“ಕೆಲವೇ ತಿಂಗಳಲ್ಲಿ ಸುರತ್ಕಲ್ ಜಂಕ್ಷನ್ ಗೆ ಹೈಟೆಕ್ ರೂಪ” -ಶಾಸಕ ವೈ. ಭರತ್ ಶೆಟ್ಟಿ

ಸುರತ್ಕಲ್: “ಅಭಿವೃದ್ಧಿ ಕಾರ್ಯಗಳು ವೇಗ ಪಡೆದುಕೊಂಡಿದ್ದು ಸುರತ್ಕಲ್ ಜಂಕ್ಷನ್ ಹೊಸ ರೂಪ ಪಡೆಯಲಿದೆ. ವಾಹನ ಓಡಾಟ ಸುಗಮವಾಗಲು ಎಲ್ಲಾ ಪ್ರಯತ್ನ ನಡೆಸಲಾಗುವುದು” ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ. ಹೇಳಿದರು. ಸುರತ್ಕಲ್‌ ಜಂಕ್ಷನ್‌ ಅಭಿವೃದ್ಧಿಗೆ ಬುಧವಾರ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
“ಕೊಟ್ಟಾರ ಜಂಕ್ಷನ್ 5 ಕೋಟಿ ರೂ., ಕುಳಾಯಿ ಜಂಕ್ಷನ್‌ 3.5 ಕೋಟಿ ರೂ.ಸುರತ್ಕಲ್‌ ಜಂಕ್ಷನ್ ಅಭಿವೃದ್ಧಿಗೆ ಈ ಪ್ರಿಮಿಯರ್ ಎಫ್‌ಎ ಆರ್ ನಿಂದ 5 ಕೋಟಿ ಅನುದಾನ ಒದಗಿಸಲಾಗಿದೆ. ಕುಳಾಯಿ ಸುರತ್ಕಲ್‌ನಲ್ಲಿ ಏಕ ಕಾಲದಲ್ಲಿ ಕಾಮಗಾರಿ ಕೈಗೊಂಡಲ್ಲಿ ವಾಹನ ಓಡಾಟಕ್ಕೆ ಅಡಚಣೆ ಆಗುವ ಹಿನ್ನೆಲೆಯಲ್ಲಿ ಮೊದಲು ಸುರತ್ಕಲ್ ನಲ್ಲಿ ಸರ್ವಿಸ್ ರಸ್ತೆಯನ್ನು ನಿರ್ಮಿಸಿ ಬಳಿಕ ವೃತ್ತ ನಿರ್ಮಾಣ ಮಾಡಲಾಗುವುದು. ಬಳಿಕ ಇತರ ಕಾಮಗಾರಿ ಆರಂಭಿಸಲಾಗುದು” ಎಂದರು.
ಈಗಾಗಲೇ ಬೋಂದೆಲ್ ನಲ್ಲಿ ಸರ್ವಜ್ಞ ಸರ್ಕಲ್, ಸುರತ್ಕಲ್ ನಲ್ಲಿ ಪಾಲಿಕೆಯ ಅನುಮತಿಯೊಂದಿಗೆ ವೀರ ಸಾವರ್ಕರ್ ವೃತ್ತಕ್ಕೆ ಹೆಸರಿಡುವ ಪ್ರಕ್ರಿಯೆ ಆರಂಭವಾಗಿದೆ. ಕೊಟ್ಟಾರದಲ್ಲಿ ವೀರ ಯೋಧರ ಸ್ಮರಣಾರ್ಥವಾಗಿ ವೃತ್ತ ನಿರ್ಮಿಸಲಾಗುವುದು” ಎಂದರು.
“ಕೊರೊನಾ ಬಳಿಕ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆ ಆಗದಂತೆ ಕ್ರಮ ಜರುಗಿಸಿದ್ದೇವೆ. ಮೂಲಸೌಕರ್ಯ ಕಾಮಗಾರಿ ಹಿಂದೆಂದೂ ಆಗದಷ್ಟು ವೇಗವಾಗಿ ನಡೆದಿದೆ. ಮೂರ್ನಾಲ್ಕು ವಾರಗಳಲ್ಲಿ ಅಂದಾಜು 60 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಮುಂದಿನ ಮೂರು ತಿ೦ಗಳ ಒಳಗಾಗಿ ಪೂರ್ಣಗೊಳಿಸಲಾಗುವುದು. ಪಾರ್ಕ್ ನಿರ್ಮಾಣ, ಅಂತರ್ಜಲ ವೃದ್ಧಿಗಾಗಿ ಕೆರೆ ಅಭಿವೃದ್ಧಿ ಅನುಷ್ಠಾನಗೊಳಿಸಲಾಗಿದೆ” ಎಂದರು.
ಮಂಗಳೂರು ಮೇಯರ್ ಜಯಾನಂದ ಅಂಚನ್, ಸ್ಥಳೀಯ ಮನಪಾ ಸದಸ್ಯರಾದ ವವರುಣ್ ಚೌಟ, ಸರಿತ ಶಶಿಧರ್, ಶ್ವೇತ ಪೂಜಾರಿ, ನಯನ ಆರ್. ಕೋಟ್ಯಾನ್, ಶೋಭಾ ರಾಜೇಶ್, ಲಕ್ಷ್ಮೀ ಶೇಖರ್ ದೇವಾಡಿಗ, ಸುನಿತಾ, ಸುಮಿತ್ರ ಕರಿಯ, ಮಾಜಿ ಮನಪಾ ಸದಸ್ಯ ಅಶೋಕ್ ಶೆಟ್ಟಿ ತಡಂಬೈಲ್, ಸಮಾಜ ಸೇವಕ‌ ಮಹಾಬಲ ಪೂಜಾರಿ ಕಡಂಬೋಡಿ, ಬಿಜೆಪಿ ಮುಖಂಡರಾದ ಮಹೇಶ್ ಮೂರ್ತಿ ಸುರತ್ಕಲ್‌, ವಿಠಲ ಸಾಲಿಯಾನ್, ಗಣೇಶ್ ಹೊಸಬೆಟ್ಟು, ಯೋಗೀಶ್ ಸನಿಲ್ ಕುಳಾಯಿ, ಮಂಗಳೂರು ಉತ್ತರ ಯುವಮೋರ್ಚಾ ಅಧ್ಯಕ್ಷ ಭರತ್ ರಾಜ್ ಕೃಷ್ಣಾಪುರ, ರಾಘವೇಂದ್ರ ಶೆಣೈ, ಅಶೋಕ್ ಅಗರಮೇಲು, ಮನಿಶ್, ಸುರತ್ಕಲ್‌ ಬಂಟರ ಸಂಘದ ಅಧ್ಯಕ್ಷ ಸುಧಾಕರ ಪೂಂಜಾ‌, ಜಯಂತ್ ಸಾಲಿಯಾನ್, ಗುಣಕರ ಶೆಟ್ಟಿ, ಸುರೇಶ್, ಪವಿತ್ರ ನಿರಂಜನ್‌, ಸುಲತ ಅಗರಮೇಲು ಮತ್ತಿತರರು ಉಪಸ್ಥಿತರಿದ್ದರು.

