ಮಂಗಳೂರು: ನಗರದ ಹೊರವಲಯದ ಮುಡಿಪಿನ ಮುರ್ನಾಡು ಗ್ರಾಮದ ಕಾಯರ್ ಗೋಳಿಯಲ್ಲಿ ಕಾರ್ಯಾಚರಣೆ ನಡೆಸಿದ ಸೆನ್ ಪೊಲೀಸರು ಇಬ್ಬರನ್ನು ಬಂಧಿಸಿ 132 ಕೆ.ಜಿ ಗಾಂಜಾ, ಶಸ್ತ್ರಾಸ್ತ್ರ ಸೇರಿದಂತೆ 39ಲಕ್ಷ ರೂಪಾಯಿ ಮೌಲ್ಯದ ಸೊತ್ತು ವಶಪಡಿಸಿಕೊಂಡಿದ್ದಾರೆ. ಬಂಧಿತರನ್ನು ರಮೀಜ್, ಅಬ್ದುಲ್ ಖಾದರ್ ಎಂದು ಹೆಸರಿಸಲಾಗಿದೆ.
ರಮೀಜ್ ಮೇಲೆ ಈ ಹಿಂದೆ ಆರು ಪ್ರಕರಣಗಳು ದಾಖಲಾಗಿದ್ದು ಅಬ್ದುಲ್ ಖಾದರ್ ಮೇಲೂ ಮೂರು ಪ್ರಕರಣಗಳು ದಾಖಲಾಗಿವೆ. ವಿಶಾಖಪಟ್ಟಣಂ ಕಾಡಿನಿಂದ ಗಾಂಜಾ ತಂದು ಮಂಗಳೂರು, ಉಡುಪಿ,ಕಾಸರಗೋಡಿನ ಹಲವು ಭಾಗದಲ್ಲಿ ಮಾರಾಟ ಮಾಡುತ್ತಿದ್ದರು.
ಈ ಹಿಂದೆಯೂ ಹಲವು ಬಾರಿ ಗಾಂಜಾ ಸಾಗಾಟ ಮಾಡಿರುವ ಬಗ್ಗೆ ಮಾಹಿತಿಯಿದ್ದು ಆರೋಪಿಗಳ ಜೊತೆ ಮತ್ತಷ್ಟು ಗಾಂಜಾ ಮಾರಾಟಗಾರರು ಸೇರಿರುವ ಸಾಧ್ಯತೆಯಿದೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್ ಮಾಹಿತಿ ನೀಡಿದರು.