ಮಾ. 5-13: ಚಿತ್ರಾಪುರ ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ

ಸುರತ್ಕಲ್: ಐತಿಹಾಸಿಕ ಹಿನ್ನಲೆಯುಳ್ಳ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಚಿತ್ರಾಪುರ ಇಲ್ಲಿ ಮಾ.5ರಿಂದ 13ರವೆಗೆ ಬ್ರಹ್ಮಕಲಶೋತ್ಸವ ಹಾಗೂ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಉಮೇಶ್ ಟಿ.ಕರ್ಕೇರ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.
ಚಿತ್ರಾಪುರ ಮಠದ ಶ್ರೀಶ್ರೀ ವಿದ್ಯೇಂದ್ರ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ , ಕುಡುಪು ವೇ.ಮೂ ನರಸಿಂಹ ತಂತ್ರಿಗಳ ನೇತೃತ್ವದಲ್ಲಿ , ವೇ.ಮೂ ಕೃಷ್ಣರಾಜ ತಂತ್ರಿ ಮಾರ್ಗದರ್ಶನದಲ್ಲಿ , ಪ್ರಧಾನ ಅರ್ಚಕರಾದ ಸುಬ್ರಹ್ಮಣ್ಯ ಭಟ್ ,ಕಾರ್ತಿಕ್ ಭಟ್ ಹಾಗೂ ಅರ್ಚಕ ವರ್ಗದ ಸಹಕಾರದಲ್ಲಿ ಧಾರ್ಮಿಕ ಪ್ರಕ್ರಿಯೆ ನೆರವೇರಲಿದೆ.
ಮಾ.5ರಂದು ಬೆಳಗ್ಗೆ ತೋರಣ,ಉಗ್ರಾಣ ಮುಹೂರ್ತ, ಶ್ರೀದೇವಿಯ ಮುಖ್ಯದ್ವಾರಕ್ಕೆ , ಒಳದ್ವಾರಕ್ಕೆ ಬೆಳ್ಳಿಯ ಕವಚ, ಶ್ರೀಗಣಪತಿ , ಶಾಸ್ತಾ ದೇವರಿಗೆ ಬೆಳ್ಳಿ ಕವಚ ಸಮರ್ಪಣೆ,ಅನ್ನಸಂತರ್ಪಣೆ, ಸಂಜೆ 5ಕ್ಕೆ ಹೆದ್ದಾರಿ ಬದಿಯ ರಾಜಗೋಪುರದ ಉದ್ಘಾಟನೆ ನಡೆಯಲಿದೆ ಪಲಿಮಾರು ಮಠದ ಶ್ರೀ ಶ್ರೀ ವಿದ್ಯಾಧೀಶ ತೀರ್ಥ ಮತ್ತು ಕಿರಿಯ ಸ್ವಾಮೀಜಿ ವಿದ್ಯಾರಾಜೇಶ್ವರ ತೀರ್ಥರು `ಧಾರ್ಮಿಕ ಮತ್ತು ಸಾಂಸ್ಕಂತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಬಳಿಕ 6ರಿಂದ ಕಟೀಲು ಮೇಳದಿಂದ ಯಕ್ಷಗಾನ ಬಯಲಾಟ ಜರಗಲಿದೆ.


