ ಮೇ 27 ಶನಿವಾರ ಹೈಸ್ಕೂಲ್ ಮತ್ತು ಕಾಲೇಜು ವಿದ್ಯಾರ್ಥಿಗಳ ಯಕ್ಷಗಾನ ಸ್ಪರ್ಧೆ, ಮೇ 28 ಭಾನುವಾರ ಯಕ್ಷಧ್ರುವ ಪಟ್ಲ ಸಂಭ್ರಮ 2023 ಅಡ್ಯಾರ್ ನ ಅಡ್ಯಾರ್ ಗಾರ್ಡನ್ ನಲ್ಲಿ ನಡೆಯಲಿದೆ ಎಂದು ಪಟ್ಲ ಫೌಂಡೇಶನ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ತಿಳಿಸಿದರು.
ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು
ಕನ್ಯಾನ ಸದಾಶಿವ ಶೆಟ್ಟಿಯವರ ಸಂಭ್ರಮಾಧ್ಯಕ್ಷತೆಯಲ್ಲಿ ಯಕ್ಷಧ್ರುವ ಪಟ್ಲ ಸಂಭ್ರಮ ನಡೆಯಲಿದೆ.
ಬಲಿಪ ನಾರಾಯಣ ಭಾಗವತ ವೇದಿಕೆಯಲ್ಲಿ ಬೆಳಿಗ್ಗೆ 8 ರಿಂದ ಚೌಕಿ ಪೂಜೆ, ಬಳಿಕ ಅಡ್ಯಾರ್ ಕಟ್ಟೆಯಿಂದ ಸಂಭ್ರಮಾಧ್ಯಕ್ಷರೊಂದಿಗೆ ಮೆರವಣಿಗೆ ನಡೆಯಲಿದೆ.
9.30 ಕ್ಕೆ ಪಟ್ಲ ಸಂಭ್ರಮ ಉದ್ಘಾಟನೆ ನೆರವೇರಲಿದೆ ಎಂದರು.
ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ಎಡನೀರು ಮಠದ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಶ್ರೀ ಕ್ಷೇತ್ರ ಮಾಣಿಲದ ಮೋಹನದಾಸ ಸ್ವಾಮೀಜಿ, ಬಾರ್ಕೂರು ಸಂಸ್ಥಾನಂ ನ ಶ್ರೀ ವಿಶ್ವಸಂತೋಷ ಭಾರತಿ ಸ್ವಾಮೀಜಿ, ಒಡಿಯೂರು ಶ್ರೀ ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ.
ಕಟೀಲು ಶ್ರೀ ಲಕ್ಷ್ಮೀನಾರಾಯಣ ಅಸ್ರಣ್ಣ, ಪಾವಂಜೆ ಶ್ರೀ ಕ್ಷೇತ್ರದ ಧರ್ಮದರ್ಶಿ ಡಾ ಯಾಜಿ ನಿರಂಜನ ಭಟ್ ಆಶೀರ್ವಚನ ನೀಡಲಿ ಲಿದ್ದಾರೆ. ಕನ್ಯಾನ ಸದಾಶಿವ ಶೆಟ್ಟಿ ಸಭಾಧ್ಯಕ್ಷತೆ ವಹಿಸಲಿದ್ದಾರೆ. ಸಿಎ ದಿವಾಕರ್ ರಾವ್ ಕಟೀಲು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ, ಪ್ರಧಾನ ಸಂಚಾಲಕರಾದ ಐಕಳ ಹರೀಶ್ ಶೆಟ್ಟಿ ಮತ್ತು ಶಶಿಧರ ಶೆಟ್ಟಿ ಬರೋಡಾ ಇವರ ಮಾರ್ಗದರ್ಶನ ಮತ್ತು ಉಪಸ್ಥಿತಿಯಲ್ಲಿ ವಿವಿಧ ಸಮಾಜದ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಮಾರಂಭದಲ್ಲಿ ಆರೋಗ್ಯ ಶಿಬಿರ ಉದ್ಘಾಟನೆ, ರಕ್ತದಾನ ಶಿಬಿರ ಉದ್ಘಾಟನೆ ನೆರವೇರಲಿದೆ.
*ಯಕ್ಷಗಾನ ಸಪ್ತಸ್ವರ*
ಬೆಳಿಗ್ಗೆ 11 ರಿಂದ ಯಕ್ಷಗಾನ ಸಪ್ತಸ್ವರ- ಪುತ್ತಿಗೆ, ಅಮ್ಮಣ್ಣಾಯ, ರಾಘವೇಂದ್ರ ಮಯ್ಯ, ಬಲಿಪ, ಕನ್ನಡಿಕಟ್ಟೆ, ಜನ್ಸಾಲೆ, ಕಕ್ಕೆಪದವು, ಉಪಾಧ್ಯಾಯ, ಬೊಳಿಂಜಡ್ಕ, ಪದ್ಯಾಣ, ಸುನಿಲ್, ಸುಜನ್, ಹಾಲಾಡಿಯವರ ನೇತೃತ್ವದಲ್ಲಿ ಉಜಿರೆ ಅಶೋಕ್ ಭಟ್ ನಿರೂಪಣೆಯಲ್ಲಿ ಕಾರ್ಯಕ್ರಮ ನಡೆಯಲಿದೆ.
