“ಲೋಕಾಯುಕ್ತವನ್ನು ಮುಗಿಸಿದ ಕಾಂಗ್ರೆಸಿಗರಿಂದ ಭ್ರಷ್ಟಾಚಾರದ ಪಾಠ ಕಲಿಯಬೇಕಿಲ್ಲ”

ಸುರತ್ಕಲ್: ಭ್ರಷ್ಟಾಚಾರ ನಿಗ್ರಹಕ್ಕೆ ಜಾರಿಗೆ ತಂದಿದ್ದ ಲೋಕಾಯುಕ್ತವನ್ನು ಉಸಿರು ಕಟ್ಟಿಸಿ ಮುಗಿಸಿದ್ದೇ ಹಿಂದಿನ ಕಾಂಗ್ರೆಸ್ ಸರಕಾರ. ಹೀಗಿರುವಾಗ ಅದೇ ಕಾಂಗ್ರೆಸ್ ಮುಖಂಡರಿಂದ ಭ್ರಷ್ಟಾಚಾರದ ಬಗ್ಗೆ ಪಾಠ ಕಲಿಯುವ ಅಗತ್ಯವಿಲ್ಲ. ಕಾಂಗ್ರೆಸ್ ಚುನಾವಣಾ ಉಸ್ತುವಾರಿ ರಣ್ ದೀಪ್ ಸಿಂಗ್ ಸುರ್ಜೆವಾಲಾ ಕರ್ನಾಟಕ ಸರಕಾರ, ಮುಖ್ಯಮಂತ್ರಿಯವರ ಬಗ್ಗೆ ಕೇವಲವಾಗಿ ಮಾತಾಡುವ ಮುನ್ನ ಅವರದ್ದೇ ಸರಕಾರ, ಮುಖಂಡರ ಭ್ರಷ್ಟಾಚಾರ ಮತ್ತು ಹಗರಣಗಳ ಬಗ್ಗೆ ತಿಳಿದುಕೊಳ್ಳುವುದು ಉತ್ತಮ” ಎಂದು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ವೈ. ಹೇಳಿದ್ದಾರೆ.
“ನನ್ನ ಕ್ಷೇತ್ರದ ಮಾಜಿ ಶಾಸಕ ಮೊಯಿದೀನ್ ಬಾವಾ ಅವರು ಕಳೆದ ಚುನಾವಣೆ ಸಂದರ್ಭ ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ 500 ಕೋಟಿ ರೂ. ಮೊತ್ತದ ಕಾಮಗಾರಿ ನಡೆಸಿದ್ದಾಗಿ ಹೇಳಿದ್ದರು. ಆದರೆ ನಾನು ನನ್ನ ಕ್ಷೇತ್ರದಲ್ಲಿ ಎರಡು ವರ್ಷ ಕೊರೋನಾ ಸಂಕಷ್ಟದ ಅವಧಿಯನ್ನು ಹೊರತುಪಡಿಸಿ 2000 ಕೋಟಿ ರೂ. ಅನುದಾನದಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದೇನೆ” ಎಂದು ಭರತ್ ಶೆಟ್ಟಿ ತಿರುಗೇಟು ನೀಡಿದರು.

error: Content is protected !!