ಕರ್ನಾಟಕ ಅನುದಾನ ರಹಿತ ಪದವಿಪೂರ್ವ ಕಾಲೇಜ್ ಆಡಳಿತ ಮಂಡಳಿಗಳ ಸಂಘ ಅಸ್ತಿತ್ವಕ್ಕೆ

ಕರ್ನಾಟಕ ಅನುದಾನ ರಹಿತ ಪದವಿಪೂರ್ವ ಕಾಲೇಜ್ ಆಡಳಿತ ಮಂಡಳಿಗಳ ಸಂಘ ಅಸ್ತಿತ್ವಕ್ಕೆ

ಮಂಗಳೂರು: “ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ 200ಕ್ಕೂ ಹೆಚ್ಚು ಖಾಸಗಿ ಅನುದಾನರಹಿತ ಪದವಿಪೂರ್ವ ಕಾಲೇಜುಗಳು ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಉತ್ತಮ ಗುಣಮಟ್ಟದ ಮೌಲ್ಯಾಧಾರಿತ ಶಿಕ್ಷಣವನ್ನು ನೀಡುವಲ್ಲಿ ಮಹತ್ವಪೂರ್ಣ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದು ಪ್ರಾಥಮಿಕ, ಪ್ರೌಢ ಮತ್ತು ಪದವಿ ಶಿಕ್ಷಣಕ್ಕೆ ಸಂಬಂಧಪಟ್ಟ ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಒಕ್ಕೂಟಗಳು ಇವೆ. ಆದರೆ ಪದವಿಪೂರ್ವ ಶಿಕ್ಷಣಕ್ಕೆ ಸಂಬಂಧಿಸಿದಂತೆ ಇದುವರೆಗೂ ಆಡಳಿತ ಮಂಡಳಿಯ ಒಕ್ಕೂಟ ಅಥವಾ ಸಂಘ ಇಲ್ಲದೇ ಇರುವುದು ವಾಸ್ತವ ಸಂಗತಿ. ಇದನ್ನು ಮನಗಂಡು ಸಂಘಟನೆ ಇಂದಿನ ಅಗತ್ಯವೆಂಬ ನೆಲೆಯಲ್ಲಿ ಸಮಸ್ಯೆಗಳನ್ನು ಚರ್ಚಿಸಲು ಹಾಗೂ ಶೀಘ್ರ
ಪರಿಹರಿಸಿಕೊಳ್ಳಲು ಸಮಾನಮನಸ್ಕರು ಸೇರಿ
ಆಡಳಿತ ಕಾಲೇಜು ಮಂಡಳಿಗಳ ಸಂಘವನ್ನು ಕಾನೂನಾತ್ಮಕವಾಗಿ ರಚಿಸಲಾಗಿದೆ” ಎಂದು ಸಂಘಟನೆ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಸಂಘಟನೆಗೆ ಸಂಬಂಧಿಸಿ ನೊಂದಣಿ, ಪಾನ್ ಖಾತೆಗಳನ್ನು ಈಗಾಗಲೇ ಮಾಡಿಕೊಳ್ಳಲಾಗಿದೆ. ಸಭೆಯ ನಿರ್ಣಯದಂತೆ ಸದಸ್ಯತ್ವ ಹೊಂದಲು 10,000 ಪ್ರಾಥಮಿಕ ಮತ್ತು ವಾರ್ಷಿಕ ಶುಲ್ಕ 1,000 ನಿಗದಿಪಡಿಸಲಾಗಿದೆ. ಮೊದಲ
ಹಂತದಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಎಲ್ಲಾ ಖಾಸಗಿ ಅನುದಾನರಹಿತ ಆಡಳಿತ ಮಂಡಳಿಗಳು
ಇದರಲ್ಲಿ ಸಕ್ರಿಯವಾಗಿ ಭಾಗವಹಿಸಬೇಕೆಂಬುದು ನಮ್ಮ ಕೋರಿಕೆಯಾಗಿದೆ. ಡಿಸೆಂಬರ್ 2ನೇ ವಾರದಲ್ಲಿ ನೂತನ ಸಂಘಟನೆಯ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದು ಮಾಹಿತಿ ನೀಡಿದರು.

error: Content is protected !!