ಸುರತ್ಕಲ್: “ತುಳು ಭಾಷೆಗೆ 2600 ವರ್ಷಗಳ ಸುಧೀರ್ಘ ಇತಿಹಾಸ ಕಂಡು ಬಂದಿದ್ದು ,ಅರ್ಹವಾಗಿ
ತುಳು ಭಾಷೆಗೆ ಮಾನ್ಯತೆ ಸಿಗುವಂತೆ ಮಾಡಲು ರಾಜ್ಯದ ಬಿಜೆಪಿ ಸರಕಾರ ಡಾ.ಮೋಹನ್ ಆಳ್ವ ಅವರ ನೇತೃತ್ವದಲ್ಲಿ ಸಮಿತಿ ರಚಿಸಿ ಆದೇಶಿಸಿರುವುದು ಸ್ವಾಗತಾರ್ಹ ಬೆಳವಣಿಗೆ” ಎಂದು ತುಳುವೆರ ಕುಡ್ಲ ಸಂಘಟನೆಯ ಅಧ್ಯಕ್ಷ ಪ್ರತೀಕ್ ಪೂಜಾರಿ ಹೇಳಿದ್ದಾರೆ.
ಸಂವಿಧಾನದ 8ನೇ ಪರಿಚ್ಛೇದಕ್ಕೆ ತುಳು ಭಾಷೆಯನ್ನು ಸೇರಿಸಬೇಕೆಂದು ತುಳುವರ ಬೇಡಿಕೆಯಾಗಿದೆ.
ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾದ ಪ್ರಾದೇಶಿಕ ಭಾಷೆಯಾದ ತುಳುವಿಗೆ ಹೆಚ್ಚಿನ ಮಾನ್ಯತೆ ಸಿಗುವ ಬಗ್ಗೆ ಕರ್ನಾಟಕ ಸರ್ಕಾರ ಸ್ಪಂದಿಸಿ ಒಂದು ಹೆಜ್ಜೆ ಮುಂದಿರಿಸಿದೆ.
ವಿಶೇಷ ಮುತುವರ್ಜಿ ವಹಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಸುನಿಲ್ ಕುಮಾರ್ ಹಾಗೂ ಇದಕ್ಕಾಗಿ ವಿಧಾನಸಭೆಯಲ್ಲಿ ನಿರಂತರವಾಗಿ ಧ್ವನಿ ಎತ್ತುತ್ತಾ ಬಂದಿರುವ ತುಳುವ ಶಾಸಕರುಗಳಿಗೆ ಸಂಘಟನೆಯ ವತಿಯಿಂದ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.