
ಹಳೆಯಂಗಡಿ: ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತ ಶ್ರೀ ವಿದ್ಯಾ ವಿನಾಯಕ ಯುವಕ ಮಂಡಲ (ರಿ) ಹಳೆಯಂಗಡಿ ಇದರ ಮುಂದಾಳತ್ವದಲ್ಲಿ ಯುವತಿ ಮಂಡಲ (ರಿ) ಹಳೆಯಂಗಡಿ ಮತ್ತು ಕಿಶೋರ ಕಿಶೋರಿ ಸಂಘ ಇವರ ಸಹಕಾರದಲ್ಲಿ ದಿನಾಂಕ 6.9.2026 ರಂದು ಸಂಜೆ ಗಂಟೆಗೆ ಯುವಕ ಮಂಡಲದ ಸಭಾಂಗಣದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಗುರುವಂದನ ಕಾರ್ಯಕ್ರಮ ಜರುಗಿತು.
UBMC ಪ್ರಾಥಮಿಕ ಶಾಲೆ ಹಳೆಯಂಗಡಿಯಲ್ಲಿ ಹಲವಾರು ವರ್ಷ ಪ್ರಾಧ್ಯಾಪಕಿ, ಮುಖ್ಯೋಪಾಧ್ಯಾಯಿನಿಯಾಗಿ ಸೇವೆ ಸಲ್ಲಿಸಿ ಜನಾನುರಾಗಿದ್ದ ಹಾಗೂ ಎಲ್ಲರ ಮೆಚ್ಚಿನ ಶಿಕ್ಷಕಿಯಾಗಿದ್ದ, ಪ್ರಸ್ತುತ ನಿವೃತ್ತ ಜೀವನ ನಡೆಸುತ್ತಿರುವ ರೇವತಿ ಮೇಡಂ ಇವರಿಗೆ ಶಿಕ್ಷಕರ ದಿನಾಚರಣೆ ಅಂಗವಾಗಿ ಗುರುವಂದನಾ ಕಾರ್ಯಕ್ರಮ ಜರುಗಿತು.
ಗುರುವಂದನೆಯನ್ನು ಸ್ವೀಕರಿಸಿದ ರೇವತಿ ಮೇಡಂ ಇವರು ಆಯೋಜಿಸಿದ ಕಾರ್ಯಕ್ರಮವನ್ನು ಶ್ಲಾಘಿಸುತ್ತಾ ತಾವು ವಿದ್ಯಾರ್ಜನೆ ನೀಡುವ ಸಂದರ್ಭದಲ್ಲಿ ಯುವಕ ಮಂಡಲ ಮತ್ತು ಶಾಲೆಯ ವಿದ್ಯಾರ್ಥಿಗಳ ನಡುವಿನ ಹಲವಾರು ಕಾರ್ಯಕ್ರಮವನ್ನೂ ಮೆಲುಕು ಹಾಕುತ್ತಾ ಹಾಗೂ ಆ ಸಂದರ್ಭದಲ್ಲಿ ಇರುವ ವಿದ್ಯಾರ್ಥಿಗಳು ಮಂಡಲದಲ್ಲಿ ಹಾಗೂ ವಿವಿಧ ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಗಳಾಗಿ ವಿವಿಧ ಸಾಮಾಜಿಕ ಕಾರ್ಯಾ ಚಟುವಟಿಕೆಯನ್ನು ನಡೆಸುತ್ತಿರುವ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ವತಿಯಿಂದ ಯುವಜನ ಮತ್ತು ಕ್ರೀಡಾ ಇಲಾಖೆಯ ದಸರಾ ಕ್ರೀಡಾಕೂಟ 2026 ರ ನೋಡಲ್ ಅಧಿಕಾರಿ ವಿನೋದ್ ಕುಮಾರ್ ಸಸಿಹಿತ್ಲು ಉಪಸ್ಥಿತರಿದ್ದು ಇವರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಯುವಕ ಮಂಡಲದ ಉಪಾಧ್ಯಕ್ಷರಾದ ಪ್ರಶಾಂತ್ , ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷರಾದ ಸುಧಾಕರ ಆರ್ ಅಮೀನ್, ಯುವಕ ಮಂಡಲದ ಕಾರ್ಯದರ್ಶಿಯಾದ ಯಶ್ ಕೋಟ್ಯಾನ್, ಸಲಹಾ ಸಮಿತಿಯ ಅಧ್ಯಕ್ಷರಾದ ನಾರಾಯಣ್ ರಾವ್, ರಜತ ಸೇವಾ ಟ್ರಸ್ಟಿನ ಟ್ರಸ್ಟಿಗಳಾದ ಎಸ್. ಎಚ್. ಶೆಟ್ಟಿಗಾರ್ ,ಯುವಕ ಮಂಡಲದ ಯತೀಶ್ ಕೋಟ್ಯಾನ್, ನಾಗೇಶ್ ಟಿ ಜಿ, ಲೋಕೇಶ್, ಹರ್ಷಿತ್, ಮನೋಜ್ ಕುಮಾರ್, ಧನಂಜಯ್ ,ಲೋಕೇಶ್ ಚಿಲಿಂಬಿ, ಯುವತಿ ಮಂಡಲದ ಕಾರ್ಯದರ್ಶಿ ಕುಮಾರಿ ಯಶಸ್ವಿ ,ಕೋಶಾಧಿಕಾರಿ ನಿಶಾ, ಸದಸ್ಯರಾದ ಸುಶ್ಮಿತಾ , ಸೋನಿಯಾ, ಮಾನ್ಯ, ಶ್ವೇತಾ, ಕಾತ್ಯಾಯಿನಿ ಹಾಗೂ ಜಂಟಿ ಸಂಸ್ಥೆಯ ಸದಸ್ಯರು, ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.
ಯುವತಿ ಮಂಡಲದ ಕಾರ್ಯಕಾರಿ ಸಮಿತಿಯ ಸದಸ್ಯರಾದ ದಿವ್ಯಶ್ರೀ ಕೋಟ್ಯಾನ್ ಸ್ವಾಗತಿಸಿ ನಿರೂಪಿಸಿದರು.
