ಪಣಂಬೂರು ಬೀಚಲ್ಲಿ ಬಾಲಕ ನೀರುಪಾಲು

ಸುರತ್ಕಲ್: ಪಣಂಬೂರು ಬೀಚ್ ವಿಹಾರಕ್ಕೆ ಬಂದು ಸಮುದ್ರದಲ್ಲಿ ಈಜಲು ಇಳಿದ ಬೆಳ್ತಂಗಡಿ ಮೂಲದ 9ನೇ ತರಗತಿ ವಿದ್ಯಾರ್ಥಿ ದಾರುಣವಾಗಿ ಮೃತಪಟ್ಟ ಘಟನೆ ಸೋಮವಾರ ಸಂಜೆ ನಡೆದಿದೆ.

ಬೆಳ್ತಂಗಡಿ ರೆಂಕೆದಗುತ್ತು ನಿವಾಸಿ ಶೇಖರ್ ಕೆಂಬರ್ಜೆ ಅವರ ಪುತ್ರ ಶ್ರೇಯಸ್ (15) ಮೃತ ವಿದ್ಯಾರ್ಥಿಯಾಗಿದ್ದಾನೆ.
ಶ್ರೇಯಸ್ ತನ್ನ ಸ್ನೇಹಿತರೊಂದಿಗೆ ಪಣಂಬೂರು ಸಮುದ್ರಕ್ಕೆ ಈಜಲು ತೆರಳಿದ್ದ ವೇಳೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಪಣಂಬೂರು ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Advt
error: Content is protected !!