ಸುರತ್ಕಲ್: ಎ.8ರಂದು ಸಂಜೆ 5 ಗಂಟೆಯಿಂದ ಇಲ್ಲಿನ ಗೋವಿಂದ ದಾಸ್ ಕಾಲೇಜಿನಲ್ಲಿ ಅಗರಿ ಸಂಸ್ಮರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ ಎಂದು ಅಗರಿ ಶ್ರೀನಿವಾಸ ಭಾಗವತರ ಸಂಸ್ಮರಣ ವೇದಿಕೆ ಸುರತ್ಕಲ್ ಇದರ ಕಾರ್ಯಾಧ್ಯಕ್ಷ ಅಗರಿ ರಾಘವೇಂದ್ರ ರಾವ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಅಗರಿ ಶ್ರೀನಿವಾಸ ಭಾಗವತರ ಸಂಸ್ಕರಣ ವೇದಿಕೆ ಸುರತ್ಕಲ್ ಹಾಗೂ ಗೋವಿಂದದಾಸ ಕಾಲೇಜು ಸುರತ್ಕಲ್ ಇದರ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು ಅಧ್ಯಕ್ಷತೆಯನ್ನು ಕಟೀಲು ಕ್ಷೇತ್ರದ ಅನುವಂಶಿಕ ಮೊತ್ತೇಸರರಾದ ಲಕ್ಷ್ಮೀನಾರಾಯಣ ಅಸ್ರಣ್ಣ ಅವರು ವಹಿಸಲಿದ್ದಾರೆ. ಅಗರಿ ಪ್ರಶಸ್ತಿಯನ್ನು ಡಿ. ಹರ್ಷೇಂದ್ರ ಕುಮಾರ್ ಧರ್ಮಸ್ಥಳ ಇವರಿಗೆ ಪ್ರದಾನ ಮಾಡಲಿದ್ದು . ಎಂ. ಪ್ರಭಾಕರ ಜೋಷಿ ಅವರು ಅಭಿನಂದನಾ ಭಾಷಣ ಮಾಡಲಿದ್ದಾರೆ. ಭಾಗವತ ಗಿರೀಶ್ ರೈ ಕಕ್ಕೆಪದವು ಅವರಿಗೆ ಅಗರಿ ಶೈಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದು ಡಾ. ವಾದಿರಾಜ ಕಲ್ಲೂರಾಯ ಅವರಿಗೆ ಅಗರಿ ವಿಶೇಷ ಸಮ್ಮಾನ ಮಾಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮುರಲೀ ಕಡೇಕಾರ್, ಶ್ರೀಪತಿ ಭಟ್, ಗೋವಿಂದ ದಾಸ್ ಕಾಲೇಜ್ ಪ್ರಾಂಶುಪಾಲ ಕೃಷ್ಣಮೂರ್ತಿ ಅವರು ಪಾಲ್ಗೊಳ್ಳಲಿದ್ದಾರೆ.
ಸಂಜೆ ಗಂಟೆ 7.00ರಿಂದ ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ ವಿಜೇತ ಪೂರ್ಣಿಮಾ ಯತೀಶ್ ರೈ ಸಂಯೋಜನೆಯಲ್ಲಿ ಮಹಿಳಾ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲ
ಯಕ್ಷಬ್ರಹ್ಮ ಅಗರಿ ಶ್ರೀನಿವಾಸ ಭಾಗವತ ವಿರಚಿತ
ಶ್ರೀದೇವಿ ಮಹಿಷಮರ್ದಿನಿ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಕಾರ್ಯಾಧ್ಯಕ್ಷ ಅಗರಿ ರಾಘವೇಂದ್ರ ರಾವ್, ಉಪಾಧ್ಯಕ್ಷರಾದ ಗಿರೀಶ್ ನಾವಡ, ಶೇಷ ಶಯನ ಹಾಗೂ ಜೊತೆ ಕಾರ್ಯದರ್ಶಿ ಕಿರಣ್ ಉಪಸ್ಥಿತರಿದ್ದರು.