ಫೆ.7: ಶವಿಲ್ ಉದ್ದಬೆಟ್ಟು ರವರ “ಸಮಸ್ತ ಆದರ್ಶ ಹಾದಿಯ ನೆರಳು ವೃಕ್ಷಗಳು” ಬೃಹತ್ ಗ್ರಂಥ ಬಿಡುಗಡೆ

ಮಂಗಳೂರು: “ಸಮಸ್ತ ಆದರ್ಶ ಹಾದಿಯ ನೆರಳು ವೃಕ್ಷಗಳು” ಎಂಬ ಗ್ರಂಥವು 1926 ರಿಂದ 2026 ತನಕ ಪುಣ್ಯ ಸಮಸ್ತಕ್ಕೆ ನೇತೃತ್ವ ವಹಿಸಿದ ಸಮಸ್ತ ಮುಶಾವರ ಸದಸ್ಯರ ವಿವರಣೆ ಅದೇ ರೀತಿ ಸಮಸ್ತದ ಉಗಮ, ಸಂವಿಧಾನ, ಹೀಗೆ ಅನೇಕ ವಿಷಯಗಳನ್ನೊಳಗೊಂಡ ಪುಸ್ತಕವು ಫೆ.07 ರಂದು ಸಮಸ್ತ ಶತಮಾನೋತ್ಸವ ಸಮ್ಮೇಳನದ ವೇದಿಕೆಯಲ್ಲಿ ಗ್ರಂಥವು ಬಿಡುಗಡೆಗೊಳ್ಳಲಿದೆ.

ಸಮಸ್ತದ ಉಗಮ, ಬೆಳವಣಿಗೆ ಮತ್ತು ನೂರು ವರ್ಷಗಳ ಸುದೀರ್ಘ ಇತಿಹಾಸ. ಮುಶಾವರದ ಪ್ರಮುಖ ತೀರ್ಮಾನಗಳು ಮತ್ತು ಐತಿಹಾಸಿಕ ಘಟನೆಗಳು, ಸಮಸ್ತವನ್ನು ಮುನ್ನಡೆಸಿದ ನಾಯಕರು ಮತ್ತು ಪ್ರಸ್ತುತ ಮುಶಾವರ ಸದಸ್ಯರ ಪರಿಚಯ. ವಿವಿಧ ಪೋಷಕ ಸಂಘಟನೆಗಳ ಇತಿಹಾಸ.

ಬೆಳ್ತಂಗಡಿ ದಾರುಸ್ಸಲಾಂ ವಿದ್ಯಾರ್ಥಿ ಯಾಗಿದ್ದ ಶವಿಲ್ ಇಂತಹದ್ದೊಂದು ಬೃಹತ್ ಗ್ರಂಥವನ್ನು ಕನ್ನಡದಲ್ಲಿ ತರುವ ಪ್ರಯತ್ನಕ್ಕೆ ಕೈ ಇಟ್ಟಿದ್ದರು. ಮಲ್ಲೂರಿನ ಉದ್ದಬೆಟ್ಟು ನಿವಾಸಿಯಾಗಿರುವ ಶವಿಲ್ ಅತೀ ಸಣ್ಣ ವಯಸ್ಸಿನಲ್ಲೇ ಇಂತಹದ್ದೊಂದು ಸಾಧನೆ ಮಾಡಿದ್ದಾರೆ. ಕಳೆದ ಎರಡೂವರೆ ವರ್ಷಗಳಿಂದ ಪುಸ್ತಕ ರಚನೆಯ ಹಿಂದೆ ಬಿದ್ದು ಕಲಿಕೆಯ ಬಿಡುವಿನ ಅವಧಿಯಲ್ಲಿ ಅನೇಕ ಧಾರ್ಮಿಕ ಪುಸ್ತಕಗಳನ್ನು ಆಳವಾಗಿ ಅಭ್ಯಸಿಸಿ, ತಮ್ಮದೇ ಆದ ವಿಶ್ಲೇಷಣೆ ದಾಖಲಿಸಿ ಕನ್ನಡ ಸಾಹಿತ್ಯ ಲೋಕದಲ್ಲಿ ಸಮಸ್ತದ ಬಗ್ಗೆ ವಿವರಣೆಯುಳ್ಳ ಸಾವಿರ ಪುಟಗಳ ಪುಸ್ತಕ ಇದೇ ಮೊದಲು ರಚನೆಯಾಗಿರುವುದು. ಫೆಬ್ರವರಿ 07 ರಂದು ಸಮಸ್ತ ಶತಮಾನೋತ್ಸವದ ಅಂಗವಾಗಿ ನಡೆಯುವ ಕಾರ್ಯಕ್ರಮದಲ್ಲಿ ಸಮಸ್ತ ಅಧ್ಯಕ್ಷರಾದ ಬಹುಮಾನ್ಯ ಜಿಫ್ರೀ ಮುತ್ತುಕೋಯ ತಂಞಳ್ ಬಿಡುಗಡೆಗೊಳಿಸಲಿದ್ದಾರೆ.

ಲೇಖಕರಾದ ಶವಿಲ್ ಉದ್ದಬೆಟ್ಟು ವಿದ್ಯಾರ್ಥಿ ಸಂದರ್ಭದಲ್ಲೇ ಅನೇಕ ಸಾಮಾಜಿಕ, ಧಾರ್ಮಿಕ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದಾರೆ. ಸಮಸ್ತ ವಿದ್ಯಾರ್ಥಿ ಸಂಘಟನೆಯಾದ ಎಸ್ಕೆ ಎಸ್ ಎಸ್ ಎಫ್ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದಾರೆ. ಮಲ್ಲೂರು ಟುಡೇ ಫೌಂಡೇಶನ್ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಅತೀ ಸಣ್ಣ ವಯಸ್ಸಿನಲ್ಲೇ ಬೃಹತ್ ಗ್ರಂಥ ರಚಿಸಿ ಯಶಸ್ವಿಯಾಗಿರುವ ಶವಿಲ್ ಉದ್ದಬೆಟ್ಟು ಕಾರ್ಯಕ್ಕೆ ಅವರ ಹುಟ್ಟೂರಾದ ಮಲ್ಲೂರಿನ ನಾಗರೀಕರು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.

ಪುಸ್ತಕವನ್ನು ಬೆಳ್ತಂಗಡಿಯ ದಾರುಸ್ಸಲಾಂ ಅಲ್ ಬಯಾನ್ ಸಮಿತಿ ಪ್ರಕಾಶನಗೊಳಿಸಲಿದೆ.

error: Content is protected !!