ಸುರತ್ಕಲ್: ಬಿಜೆಪಿ ಮುಖಂಡ ಭರತ್ ರಾಜ್ ವಿರುದ್ಧ ದುಷ್ಕರ್ಮಿಗಳ ಸಂಚು?!

ಸುರತ್ಕಲ್: ಬಿಜೆಪಿ ಮಂಗಳೂರು ನಗರ ಉತ್ತರ ಮಂಡಲದ ಯುವ ಮೋರ್ಚಾ ಅಧ್ಯಕ್ಷರಾದ ಭರತ್ ರಾಜ್ ಕೃಷ್ಣಾಪುರ ಅವರು ಶಾಸಕ ವೈ. ಭರತ್ ಶೆಟ್ಟಿಯವರ ಜನಸ್ಪಂದನಾ ಕಾರ್ಯಕ್ರಮದ ಬಗ್ಗೆ ಕೃಷ್ಣಾಪುರ 7ನೇ ಬ್ಲಾಕ್ ಬಸ್ ತಂಗುದಾಣದ ಎದುರುಗಡೆ ಪ್ಲೆಕ್ಸ್ ಹಾಕಿದ್ದು ಅದಕ್ಕೆ ಕಿಡಿಕೇಡಿಗಳು ಹಾನಿಯನ್ನುಂಟುಮಾಡಿದೆ ಪ್ಲೆಕ್ಸ್ ನಲ್ಲಿರುವ ಭರತ್ ರಾಜ್ ಭಾವಚಿತ್ರಕ್ಕೆ ಯಾವುದೋ ಆಯುಧದಿಂದ “X” ಮಾರ್ಕಿನ ರೀತಿಯಲ್ಲಿ ಗೀರಿರುವ ಘಟನೆ ಬೆಳಕಿಗೆ ಬಂದಿದೆ.


ಸುರತ್ಕಲ್ ಪರಿಸರದಲ್ಲಿ ಅಶಾಂತಿಯನ್ನುಂಟು ಮಾಡಿ ಗಲಭೆ ಸೃಷ್ಟಿಸುವ ಹುನ್ನಾರ ಇದಾಗಿದ್ದು ಸೂಕ್ತ ಕ್ರಮ ಕೈಗೊಳ್ಳುವಂತೆ ಯುವಮೋರ್ಚಾ ಮಹಾಶಕ್ತಿ ಕೇಂದ್ರ ಸುರತ್ಕಲ್ ಘಟಕ ಎಸಿಪಿ ಅವರಿಗೆ ದೂರು ನೀಡಿದೆ.
ಭರತ್ ರಾಜ್ ಕೃಷ್ಣಾಪುರ ಮೇಲೆ ಇದೇ ಪರಿಸರದಲ್ಲಿ ಹಿಂದೆ ಕೊಲೆಯತ್ನ ನಡೆದಿದ್ದು ಅವರ ಭಾವಚಿತ್ರಕ್ಕೆ ಹಾಕಿದ X ಗುರುತು ನೋಡಿದಾಗ ಅವರ ಜೀವಕ್ಕೆ ಅಪಾಯವನ್ನುಂಟುಮಾಡುವ
ಪಿತೂರಿಯನ್ನು ಯಾರೋ ಮಾಡುತ್ತಿರುವ ಬಗ್ಗೆ ಸಂಶಯ ಮೂಡುತ್ತದೆ. ಆದುದರಿಂದ ತಾವು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಸಂಚು ಹೂಡಿರುವ ಕಿಡಿಗೇಡಿಗಳನ್ನು ಬಂಧಿಸಿ, ಮುಂದಿನ ದಿನಗಳಲ್ಲಿ ಅವರಿಗೆ ಸೂಕ್ತ ರಕ್ಷಣೆ ನೀಡಬೇಕಾಗಿ ದೂರಿನಲ್ಲಿ ವಿವರಿಸಲಾಗಿದೆ.

error: Content is protected !!