ನಾಳೆ ಸುರತ್ಕಲ್ ಬಂಟರ ಭವನದಲ್ಲಿ “ರಂಗ ಚಾವಡಿ” ಸಂಭ್ರಮ! “ಬಲೇ ತೆಲಿಪುಲೆ” ಹಾಸ್ಯ ರಸಾಯಣ!!

ಸುರತ್ಕಲ್: ನಾಳೆ (ನ.20) ಸಂಜೆ 4:30ಕ್ಕೆ ಸರಿಯಾಗಿ “ರಂಗ ಚಾವಡಿ” ಸಂಘಟನೆಯ ವರ್ಷದ ಸಂಭ್ರಮ ಕಾರ್ಯಕ್ರಮವು ಸುರತ್ಕಲ್ ಬಂಟರ ಭವನದಲ್ಲಿ ಜರುಗಲಿದೆ.
ಈ ಬಾರಿಯ ಪ್ರತಿಷ್ಠಿತ ರಂಗ ಚಾವಡಿ 2022 ಪ್ರಶಸ್ತಿಗೆ ಸಾಹಿತಿ ಜಾನಪದ ವಿದ್ವಾಂಸರಾದ ಮುದ್ದು ಮೂಡುಬೆಳ್ಳೆ ಅವನ್ನು ಆಯ್ಕೆ ಮಾಡಲಾಗಿದ್ದು ಪ್ರಶಸ್ತಿ ಪ್ರದಾನ ಸಮಾರಂಭವು ಅದೇ ವೇದಿಕೆಯಲ್ಲಿ ಗಣ್ಯರ ಸಮ್ಮುಖದಲ್ಲಿ ನಡೆಯಲಿದೆ.


ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು ಖ್ಯಾತ ಗಾಯಕರಾದ ವಿಶ್ವಾಸ್ ಗುರುಪುರ, ಮಲ್ಲಿಕಾ ವಿಶ್ವಾಸ್ ಹಾಗೂ ಜ್ಯುನಿಯರ್ ರಾಜ್ ಕುಮಾರ್ ಅವರಿಂದ ಸಂಗೀತ ರಸಮಂಜರಿ, ಬಳಿಕ ಖ್ಯಾತ ಹಾಸ್ಯ ಕಲಾವಿದರನ್ನು ಒಳಗೊಂಡ ಪ್ರಶಂಸ ಕಾಪು ತಂಡದಿಂದ “ಬಲೇ ತೆಲಿಪುಲೆ” ಕಾರ್ಯಕ್ರಮ ಪ್ರೇಕ್ಷಕರನ್ನು ರಂಜಿಸಲಿದೆ, ಸರ್ವ ಕಲಾಭಿಮಾನಿಗಳಿಗೂ ಆದರದ ಸ್ವಾಗತವನ್ನು ಸಂಘಟಕರು ಕೋರಿದ್ದಾರೆ.

error: Content is protected !!