ಮಧ್ಯಾಹ್ನ 2.30 ರಿಂದ ಯಕ್ಷಗಾನ ತಾಳಮದ್ದಲೆ ಜರಗಲಿದೆ. ಸಂಜೆ 4 ರಿಂದ ಮಹಿಳಾ ಯಕ್ಷಗಾನ ನಡೆಯಲಿದೆ.
*ಯಕ್ಷಧ್ರುವ ಪಟ್ಲ ಪ್ರಶಸ್ತಿ*
ಪ್ರೊಫೆಸರ್ ಎಮ್ ಎಲ್ ಸಾಮಗ ಅವರಿಗೆ ಯಕ್ಷಧ್ರುವ ಪಟ್ಲ ಪ್ರಶಸ್ತಿ 2023 ನೀಡಲಾಗುವುದು.
*ಗೌರವಾರ್ಪಣೆ*
ಟ್ರಸ್ಟ್ ನ ಸಾಧಕ ಮಹಾಪೋಷಕ ಎಂಅರ್ ಜಿ ಗ್ರೂಪ್ ನ ಚೆಯರ್ ಮೆನ್ ಪ್ರಕಾಶ್ ಕೆ ಶೆಟ್ಟಿ ಮತ್ತು ಆಶಾ ಪ್ರಕಾಶ್ ಶೆಟ್ಟಿ ಅವರಿಗೆ ಗೌರವಾರ್ಪಣೆ ನಡೆಯಲಿದೆ.
*ಕಲಾಗೌರವ*
2023 ರ ಯಕ್ಷಧ್ರುವ ಕಲಾ ಗೌರವಕ್ಕೆ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಲಾಗಿದ್ದು, ವೈದಿಕ – ಕುಡುಪು ನರಸಿಂಹ ತಂತ್ರಿಗಳು, ಮಾಧ್ಯಮ-ಮನೋಹರ್ ಪ್ರಸಾದ್, ಭಾರತೀಯ ಸೇನೆ- ಬ್ರಿಗೇಡಿಯರ್ ಐಎನ್ ರೈ, ಕಲಾ ಸಂಘಟನೆ- ಕಲಾರಂಗ ಉಡುಪಿ ಕನ್ನಡ ಸಂಘ ಬಹೈರೆನ್ (ವಿದೇಶ), ಶಾಸ್ತ್ರೀಯ ಸಂಗೀತ – ವಿದ್ವಾನ್ ಯೋಗೀಶ್ ಶರ್ಮ ಬಳ್ಳಪದವು, ಹರಿಕಥೆ- ಮಹಾಬಲ ಶೆಟ್ಟಿ, ರಂಗಭೂಮಿ-ಚಲನಚಿತ್ರ- ತಮ್ಮಲಕ್ಷ್ಮಣ, ಭರತನಾಟ್ಯ : ನಾಟ್ಯಾಚಾರ್ಯ ಉಳ್ಳಾಲ ಮೋಹನ್ ಕುಮಾರ್, ಕಂಬಳ – ಭಾಸ್ಕರ ಕೋಟ್ಯಾನ್ ಕೊಳಕೆ ಇರ್ವತ್ತೂರು, ಯಕ್ಷಗಾನ- ಕೊಳ್ತಿಗೆ ನಾರಾಯಣ ಗೌಡ, ಡಿ ಮನೋಹರ್ ಕುಮಾರ್, ಮಹಾಬಲ ದೇವಾಡಿಗ ಕಮಲಶಿಲೆ, ರಘುರಾಮ‌ ಮಡಿವಾಳ ಮಂದಾರ್ತಿ, ಹವ್ಯಾಸಿ – ಶಂಭುಶರ್ಮ ವಿಟ್ಲ, ಶಿವರಾಮ ಪಣಂಬೂರು, ಮಹಿಳೆ- ಲೀಲಾವತಿ ಬೈಪಡಿತ್ತಾಯ, ದೈವಾರಾದನೆ : ಬಾಚಕೆರೆ ದೇಜಪ್ಪ ಪರವ, ಜಾದೂ: ಕುದ್ರೋಳಿ ಗಣೇಶ್, ಚಿತ್ರಕಲೆ: ದಯಾನಂದ್, ದಯಾ ಆಟ್ಸ್೯, ಭಜನೆ: ಶಿವಪ್ಪ ಆಚಾರ್ಯ ಪಟ್ಲ ಮೊದಲಾದವರು ಕಲಾ ಗೌರವ ಪ್ರಶಸ್ತಿ ಪಡೆಯಲಿದ್ದಾರೆ.
