ಸುರತ್ಕಲ್: ಇಲ್ಲಿನ ಅನಧಿಕೃತ ಟೋಲ್ ಗೇಟ್ ನಲ್ಲಿ ಡಿ.1ರಿಂದ ವಾಹನಗಳಿಗೆ ಸುಂಕ ಪಡೆಯುವುದಿಲ್ಲ ಎಂದು ಜಿಲ್ಲಾಧಿಕಾರಿ ರವಿಕುಮಾರ್ ಸ್ಪಷ್ಟಪಡಿಸಿದ್ದಾರೆ.
ಈಗಾಗಲೇ ಸುರತ್ಕಲ್ ಟೋಲ್ ಅನ್ನು ಹೆಜಮಾಡಿ ಟೋಲ್ ಜೊತೆಗೆ ವಿಲೀನ ಮಾಡುವುದಾಗಿ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿಕೆ ನೀಡಿದ್ದರು. ಆದರೆ ಹೆಜಮಾಡಿ ಟೋಲ್ ನಲ್ಲಿ ವಾಹನಗಳಿಗೆ ದುಪ್ಪಟ್ಟು ಸುಂಕ ವಸೂಲಿ ಮಾಡಲು ಮುಂದಾಗಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.