ಸುರತ್ಕಲ್: ಹಿಂದೂ ಯುವಸೇನೆ ಓಂಕಾರ ಘಟಕ ಹಾಗೂ ಓಂಕಾರ ಮಹಿಳಾ ಘಟಕ ಸುರತ್ಕಲ್ ಇದರ ಆಶ್ರಯದಲ್ಲಿ ದ್ವಿತೀಯ ವರ್ಷದ ಹನುಮ ಜಯಂತಿ ಕಾರ್ಯಕ್ರಮವು ಎಪ್ರಿಲ್ 6ರಂದು ಕರ್ನಾಟಕ ಸೇವಾ ವೃಂದ ವೇದಿಕೆಯಲ್ಲಿ ಜರುಗಲಿದೆ ಎಂದು ಸಂಚಾಲಕ ವಸಂತ ಆಚಾರ್ಯ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಅಂದು ಪಾವಂಜೆ ದೇವಸ್ಥಾನದ ಆರ್ಚಕ ವೃಂದದ ಪೌರೋಹಿತ್ಯದಲ್ಲಿ ಹನುಮ ಜಯಂತಿ ಆಚರಣೆ ಜರಗಲಿದ್ದು ಬೆಳಿಗ್ಗೆ ಗಂಟೆ 6.30ಕ್ಕೆ ಕಲಶ ಪ್ರತಿಷ್ಠೆ ಗಣಹೋಮ, 7.00ಕ್ಕೆ ನಂದಾದೀಪ ಪ್ರಜ್ವಲನೆ ಹನುಮಾನ್ ಚಾಲೀಸ್ ಪಠಣ, 8.00ಕ್ಕೆ ವಿವಿಧ ತಂಡಗಳಿಂದ ಭಜನೆ ಪ್ರಾರಂಭಗೊಂಡು ಸಂಜೆ ಗಂಟೆ 6.00ಕ್ಕೆ ಮಹಾಪೂಜೆ ಬಳಿಕ ಪ್ರಸಾದ ವಿತರಣೆ ನಡೆಯಲಿದೆ.
ಸಂಜೆ ಧಾರ್ಮಿಕ ಕಾರ್ಯಕ್ರಮ ಜರುಗಲಿದ್ದು ವೇದಮೂರ್ತಿ ವಾದಿರಾಜ ಉಪಾಧ್ಯಾಯ ಕೊಲಕಾಡಿ ಆಶೀರ್ವಚನ ನೀಡಲಿದ್ದಾರೆ. ಹಿಂದೂ ಯುವ ಸೇನೆ ಕೇಂದ್ರಿಯ ಮಂಡಳಿ, ಮಂಗಳೂರು ಇದರ ಗೌರವಾಧ್ಯಕ್ಷ ಭಾಸ್ಕರ್ ಚಂದ್ರ ಶೆಟ್ಟಿ, ಮಂಗಳೂರು ಉತ್ತರ ಶಾಸಕ ಡಾ| ವೈ, ಭರತ್ ಶೆಟ್ಟಿ, ಯಶ್‌ಪಾಲ್ ಎ. ಸುವರ್ಣ, ಸುರೇಶ್ ಶೆಟ್ಟಿ ಗುರ್ಮೆ, ಉದ್ಯಮಿ ಸತೀಶ್ ಮುಂಚೂರು, ಸಂತೋಷ್, ಸಂತೋಷ್ ಪೈ ಎಚ್. ಆರ್., ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಸುಧಾಕರ ಪೂಂಜ, ಅಗರಿ ರಾಘವೇಂದ್ರ ರಾವ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ” ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಗೌರವಾಧ್ಯಕ್ಷ ಸುಕುಮಾರ್ ತಡಂಬೈಲ್, ಗೌರವಾಧ್ಯಕ್ಷ ಪುರುಷೋತ್ತಮ್ ಬಂಗೇರ, ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಕಾರ್ಯಾಧ್ಯಕ್ಷ ನಾಗೇಶ್ ಶೆಟ್ಟಿ, ಮಂಜು ಸುರತ್ಕಲ್, ನವೀನ್ ಮುಕ್ಕ, ಪೃಥ್ವಿರಾಜ್ ಶೆಟ್ಟಿ ಕಡಂಬೋಡಿ, ದೀಪಕ್ ಶೆಟ್ಟಿ, ರಾಘವೇಂದ್ರ ರಾವ್ ಮತ್ತಿತರರು ಉಪಸ್ಥಿತರಿದ್ದರು.