*ಮರಣೋತ್ತರ ಗೌರವ*
ದೈವ ನರ್ತಕ ಕಾಂತು ಅಜಿಲ ಎಡಮೊಗರು, ಕಟೀಲು ಮೇಳದ ಕಲಾವಿದ ಗುರುವಪ್ಪ ಬಾಯಾರ್ ಮತ್ತು ಜಗಧೀಶ ನಲ್ಕ ಕುಟುಂಬಕ್ಕೆ ಮರಣೋತ್ತರ ಗೌರವವಾಗಿ ತಲಾ ಒಂದು ಲಕ್ಷ ರೂಪಾಯಿ ನೀಡಲಾಗುವುದು.
*ತಾರಾ ಮೆರುಗು*
ಸಮಾರಂಭದಲ್ಲಿ ಕಿಚ್ಚ ಸುದೀಪ್, ಕಾಂತಾರಾ ಸಿನಿಮಾ ಖ್ಯಾತಿಯ ರಿಷಬ್ ಶೆಟ್ಟಿ ಮತ್ತು ಇನ್ನಿತರ ಕಲಾವಿದರು ಭಾಗವಹಿಸಲಿದ್ದಾರೆ.
ರಾತ್ರಿ 8 ರಿಂದ ಕರಾವಳಿಯ ಪ್ರತಿಷ್ಠಿತ ಆಹ್ವಾನ ತಂಡಗಳಿಂದ “ಯಕ್ಷಧ್ರುವ ಕಲಾ ವೈಭವ” ಅಪೂರ್ವ ಪ್ರತಿಭೆಗಳ ಚಾರಿತ್ರಿಕ ಸ್ಪರ್ಧೆ ನಡೆಯಲಿದೆ.
*ಸೇವಾ ಕಾರ್ಯಗಳು*
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನಿಂದ ಏಳು ವರ್ಷಗಳಲ್ಲಿ ಸುಮಾರು 8.5 ಕೋಟಿ ರೂಪಾಯಿ ಮೊತ್ತದ ಸೇವಾ ಯೋಜನೆಯನ್ನು ಕಲಾವಿದರಿಗೆ ವಿತರಿಸಲಾಗಿದೆ.
ಐದು ಮಂದಿ ಕಲಾವಿದರಿಗೆ ತಲಾ ಒಂದು ಲಕ್ಷ ನಗದಿನೊಂದಿಗೆ ಪಟ್ಲ ಪ್ರಶಸ್ತಿ ನೀಡಲಾಗಿದೆ.
ಗೃಹ ನಿರ್ಮಾಣಕ್ಕಾಗಿ 132 ಕಲಾವಿದರಿಗೆ ತಲಾ 25 ಸಾವಿರ ಸಹಾಯಧನ ವಿತರಣೆ,
145 ಅಶಕ್ತ ಕಲಾವಿದರಿಗೆ ತಲಾ ರೂಪಾಯಿ 50 ಸಾವಿರ ವಿತರಣೆ,
ಪ್ರಾದೇಶಿಕ ಘಟಕಗಳ ವ್ಯಾಪ್ತಿಯಲ್ಲಿ ಸುಮಾರು 350 ಕಲಾವಿದರಿಗೆ ಸನ್ಮಾನ- ಸಹಿತ ಗೌರವ ಧನ ವಿತರಣೆ,
ಅಪಘಾತ ವಿಮಾ ಯೋಜನೆಯಲ್ಲಿ ಪ್ರತಿ ವರ್ಷ 950 ಕಲಾವಿದರ ಹೆಸರು ದಾಖಲಾತಿ.

*ಪತ್ರಿಕಾಗೋಷ್ಠಿಯಲ್ಲಿ
ಪಟ್ಲ ಫೌಂಡೇಶನ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರ್, ಕೋಶಾಧಿಕಾರಿ CA ಸುದೇಶ್ ಕುಮಾರ್ ರೈ , ಉಪಾಧ್ಯಕ್ಷ ಡಾ ಮನು ರಾವ್, ಸಂಘಟನಾ ಕಾರ್ಯದರ್ಶಿ ಕದ್ರಿ ನವನೀತ ಶೆಟ್ಟಿ, ಪ್ರದೀಪ್ ಆಳ್ವ ಕದ್ರಿ ಉಪಸ್ಥಿತರಿದ್ದರು.

error: Content is protected !!