ಬಜಾಜ್ ಕ್ಯೂಟ್ ಆಟೋ ಟ್ಯಾಕ್ಸಿ ಮಾರುಕಟ್ಟೆಗೆ ಬಿಡುಗಡೆ

 


ಮಂಗಳೂರು: ಬಜಾಜ್ ಕ್ಯೂಟ್ ಆಟೋ ಟ್ಯಾಕ್ಸಿಯನ್ನು ಸೋಮವಾರ ನಗರದ ಪುರಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಲಾಯಿತು.


ಈ ವೇಳೆ ಮಾತಾಡಿದ ಬಜಾಜ್ ಆಟೋ ಲಿಮಿಟೆಡ್ ಇದರ ಅಧ್ಯಕ್ಷ ಸಮರ್ ದೀಪ್ ಸುಭಂಧ್ ಅವರು, “ಬಜಾಜ್ ಕ್ಯೂಟ್ ದೇಶದ ಮೊದಲ ಆಟೋ ಟ್ಯಾಕ್ಸಿ ಆಗಿದ್ದು ಇದನ್ನು ಈಗಾಗಲೇ ಪಡೆದಿರುವ ಗ್ರಾಹಕರು ಮತ್ತು ಪ್ರಯಾಣಿಕರು ಖುಷಿಯಿಂದ ಸ್ವಾಗತಿಸಿದ್ದಾರೆ. ಮಂಗಳೂರು ರಾಜ್ಯದ ಎರಡನೇ ದೊಡ್ಡ ನಗರವಾಗಿದ್ದು ಹೀಗಾಗಿ ಬೆಂಗಳೂರು ಬಳಿಕ ಮಂಗಳೂರಿನಲ್ಲಿ ಕ್ಯೂಟ್ ಅನ್ನು ಗ್ರಾಹಕರಿಗೆ ಸಮರ್ಪಸಲಾಗುತ್ತಿದೆ. ಕ್ಯೂಟ್ ವಾಹನವು ಹೆಸರಿನಂತೆಯೇ ಕ್ಯೂಟ್ ಆಗಿದ್ದು ಪ್ರಯಾಣಿಕರ ರಕ್ಷಣೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಕಂಪೆನಿ ಅನೇಕ ವೈಶಿಷ್ಟ್ಯತೆಯ ಜೊತೆಗೆ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ” ಎಂದು ಹೇಳಿದರು.
ವೇದಿಕೆಯಲ್ಲಿ ಬಜಾಜ್ ಆಟೋ ಲಿಮಿಟೆಡ್ ಇದರ ಅಧ್ಯಕ್ಷ ಸಮರ್ ದೀಪ್ ಸುಭಂಧ್, ಮಂಗಳೂರು ಆರ್ ಟಿ ಓ ಅಧಿಕಾರಿ ವಿಶ್ವನಾಥ್ ನಾಯ್ಕ್, ಆರೂರ್ ಕಿಶೋರ್ ರಾವ್, ಅರ್ಜುನ್ ರಾವ್, ಶುಭಾಶ್ಚಂದ್ರ ಹೆಗ್ಡೆ, ಗೌರವ್ ರಾಠೋಡ್, ಮಂಗಳೂರು ಆಟೋ ಟ್ಯಾಕ್ಸಿ ಮತ್ತು ಮ್ಯಾಕ್ಸಿ ಕ್ಯಾಬ್ ಯೂನಿಯನ್ ಅಧ್ಯಕ್ಷ ದಿನೇಶ್, ಪ್ರಭಾಕರ್ ರಾವ್ ಉಪಸ್ಥಿತರಿದ್ದರು. ರಾಘವೇಂದ್ರ ಪ್ರಸಾದ್ ವಂದಿಸಿದರು.

ಬಜಾಜ್ ಆಟೋ ಟ್ಯಾಕ್ಸಿಯ ಮೊದಲ ಐವರು ಗ್ರಹಕರಾದ ಚಂದ್ರಶೇಖರ ಪುತ್ತೂರು, ಅನಿಶ್ ಮಂಗಳೂರು, ಮನೋರಂಜಿತ್ ಮಂಗಳೂರು, ಮುಹಮ್ಮದ್ ಷರೀಫ್, ಫಝಲ್ ಮಂಗಳೂರು ಇವರಿಗೆ ವಾಹನದ ಕೀ ಹಸ್ತಾಂತರಿಸಲಾಯಿತು.

error: Content is protected !!