
ಹಳೆಯಂಗಡಿ: ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತ ಶ್ರೀ ವಿದ್ಯಾ ವಿನಾಯಕ ಯುವಕ ಮಂಡಲದ ಕಿಶೋರ ಕಿಶೋರಿ ಸಂಘದ ಪುಟಾಣಿಗಳಿಗೆ ಗೋಕುಲಾಷ್ಟಮಿ ಆಚರಣೆ ಮಾಡಲಾಯಿತು.
ಮೈ ಭಾರತ – ಮಂಗಳೂರು
ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ, ಭಾರತ ಸರಕಾರ ಮಂಗಳೂರು, ಪ್ರಪ್ರಥಮ 1979-80, 1988-89 ಮತ್ತು 2015-16 ನೇ ಸಾಲಿನ ಕನಾ೯ಟಕ ರಾಜ್ಯ ಪ್ರಶಸ್ತಿ ಪುರಸ್ಕೃತ ಶ್ರೀ ವಿದ್ಯಾವಿನಾಯಕ ಯುವಕಮಂಡಲ (ರಿ), ಹಳೆಯಂಗಡಿ. ದ.ಕ., ಶ್ರೀ ವಿದ್ಯಾ ವಿನಾಯಕ ರಜತಾಸೇವಾ ಟ್ರಸ್ಟ್ (ರಿ) ಹಳೆಯಂಗಡಿ, ಜಿಲ್ಲಾ ಪ್ರಶಸ್ತಿ ಪುರಸ್ಕೃತ ಯುವತಿ ಮಂಡಲ (ರಿ) ಹಳೆಯಂಗಡಿ, ಕಿಶೋರ -ಕಿಶೋರಿ ಸಂಘ ಹಳೆಯಂಗಡಿ ಇದರ ಸಂಯುಕ್ತ ಆಶ್ರಯದಲ್ಲಿ ದಿನಾಂಕ 6.9.2026 ಆದಿತ್ಯವಾರ ಮಂಡಲದ ವಠಾರದಲ್ಲಿ ಗೋಕುಲಾಷ್ಟಮಿ ಪ್ರಯುಕ್ತ ವಿವಿಧ ಕಾರ್ಯಕ್ರಮ ನಡೆಸಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಯುವಕ ಮಂಡಲದ ಸಲಹಾ ಸಮಿತಿಯ ಅಧ್ಯಕ್ಷರಾದ ನಾರಾಯಣ್ ರಾವ್ ನಡೆಸಿಕೊಟ್ಟರು. ಗೋಕುಲಾಷ್ಟಮಿ ಪ್ರಯುಕ್ತ, ವಿಶೇಷವಾಗಿ ಕಿಶೋರ ಕಿಶೋರಿ ಸಂಘದ ವಿದ್ಯಾರ್ಥಿಗಳಿಂದ ಒಂದು ಮುಷ್ಟಿಯಷ್ಟು ಅವಲಕ್ಕಿಯನ್ನು ತಮ್ಮ ಮನೆಯಿಂದ ತರಿಸಿ ಅದರ ಮೂಲಕ ವಿಶೇಷ ಪ್ರಸಾದವನ್ನು ತಯಾರಿಸಲಾಯಿತು. ಹೆಚ್ಚಿನ ಪುಟಾಣಿಗಳು ಸ್ವಯಂ ಇಚ್ಛೆಯಿಂದ ರಾಧಾ ಕೃಷ್ಣ ವೇಷ ಧರಿಸಿ ಸಂಭ್ರಮಿಸಿದರು.
ದೇಶಿಯ ಆಟದ ಪರಿಚಯ ಮತ್ತು ಆಟಗಳನ್ನು ಯುವಕ ಮಂಡಲದ ಜೊತೆ ಕಾರ್ಯದರ್ಶಿಯಾದ ನಟರಾಜ್ ವಿದ್ಯಾರ್ಥಿಗಳಿಗೆ ಹೇಳಿಕೊಟ್ಟರು. ಮಕ್ಕಳಿoದ ವಿವಿಧ ವಿನೋದಾವಳಿ ಹಾಗೂ ಮೊಸರು ಕುಡಿಕೆ ಅಂಗವಾಗಿ ಮಡಿಕೆ ಒಡೆಯುವ ವ್ಯವಸ್ಥೆ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಯುವಕ ಮಂಡಲದ ಅಧ್ಯಕ್ಷರಾದ ಕಿರಣ್ ರಾಜ್, ಉಪಾಧ್ಯಕ್ಷರಾದ ಪ್ರಶಾಂತ್ , ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷರಾದ ಸುಧಾಕರ ಆರ್ ಅಮೀನ್, ಯುವಕ ಮಂಡಲದ ಕಾರ್ಯದರ್ಶಿಯಾದ ಯಶ್ ಕೋಟ್ಯಾನ್, ರಜತ ಸೇವಾ ಟ್ರಸ್ಟಿನ ಟ್ರಸ್ಟಿಗಳಾದ ಎಸ್. ಎಚ್. ಶೆಟ್ಟಿಗಾರ್ ,ಯುವಕ ಮಂಡಲದ ಯತೀಶ್ ಕೋಟ್ಯಾನ್, ನಾಗೇಶ್ ಟಿ ಜಿ, ಲೋಕೇಶ್, ಹರ್ಷಿತ್, ಮನೋಜ್ ಕುಮಾರ್, ಧನಂಜಯ್ ,ಲೋಕೇಶ್ ಚಿಲಿಂಬಿ.
ಯುವತಿ ಮಂಡಲದ ಕಾರ್ಯದರ್ಶಿ ಕುಮಾರಿ ಯಶಸ್ವಿ ,ಕೋಶಾಧಿಕಾರಿ ನಿಶಾ, ಸದಸ್ಯರಾದ ದಿವ್ಯಶ್ರೀ ರಮೇಶ್ ಕೋಟ್ಯಾನ್, ಸುಶ್ಮಿತಾ , ಸೋನಿಯಾ, ಮಾನ್ಯ, ಶ್ವೇತಾ, ಕಾತ್ಯಾಯಿನಿ ಮತ್ತಿತರರು ಉಪಸ್ಥಿತರಿದ್ದರು.
ಕೃಷ್ಣಾಷ್ಟಮಿ ಪ್ರಯುಕ್ತ ಮಕ್ಕಳಿಗೆ ಚಕ್ಕುಲಿ ಮತ್ತು ಉಂಡೆಯನ್ನು ಭಾಗವಹಿಸಿದ ಎಲ್ಲರಿಗೂ ವಿತರಿಸಲಾಯಿತು. ಜಂಟಿ ಸಂಸ್ಥೆಯ ಹೆಚ್ಚಿನ ಸದಸ್ಯರು, ಮಕ್ಕಳ ಪೋಷಕರು ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
