ಸುರತ್ಕಲ್: ಮನಪಾ ಸದಸ್ಯ ವರುಣ್ ಚೌಟ ಪ್ರತಿನಿಧಿಸುವ ಹೊಸಬೆಟ್ಟು ವಾರ್ಡ್ ನಂಬ್ರ 8ರಲ್ಲಿ 3.21 ಕೋಟಿ ರೂ.ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಶಾಸಕರಾದ ಡಾ.ಭರತ್ ಶೆಟ್ಟಿ ವೈ ಅವರು ಶುಕ್ರವಾರ ಗುದ್ದಲಿಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, “ಕಡಂಬೋಡಿ ರಸ್ತೆ ಕಾಂಕ್ರೀಟ್ ಕಾಮಗಾರಿ 1 ಕೋ.ರೂ. ಮೂಡುಪಟ್ಣ ಜಾರಂದಾಯ ದೈವಸ್ಥಾನ ರಸ್ತೆಗೆ 25 ಲ.ರೂ., ಶಿವಗಿರಿ ನಗರ ರಸ್ತೆ ಕಾಂಕ್ರಿಟ್‍ಗೆ 38 ಲ.ರೂ., ಎನ್‍ಎಂಪಿಟಿ ಕಾಲೊನಿ ರಸ್ತೆ ಕಾಂಕ್ರಿಟ್‍ಗೆ 38 ಲಕ್ಷ ರೂ., ನವಗಿರಿ ನಗರ ರಾಜಕಾಲುವೆಗೆ ತಡೆಗೋಡೆ ನಿರ್ಮಾಣಕ್ಕೆ 40 ಲಕ್ಷ ರೂ., ವೃಂದಾವನ ನಗರ ತಡೆಗೋಡೆಗೆ 50 ಲ.ರೂ., ಗ್ರೀನ್ ಪಿಚ್ ಸಮೀಪ ರಸ್ತೆ ಅಭಿವೃದ್ಧಿಗೆ 30 ಲ.ರೂ ಕಾದಿರಿಸಲಾಗಿದ್ದು ವಾರ್ಡ್ ಗೆ ಕಳೆದ 2 ವರ್ಷದಲ್ಲಿ ಅಂದಾಜು 10 ಕೋ.ರೂ ಅನುದಾನ ನೀಡಿ ಹಂತ ಹಂತವಾಗಿ ಅಭಿವೃದ್ಧಿಗೆ ಹೆಜ್ಜೆ ಇರಿಸಲಾಗಿದೆ. ಸಿಎಂ ವಿಶೇಷ ಅನುದಾನ, ಲೋಕೋಪಯೋಗಿ, ಸಮಾಜ ಕಲ್ಯಾಣ ಇಲಾಖಾ ಸಚಿವ ಶ್ರೀನಿವಾಸ ಪೂಜಾರಿ, ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಅವರು ಅನುದಾನ ಒದಗಿಸಿದ್ದಾರೆ. ಸಣ್ಣ ನೀರಾವರಿ ಇಲಾಖೆಯಿಂದ ತಡೆಗೋಡೆ ನಿರ್ಮಾಣಕ್ಕೆ ಕ್ರಮ ಜರುಗಿಸಲಾಗಿದೆ” ಎಂದರು.
“ಸ್ಥಳೀಯವಾಗಿ ಒಳಚರಂಡಿ ವ್ಯವಸ್ಥೆಯನ್ನು ಪೂರ್ಣಗೊಳಿಸುವುದಕ್ಕೆ ಒತ್ತು ನೀಡಲಾಗುದು. ಎಡಿಬಿ 2ರ ಹಂತದಲ್ಲಿ ಅನುದಾನ ನೀಡಲಾಗಿದೆ. ಸಂಪರ್ಕ ಮಾಡುವುದು ಬಾಕಿಯಿದೆ. ಈ ಹಿಂದೆ ಕೈ ಬಿಡಲಾಗಿದ್ದ ಒಳಚರಂಡಿ ವ್ಯವಸ್ಥೆ ಪೂರ್ಣಕ್ಕೆ ಸಿಎಂ ಆನುದಾನ ನೀಡುವ ಭರವಸೆ ವ್ಯಕ್ತಪಡಿಸಿದ್ದಾರೆ” ಎಂದು ಇದೇ ಸಂದರ್ಭದಲ್ಲಿ ಸಾಸಕರು ಹೇಳಿದರು.
ಮನಪಾ ಸದಸ್ಯ ವರುಣ್ ಚೌಟ, ವಿಠಲ್ ಸಾಲಿಯಾನ್, ಓಂಪ್ರಕಾಶ್ ಶೆಟ್ಟಿಗಾರ್, ಪಿ.ದಯಾಕರ್, ಆನಂದ್ ಭಂಡಾರಿ, ಬಿ.ಎ ಶೆಟ್ಟಿ, ಶಾಂತಾ ರವೀಂದ್ರ, ವಸಂತ್ ಹೊಸಬೆಟ್ಟು, ರಮೇಶ್ ಅಳಪೆ, ಪವಿತ್ರ ನಿರಂಜನ್, ಬಾಲಕೃಷ್ಣ ಶೆಟ್ಟಿ ಕೆಂಚನೂರು, ರಾಜೇಶ್ ಶೆಟ್ಟಿ, ಲೀಲಾವತಿ, ಸುದರ್ಶನ್ ಮೆಂಡನ್, ರಾಜೇಶ್, ಪ್ರಕಾಶ್ ಕಡಂಬೋಡಿ, ರಾಜೇಶ್ ಭಂಡಾರಿ, ದಿವ್ಯಾ, ದೀಪ, ವಿಶ್ವನಾಥ್ ಮತ್ತಿತರರು ಉಪಸ್ಥಿತರಿದ್ದರು.