ಸುರತ್ಕಲ್: ಕರ್ನಾಟಕ ಸರಕಾರ ಕಂದಾಯ ಇಲಾಖೆ ಹಾಗೂ ಮಂಗಳೂರು ಉತ್ತರ ಶಾಸಕ ಡಾ. ವೈ. ಭರತ್ ಶೆಟ್ಟಿ ಇವರ ನೇತೃತ್ವದಲ್ಲಿ ಒಂದೇ ಸೂರಿನಡಿ ಸರಕಾರಿ ಸೇವಾ ಸೌಲಭ್ಯಗಳ ಕುರಿತು ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಜನಸ್ಪಂದನಾ ಕಾರ್ಯಕ್ರಮ ನಾಳೆ ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಸುರತ್ಕಲ್ ಬಂಟರಭವನದಲ್ಲಿ ಜರುಗಲಿದೆ.ಸುರತ್ಕಲ್ ಪಶ್ಚಿಮ 1ನೇ ವಾರ್ಡ್, ಸುರತ್ಕಲ್ ಪೂರ್ವ 2ನೇ ವಾರ್ಡ್, ಕಾಟಿಪಳ್ಳ ಮೂರನೇ ವಾರ್ಡ್, ಕೃಷ್ಣಾಪುರ 4ನೇ ವಾರ್ಡ್, ಕೃಷ್ಣಾಪುರ 5ನೇ ವಾರ್ಡ್, ಮತ್ತು ಇಡ್ಯಾ ಪೂರ್ವ 6ನೇ ವಾರ್ಡ್ ಗಳ ಜನರು ಈ ಕಾರ್ಯಕ್ರಮದ ಪ್ರಯೋಜನ ಪಡೆಯುವಂತೆ ಸಂಘಟಕರು ತಿಳಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಗೆ ಸಂಬಂಧಪಟ್ಟ ಸೇವಾ ಸೌಲಭ್ಯ, ಕಾರ್ಮಿಕರಿಗೆ ಸಂಬಂಧಪಟ್ಟ ಕಾರ್ಡ್‌ಗಳ ಸೇವಾ ಸೌಲಭ್ಯ, ಆಹಾರ ಇಲಾಖೆ ಪಡಿತರ ಚೀಟಗೆ ಸಂಬಂಧಪಟ್ಟ
ಸೌಲಭ್ಯ, ಮೀನುಗಾರಿಕೆಗೆ ಸಂಬಂಧಪಟ್ಟ ಸೌಲಭ್ಯ, ಕೃಷಿ ಇಲಾಖೆಗೆ ಸಂಬಂಧಪಟ್ಟ ಸೌಲಭ್ಯ, ತೋಟಗಾರಿಕಾ ಇಲಾಖೆ, ಲೀಡ್‌ಬ್ಯಾಂಕ್ ಸೌಲಭ್ಯ, ಮಹಾನಗರ ಪಾಲಿಕೆಗೆ ಸಂಬಂಧಪಟ್ಟ ಸೌಲಭ್ಯ, ದೇವರಾಜ ಅರರು ನಿಗಮದಲ್ಲಿ ಸಾಲ ಸೌಲಭ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಸುಕನ್ಯಾ ಸಮೃದ್ಧಿ ಯೋಜನೆ, ಪೋಷಣಾ ಅಭಿವೃದ್ಧಿ ಯೋಜನೆ, ಕಿರುಸಾಲ ಯೋಜನೆ, ಬೇಟ ಏಟಾವೋ ಬೇಟಿ ಪಡಾವೋ ಯೋಜನೆಗಳ ಬಗ್ಗೆ ಒಂದೇ ಸೂರಿನಡಿ ಪ್ರಯೋಜನ ಮತ್ತು ಮಾಹಿತಿ ಪಡೆಯಬಹುದಾಗಿದೆ.