ಪ್ರತೀ ದಿನ ಧಾರ್ಮಿಕ ಸಾಂಸ್ಕಂತಿಕ ಕಾರ್ಯಕ್ರಮವಿದ್ದು, ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಮಾ.12ರಂದು ಚಂಡಿಕಾಯಾಗ ಮಾ.13ರಂದು ಬೆಳಗ್ಗೆ 10.30ರ ಮುಹೂರ್ತದಲ್ಲಿ ಶ್ರೀದೇವಿಗೆ ಬ್ರಹ್ಮಕಲಶ .ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಲಿದೆ.
ಬಳಿಕ ಸಂಜೆ 6ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಕುಡುಪು ವೇ.ಮೂ ನರಸಿಂಹ ತಂತ್ರಿಗಳಿಗೆ ಗೌರವಾಭಿನಂದನೆ ನಡೆಯಲಿದ್ದು, ಪೇಜಾವರ ಮಠದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ಶ್ರೀಶ್ರೀ ವಿದ್ಯೇಂದ್ರತೀರ್ಥ ಶ್ರೀಪಾದರು, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಡಾ.ಭರತ್ ಶೆಟ್ಟಿ ವೈ , ನಾಡೋಜ ಜಿ.ಶಂಕರ್ ಮತ್ತಿತರರು ಉಪಸ್ಥಿತರಿರುವರು.
ದೇವಸ್ಥಾನವು ಸುಮಾರು 12 ಕೋಟಿ ರೂ.ವೆಚ್ಚದಲ್ಲಿ ವಾಸ್ತು ಸಹಿತ ಸುಂದರ ಕೆತ್ತನೆಗಳೊಂದಿಗೆ ನಿರ್ಮಾಣವಾಗಿದೆ. ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಡಾ.ಭರತ್ ಶೆಟ್ಟಿ ವೈ ಅವರು ಸರಕಾರದಿಂದ 2 ಕೋಟಿ ರೂ ದೊರಕಿಸುವ ಭರವಸೆ ನೀಡಿದ್ದಾರೆ. ದಾನಿಗಳು, ಊರಿನ ಭಕ್ತವರ್ಗ, ಸಂಘ ಸಂಸ್ಥೆಗಳು, ಉದ್ಯಮಿಗಳು ಹೀಗೆ ಸರ್ವರ ತನು ಮನ ಧನಗಳ ಸಹಕಾರದಲ್ಲಿ ಜೀರ್ಣೋದ್ಧಾರವಾಗಿದೆ. ಭಕ್ತರ ಆಶಯದಂತೆ ಚಿನ್ನಕಲಶ, ಶ್ರೀದೇವಿಗೆ ಚಿನ್ನದ ಮಲ್ಲಿಗೆ , ಬೆಳ್ಳಿಯ ಕಲಶ ಪೂಜೆ ನಡೆಯಲಿದೆ. ಸೇವೆ ನೀಡುವ ಭಕ್ತಾಧಿಗಳು ಉದಾರ ಕೊಡುಗೆ ಕ್ಷೇತ್ರಕ್ಕೆ ನೀಡಬಹುದಾಗಿದೆ ಎಂದರು.
ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುವ ನಿರೀಕ್ಷೆ ಇರುವುದರಿಂದ ಪಾರ್ಕಿಂಗ್ ವ್ಯವಸ್ಥೆ,
ಏಕ ಮುಖ ಸಂಚಾರ ವ್ಯವಸ್ಥೆ,ಮತ್ತಿತರ ಸಕಲ ಯೋಜನೆ ಕೈಗೊಳ್ಳಲಾಗಿದೆ. ಅನ್ನಸಂತರ್ಪಣೆಗೆ ವಿಶೇಷ ಕ್ರಮ ಕೈಗೊಳ್ಳಲಾಗಿದ್ದು, ಹಿರಿಯರಿಗೆ ಮಕ್ಕಳಿಗೆ ಪ್ರತ್ಯೇಕ ವ್ಯವಸ್ಥೆಯಿದೆ ಎಂದರು.
ದೇವಸ್ಥಾನದ ಕೆಲಸ ಕಾರ್ಯಗಳಲ್ಲಿ ವಿವಿಧ ಸಂಘ ಸಂಸ್ಥೆ, ಮಹಿಳಾ ಸಂಸ್ಥೆಗಳ ಸದಸ್ಯರು ನಿತ್ಯ ಕರಸೇವೆ ಮಾಡುತ್ತಾ ಕ್ಷೇತ್ರದ ಜೀರ್ಣೊದ್ದಾರ ,ಸ್ವಚ್ಚತೆ ಕಾಯಕದಲ್ಲಿ ಕೈಜೋಡಿಸಿ ಅಹರ್ನಿಶಿ ಕೆಲಸ ಮಾಡುತ್ತಾ ಬಂದಿದ್ದಾರೆ. ಬ್ರಹ್ಮಕಲಶೋತ್ಸವದ ಬಳಿಕ ಮಾ.14ರಿಂದ 23ರವರೆಗೆ ಜಾತ್ರಾ ಮಹೋತ್ಸವ ನಡೆಯಲಿದೆ ಎಂದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಕೇಶವ ಸಾಲ್ಯಾನ್ ಮಾತನಾಡಿ, ಆಮಂತ್ರಣ ಪತ್ರವನ್ನು ಈಗಾಗಲೇ ಭಕ್ತಾಧಿಗಳಿಗೆ ತಲುಪಿಸಲಾಗಿದೆ.
ಪ್ರಧಾನ ಕಾರ್ಯದರ್ಶಿ ಗಣೇಶ ಹೊಸಬೆಟ್ಟು, ಸುರೇಶ್ ಭಟ್, ವಿಷ್ಣುಮೂರ್ತಿ ಐಗಳ್,ಹರೀಶ್ ಶೆಟ್ಟಿ, ಪದ್ಮನಾಭ ಸುವರ್ಣ, ಆರ್.ಕೆ ಪುರುಷೋತ್ತಮ್, ಮೋಹನ್ ದಾಸ್, ಹೆಚ್.ಎಲ್ ರಾವ್, ಲಕ್ಷ್ಮಣ ಅಮೀನ್, ಶರತ್ ಕುಮಾರ್, ಕೃಷ್ಣ ಶೆಟ್ಟಿ,ಶಿವಾಜಿ ದೇವಾಡಿಗ, ಶಶಿಧರ ಕೋಡಿಕಲ್, ದೇವಿಪ್ರಸಾದ್ ಶೆಟ್ಟಿ, ಪವಿತ್ರ ನಿರಂಜನ್ , ಎರಡೂ ಸಮಿತಿಯ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.

error: Content is protected !!