SIR ಮೂಲಕ ಅರ್ಹ ಮತದಾರರನ್ನು ವೋಟ್ ಹಕ್ಕಿನಿಂದ ಹೊರಗಿಡಲಾಗಿದೆ!

ಮಂಗಳೂರು: SIR ಎನ್ನುವುದು ಅಸಂವಿಧಾನಿಕ ಎಂದು ಈ ಹಿಂದೆಯೇ ಕಾಂಗ್ರೆಸ್ ಪಕ್ಷ ಹೇಳುತ್ತಲೇ ಬಂದಿದ್ದು ಈಗ ಅದಕ್ಕೆ ಸಾಕ್ಷಿ ಎನ್ನುವಂತೆ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ನಿರ್ದಿಷ್ಟ ಬಿಜೆಪಿ ಅಥವಾ ಪರಿವಾರ ಸಂಘಟನೆಯ ಕಾರ್ಯಕರ್ತರು ಫಾರಂ ನಂಬರ್ 7 ಅನ್ನು ಬಳಸಿಕೊಂಡು ದಲಿತರು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರ ಹೆಸರನ್ನು ಅಳಿಸುವ ಮೂಲಕ ಅರ್ಹ ಮತದಾರರನ್ನು ಚುನಾವಣೆಯಲ್ಲಿ ಪಾಲ್ಗೊಳ್ಳದಂತೆ ತಡೆಯಲಾಗುತ್ತಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿಯ ಉಪಾಧ್ಯಕ್ಷ ಸುಧೀರ್ ಕುಮಾರ್ ಮುರೊಳ್ಳಿ ಪತ್ರಿಕಾಗೋಷ್ಟಿಯಲ್ಲಿ ಆರೋಪಿಸಿದರು.


ಬಿಜೆಪಿ ಎಸಗಿರುವ ಈ ಅನ್ಯಾಯವನ್ನು ಕಾಂಗ್ರೆಸ್ ಪಕ್ಷ ಬಲವಾಗಿ ಖಂಡಿಸುತ್ತದೆ. ದೂರು ಕೊಟ್ಟರೆ ಮಾತ್ರ ಕಾನೂನು ಕ್ರಮ ಕೈಗೊಳ್ಳುವ ಬದಲು ತಪ್ಪಿತಸ್ಥರ ವಿರುದ್ಧ ಸೋಮೊಟೊ ಕೇಸ್ ದಾಖಲಿಸಿ ತನಿಖೆ ನಡೆಸಬೇಕುSIR ಮೂಲಕ ಅರ್ಹ ಮತದಾರರನ್ನು ವೋಟ್ ಹಕ್ಕಿನಿಂದ ಹೊರಗಿಡಲಾಗಿದೆ! ಸುಪ್ರೀಂ ಕೋರ್ಟ್ ಈ ವಿಚಾರದಲ್ಲಿ ತಕ್ಷಣವೇ ಮಧ್ಯ ಪ್ರವೇಶಿಸಬೇಕು.
ಟಿಕೆ ಸುಧೀರ್, ಶುಭೋದಯ ಆಳ್ವ, ಅಪ್ಪಿ ಮತ್ತಿತರರು ಉಪಸ್ಥಿತರಿದ್ದರು.

Advt
error: Content is protected !!