NSUI ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಮೊಹಮ್ಮದ್ ತಹ್ಷೀರ್ ಆಯ್ಕೆ

ಮಂಗಳೂರು: NSUI ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಮೊಹಮ್ಮದ್ ತಹ್ಷೀರ್ ಅವರಿಗೆ ಸಂತ ಅಲೋಶಿಯಸ್ ಕಾಲೇಜು ಮಂಗಳೂರು NSUI ವಿಧ್ಯಾರ್ಥಿ ಸಮಿತಿ ವತಿಯಿಂದ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಅಭಿನಂದನಾ ಕಾರ್ಯಕ್ರಮವು ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು NSUI ಜಿಲ್ಲಾಧ್ಯಕ್ಷರಾದ ಸವಾದ್ ಸುಳ್ಯ ಅವರು ವಹಿಸಿ ನೂತನ ಪ್ರಧಾನ ಕಾರ್ಯದರ್ಶಿ ಅವರಿಗೆ ನೇಮಕಾತಿ ಪತ್ರವನ್ನು ಹಸ್ತಾಂತರಿಸಿದರು.


ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ನೂತನವಾಗಿ ಆಯ್ಕೆಯಾದ ಪ್ರಧಾನ ಕಾರ್ಯದರ್ಶಿ ತಹ್ಷೀರ್ ಅವರು ತನಗೆ ನೀಡಿರುವ ಮಹತ್ವದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿ NSUI ವಿಧ್ಯಾರ್ಥಿ ಘಟಕವನ್ನು ಸಂಘಟಿಸಲು ಪ್ರಾಮಾಣಿಕವಾಗಿ ದುಡಿಯುತ್ತೇನೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಮಾನ್ ಪೂಜಾರಿ, ಶಾಹಿಲ್ ಎ.ಕೆ, ಸಿರಾಜ್ ಗುದ್ದೂರು, ಫಯಾಝ್ ಅಮ್ಮೆಮ್ಮಾರ್, ಸೈಫ್ ಉಪ್ಪಿನಂಗಡಿ ಹಾಗೂ ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ನಜೀಬ್ ಮಂಚಿ ನಿರೂಪಿಸಿದರು.

error: Content is protected !!