
ಸುರತ್ಕಲ್: ಶ್ರೀ ಶಿರಿಡಿ ಸಾಯಿಬಾಬಾ ಮಂದಿರ , ಪುಚ್ಚಾಡಿ , ಸೂರಿಂಜೆ ಇದರ 2026 -2028 ಸಾಲಿನ ನೂತನ ಅಧ್ಯಕ್ಷರಾಗಿ ಸುಧಾಕರ್ ಬಂಗೇರ , ಪುಚ್ಚಾಡಿ ಇವರು ಆಯ್ಕೆಯಾಗಿರುತ್ತಾರೆ.
” ಒಂದು ಗುರುವಾರ – ಒಬ್ಬ ದಾನಿ – ಒಂದು ಪವಿತ್ರ ಸೇವೆ ”
ಶ್ರೀ ಶಿರಿಡಿ ಸಾಯಿ ಬಾಬಾ ಮಂದಿರ, ಸೂರಿಂಜೆ, ಮಂಗಳೂರು ಕಳೆದ 12 ವರ್ಷಗಳಿಂದ ಶ್ರೀ ಶಿರಿಡಿ ಸಾಯಿ ಬಾಬಾರವರ ಕೃಪಾಶೀರ್ವಾದದೊಂದಿಗೆ ಭಕ್ತರು ಹಾಗೂ ಸಮಾಜದ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದೆ. ಮಂದಿರದಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ , ಶೈಕ್ಷಿಣಿಕ ಕಾರ್ಯಕ್ರಮಗಳ ಜೊತೆಗೆ ವಿವಿಧ ಸಾಮಾಜಿಕ ಸೇವಾ ಚಟುವಟಿಕೆಗಳನ್ನೂ ನಿರಂತರವಾಗಿ ನಡೆಸಲಾಗುತ್ತಿದೆ.
ಪ್ರತಿ ಗುರುವಾರ ವಿಶೇಷ ಪೂಜೆ ಮತ್ತು ಅನ್ನ ಸಂತರ್ಪಣೆ ಸೇವೆ:-
ನಮ್ಮ ಸೇವಾ ಕಾರ್ಯಗಳ ಅಂಗವಾಗಿ ಪ್ರತಿ ಗುರುವಾರ ಶ್ರೀ ಶಿರಿಡಿ ಸಾಯಿ ಬಾಬಾರವರಿಗೆ ವಿಶೇಷ ಪೂಜೆ ಹಾಗೂ ಭಕ್ತರಿಗೆ ಅನ್ನ ಸಂತರ್ಪಣೆ ಸೇವೆ ನಡೆಸಲಾಗುತ್ತಿದೆ. ಈ ಪವಿತ್ರ ಸೇವೆಗೆ ಒಬ್ಬ ದಿನದ ಸಂಪೂರ್ಣ ಪ್ರಾಯೋಜಕತ್ವಕ್ಕಾಗಿ ಸೇವಾ ದೇಣಿಗೆಯನ್ನು ಭಕ್ತರು ಮತ್ತು ದಾನಿಗಳು ನೀಡಬಹುದಾಗಿದೆ.
ತಮ್ಮ ಕುಟುಂಬದ ಹೆಸರಿನಲ್ಲಿ, ತಂದೆ-ತಾಯಿ ಮತ್ತು ಕುಟುಂಬದ ಸದಸ್ಯರ ಹೆಸರಿನಲ್ಲಿ, ಜನ್ಮದಿನ ಅಥವಾ ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ, ವಿಶೇಷ ದಿನ ಅಥವಾ ವಿಶೇಷ ಪ್ರಾರ್ಥನೆಗಾಗಿ, ಅಗಲಿದ ಆತ್ಮೀಯರ ಸ್ಮರಣಾರ್ಥವಾಗಿ ಭಕ್ತರು ಈ ಸೇವೆಯನ್ನು ಪ್ರಾಯೋಜಿಸಬಹುದಾಗಿದೆ.
ನಿಮ್ಮ ಅಮೂಲ್ಯ ಸಹಕಾರವು ಅನ್ನ ಸಂತರ್ಪಣೆ ಸೇವೆಯ ಜೊತೆಗೆ ಮಂದಿರವು ಕಳೆದ 12 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಧಾರ್ಮಿಕ, ಭಕ್ತಿಪರ, ಬಾಲಗೋಕುಲ, ಸಾಂಸ್ಕೃತಿಕ ಹಾಗೂ ವಿವಿಧ ಸಾಮಾಜಿಕ ಸೇವಾ ಕಾರ್ಯಗಳಿಗೆ ಸಹ ಪ್ರೇರಣೆ ಮತ್ತು ಬೆಂಬಲವಾಗಲಿದೆ ಎಂದು ನೂತನ ಅಧ್ಯಕ್ಷ ಸ್ಥಾನ ವಹಿಸಿ ಸುಧಾಕರ್ ಬಂಗೇರ ಇವರು ವಿನಂತಿಸಿಕೊಂಡರು.
