
ಮಂಗಳೂರು: ಜಿಮ್ ಮಾಡುವಾಗ ಕುಸಿದು ಬಿದ್ದು ಅಂತಿಮ ವರ್ಷದ ಬಿಕಾಮ್ ವಿದ್ಯಾರ್ಥಿ ದಾರುಣವಾಗಿ ಮೃತಪಟ್ಟ ಘಟನೆ ಪುತ್ತೂರಿನ ಬೊಳುವಾರು ಎಂಬಲ್ಲಿ ನಡೆದಿದೆ. ಅರ್ಯಾಪು ಕುಂಜೂರು ಪಂಜ ನಿವಾಸಿ ರಮೇಶ್ ರೈ ಎಂಬವರ ಪುತ್ರ ನೆಹರೂ ನಗರದ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಕಾಮ್ ಓದುತ್ತಿದ್ದ ಶ್ರಮಿಕ್ ರೈ(20) ಮೃತಪಟ್ಟವರು.

ಶ್ರಮಿಕ್ ನಿನ್ನೆ ಸಂಜೆ ಬೊಳುವಾರಿನ ಜಿಮ್ ನಲ್ಲಿ ವರ್ಕ್ ಔಟ್ ಮಾಡುತ್ತಿದ್ದ ವೇಳೆ ಹೃದಯಾಘಾತಕ್ಕೆ ಒಳಗಾಗಿದ್ದು ತಕ್ಷಣವೇ ಆಸ್ಪತ್ರೆಗೆ ಕೊಂಡೊಯ್ದರೂ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.
