ಅಕ್ರಮ ಟೋಲ್ ಗೇಟ್ ವಿರೋಧಿಸಿ ನಡೆಯುತ್ತಿರುವ ಅಹೋರಾತ್ರಿ ಧರಣಿ 20ನೇ ದಿನ ಪೂರ್ತಿಗೊಳಿಸಿದ್ದು ಬುಧವಾರ ನೂರಾರು ಸಂಖ್ಯೆಯಲ್ಲಿ ವಿವಿಧ ಸಂಘಟನೆಗಳ ಪ್ರಮುಖರು, ಕಾರ್ಯಕರ್ತರು ಧರಣಿ ಕೂತಿದ್ದರು.
ಟೋಲ್ ತೆರವುಗೊಳಿಸಿ ಹೆಜಮಾಡಿ ಟೋಲ್ ನಲ್ಲಿ ವಿಲೀನ ಮಾಡುವ ತಾಂತ್ರಿಕ ಪ್ರಕ್ರಿಯೆ ಆರಂಭಗೊಂಡಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಟ್ವೀಟ್ ಮಾಡಿದ್ದರು. ಆದರೆ ಟೋಲ್ ವಿರೋಧಿ ಸಮಿತಿ ವಾಹನ ಸವಾರರಿಂದ ಸುಂಕ ಸಂಗ್ರಹ ನಿಲ್ಲುವ ತನಕ ಅಹೋರಾತ್ರಿ ಧರಣಿ ನಡೆಸುವುದಾಗಿ ಹೇಳಿಕೊಂಡಿದೆ. ಕೆಪಿಸಿಸಿ ಸಂಯೋಜಕಿ ಪ್ರತಿಭಾ ಕುಳಾಯಿ, ರಾಘವೇಂದ್ರ ರಾವ್, ಡಿವೈಎಫ್ ಐ ಮುಖಂಡ ಮುನೀರ್ ಕಾಟಿಪಳ್ಳ ಮತ್ತಿತರರು ಉಪಸ್ಥಿತರಿದ್ದರು.