ಹಳಿ ತಪ್ಪಿದ ಚೆನ್ನೈ ಸೆಂಟ್ರಲ್ ಎಕ್ಸ್‌ಪ್ರೆಸ್‌ ರೈಲಿನ 3 ಬೋಗಿಗಳು

ಭುವನೇಶ್ವರ: ಚೆನ್ನೈ ಸೆಂಟ್ರಲ್ ಎಕ್ಸ್‌ಪ್ರೆಸ್‌ ರೈಲಿನ ಮೂರು ಬೋಗಿಗಳು ಹಳಿತಪ್ಪಿರುವ ಘಟನೆ ಒಡಿಶಾದ ಜಾಜ್‌ಪುರ ಜಿಲ್ಲೆಯ ಜಖಾಪುರ ರೈಲು ನಿಲ್ದಾಣದ ಬಳಿ ಇಂದು(ಫೆ.5) ಬೆಳಗ್ಗೆ 8.51 ಕ್ಕೆ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೆ ಗಾಯ ಅಥವಾ ಸಾವು ನೋವು ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚೆನ್ನೈನಿಂದ ಪಶ್ಚಿಮ ಬಂಗಾಳದ ನ್ಯೂ ಜಪೈಗುರಿಗೆ ತೆರಳುತ್ತಿದ್ದ ರೈಲಿನ ಒಂದು ಎಸಿ ಮತ್ತು ಎರಡು ಸಾಮಾನ್ಯ ಬೋಗಿಗಳು ಹಳಿ ತಪ್ಪಿವೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

 

error: Content is protected !!