ಮಾಜಿ ಶಾಸಕ ಮೊಯಿದೀನ್ ಬಾವಾ ಅವರ ಟೀಕೆಗೆ ಸಂಬಂಧಿಸಿ ಉತ್ತರಿಸಿದ ಶಾಸಕ ಡಾ.ಭರತ್ ಶೆಟ್ಟಿ ವೈ. ಅವರು, “ಸುರತ್ಕಲ್ ಮಾರುಕಟ್ಟೆ ವಿಚಾರದಲ್ಲಿ ಆಗಿರುವ ಸಮಸ್ಯೆಗಳ ಕುರಿತು ಸಚಿವ ಬೈರತಿ ಬಸವರಾಜ್ ಅವರೇ ವಿಧಾನಸಭೆಯಲ್ಲಿ ಉತ್ತರ ನೀಡಿದ್ದಾರೆ. ಅರೆಬರೆ ಜಮೀನು ನೀಡಿ ನನ್ನ ಸಾಧನೆ ಎಂದು ಬಿಂಬಿಸಲು ಹೋಗಿ ನನಗೆ ಕಷ್ಟ ತಂದಿಟ್ಟಿದ್ದಾರೆ. ಇದೀಗ ನನ್ನ ಮೇಲೆ ಆರೋಪ ಮಾಡಿದ್ದಾರೆ. ಅವರ ಮಾರುಕಟ್ಟೆ ಸಂಕೀರ್ಣವನ್ನು ನಾನು ಪೂರ್ಣಗೊಳಿಸುತ್ತಿದ್ದೇನೆ. ಎರಡನೇ ಹಂತಕ್ಕೆ ಟೆಂಡರ್ ಕರೆಯಲಾಗಿದೆ” ಎಂದರು.
“ಅಂತರ್ಜಲ ಹಾಗೂ ಒಳಚರಂಡಿ ವ್ಯವಸ್ಥೆ ಕುಲಗೆಡಿಸಿದ್ದೇ ಕಾಂಗ್ರೆಸ್ ಶಾಸಕರ ಸಾಧನೆಯಾಗಿದೆ.
ಸಾಧನೆ ಎಂದು ಬಿಂಬಿಸಲು ತುರ್ತಾಗಿ ಉದ್ಘಾಟಿಸಿ ಸಮಸ್ಯೆ ಸೃಷ್ಟಿಸಿ ಮಾಡಿ ಜನರಿಗೆ ಒಳಚರಂಡಿ ವ್ಯವಸ್ಥೆ ದೊರಕದಂತೆ ಮಾಡಿದ್ದಾರೆ. ಈ ಸಮಸ್ಯೆ ಪರಿಹಾರಕ್ಕೆ ನಾನೇ ಸ್ವತಃ ಒಳಚರಂಡಿ ದುರಸ್ತಿಗೆ ಎಡಿಬಿಯಿಂದ ಅನುದಾನ ತಂದಿದ್ದೇನೆ” ಎಂದು ಉತ್ತರಿಸಿದರು.

error: Content is protected !!