ಸುರತ್ಕಲ್ ಟೋಲ್ ವಿರುದ್ಧ ಮುಂದುವರಿದ ಪ್ರತಿಭಟನೆ, 12ನೇ ದಿನ ಪೂರೈಸಿದ ಧರಣಿ!

 

ಸುರತ್ಕಲ್: ಅನಧಿಕೃತ ಟೋಲ್ ಗೇಟ್ ತೆರವಿಗೆ ಆಗ್ರಹಿಸಿ ಟೋಲ್ ವಿರೋಧಿ ಸಮಿತಿ ನಡೆಸುತ್ತಿರುವ ಹಗಲು ರಾತ್ರಿ ಧರಣಿ 12ನೇ ದಿನ ಪೂರೈಸಿದೆ. ನಿನ್ನೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು, ನಾನಾ ಸಂಘಟನೆ, ಪಕ್ಷಗಳ ಮುಖಂಡರು ಧರಣಿಯಲ್ಲಿ ಪಾಲ್ಗೊಂಡು ಸರಕಾರ ಮತ್ತು ಜನಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗಿದರು.

ಈ ವೇಳೆ ಮಾತಾಡಿದ ಐವನ್ ಡಿಸೋಜ ಅವರು, “ಸರಕಾರ 40% ಕಮಿಷನ್ ಆಧಾರದಲ್ಲಿ ನಡೆಯುತ್ತಿದೆ. ಜಿಲ್ಲೆಯ ಜನಪ್ರತಿನಿಧಿಗಳು ಟೋಲ್ ವಿರುದ್ಧ ಜನರು ಸಂಘರ್ಷ ನಡೆಸುತ್ತಿದ್ದರೂ ಕಣ್ಣಿದ್ದೂ ಕುರುಡಾಗಿದ್ದಾರೆ. ಅಕ್ರಮ ಟೋಲ್ ಎನ್ನುವುದನ್ನು ಅವರೇ ಒಪ್ಪಿಕೊಂಡರೂ ಕೂಡಾ ತೆರವು ಮಾಡದೇ ಭಂಡತನ ಪ್ರದರ್ಶಿಸುತ್ತಿರುವ ವಚನ ಭ್ರಷ್ಟ ಬಿಜೆಪಿ ಸರಕಾರವನ್ನು ಈ ಬಾರಿ ತುಳು‌ನಾಡಿನ ಜನತೆ ಅಜ್ಞಾತವಾಸಕ್ಕೆ ಕಳುಹಿಸಬೇಕು” ಎಂದು ಹೇಳಿದರು.


ಸಮಿತಿಯ ಮುಖಂಡರಾದ ಮುನೀರ್ ಕಾಟಿಪಳ್ಳ, ಬಿ.ಕೆ. ಇಮ್ತಿಯಾಜ್, ಮಾಜಿ ಶಾಸಕ ಮೊಯಿದೀನ್ ಬಾವಾ, ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ, ಅಶ್ರಫ್, ಮುಹಮ್ಮದ್ ಸಮೀರ್, ಅಯಾಜ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!