ಮಂಗಳೂರು: ಬಿಗ್ಬಾಸ್ ಸ್ಪರ್ಧಿಯಾಗಿರುವ ಚಿತ್ರನಟ ರೂಪೇಶ್ ಶೆಟ್ಟಿ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಹಾಕಿರುವ ಬಗ್ಗೆ ಅವರ ಕುಟುಂಬ ಸದಸ್ಯರು ಮಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ಬಿಗ್ ಬಾಸ್ ನಲ್ಲಿ ಏಳನೇ ವಾರ ಪೂರೈಸಿರುವ ಸ್ಪರ್ಧಿ ರೂಪೇಶ್ ಶೆಟ್ಟಿ ಇತ್ತೀಚಿಗೆ ತಾನು ಗಡಿನಾಡ ಕನ್ನಡಿಗ ಎಂದು ಹೇಳಿದ್ದರು. ಇದನ್ನೇ ನೆಪವಾಗಿಸಿಕೊಂಡು ಕೆಲವು ಟ್ರೋಲ್ ಪೇಜ್ ಗಳು ರೂಪೇಶ್ ಶೆಟ್ಟಿ ವಿರುದ್ಧ ಅವಹೇಳನಕಾರಿ ಪೋಸ್ಟ್, ಕಮೆಂಟ್ಸ್ ಮಾಡುತ್ತಿದ್ದು ಬಹಿರಂಗ ಬೆದರಿಕೆ ಒಡ್ದುತ್ತಿದ್ದಾರೆ. ಈ ಬಗ್ಗೆ ರೂಪೇಶ್ ಹೆತ್ತವರು ಪೊಲೀಸ್ ಮೊರೆ ಹೋಗಿದ್ದು ಪೊಲೀಸ್ ತಂಡಗಳು ಕಿಡಿಗೇಡಿಗಳ ಶೋಧ ಕೈಗೊಂಡಿದ್ದಾರೆ.