ಸುರತ್ಕಲ್: ಎನ್ ಐಟಿಕೆ ಬಳಿಯ ಅಕ್ರಮ ಟೋಲ್ ಗೇಟ್
ವಿರೋಧಿಸಿ ಹೋರಾಟ ಸಮಿತಿ ಇಂದಿನಿಂದ ಮತ್ತೆ ಅಹೋರಾತ್ರಿ ಪ್ರತಿಭಟನೆ ಹಮ್ಮಿಕೊಂಡಿದೆ.10 ಗಂಟೆಗೆ ಪ್ರತಿಭಟನಾ ಧರಣಿ ಪ್ರಾರಂಭಗೊಳ್ಳಲಿದ್ದು ಈ ನಿಟ್ಟಿನಲ್ಲಿ ಬೆಳಗ್ಗೆ 6 ಗಂಟೆಯಿಂದ ನವೆಂಬರ್ 3 ರ ಸಂಜೆ 6 ರವರೆಗೆ ಎನ್‌ಐಟಿಕೆ ಟೋಲ್ ಪ್ಲಾಜಾ ಸುತ್ತಮುತ್ತಲಿನ 200 ಮೀಟರ್ ವ್ಯಾಪ್ತಿಯವರೆಗೆ ಸೆಕ್ಷನ್ 144ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಆದೇಶಿಸಿದ್ದಾರೆ.
ಸೆಕ್ಷನ್ 144 ಜಾರಿಯಲ್ಲಿರುವಾಗ ಐದಕ್ಕಿಂತ ಹೆಚ್ಚು ಜನರು
ಗುಂಪುಗೂಡುವುದು, ಪಟಾಕಿ ಸಿಡಿಸುವುದು, ಕಲ್ಲು
ತೂರಾಟ, ಶಸ್ತ್ರಾಸ್ತ್ರ, ಬಂದೂಕು, ಅಧಿಕಾರಿಗಳ ವಿರುದ್ಧ
ಸ್ಫೋಟಕ, ಘೋಷಣೆ, ಮೆರವಣಿಗೆ, ಪ್ರತಿಭಟನೆ, ರಸ್ತೆ ತಡೆ
ಹೀಗೆ ಇತರ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ.
ಟೋಲ್ ಗೇಟ್ ರದ್ದುಪಡಿಸಲು ಸರ್ಕಾರ ಅಧಿಕೃತವಾಗಿ ಗೆಜೆಟ್ ಅಧಿಸೂಚನೆ ಹೊರಡಿಸುವವರೆಗೆ ಅಕ್ಟೋಬರ್ 28 ರಂದು ಹಮ್ಮಿಕೊಂಡಿರುವ ಹೋರಾಟವನ್ನು ಕೈಬಿಡುವಂತೆ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಟೋಲ್ ಗೇಟ್ ಹೋರಾಟ ಸಮಿತಿಗೆ ಸೂಚಿಸಿದ್ದಾರೆ. ಆದರೆ ಇದನ್ನು ಹೋರಾಟ ಸಮಿತಿ ತಳ್ಳಿಹಾಕಿದೆ.