ಕೆನರಾ ನಂದಗೋಕುಲ , ಕೊಡಿಯಾಲ್‌ಬೈಲ್ ನಲ್ಲಿ ವಿಶ್ವ ಹುಲಿ ದಿನಾಚರಣೆ


ಮಂಗಳೂರು: ಜುಲೈ 29ರಂದು ಆಚರಿಸಲಾಗುವ ಅಂತರರಾಷ್ಟ್ರೀಯ ಹುಲಿ ದಿನದ ಅಂಗವಾಗಿ ಕೆನರಾ ನಂದಗೋಕುಲ ಶಾಲೆಯಲ್ಲಿ ಜುಲೈ 20ರಂದು ಭುವನೇಂದ್ರ ಸಭಾಂಗಣದಲ್ಲಿ ವಿಶ್ವ ಹುಲಿ ದಿನವನ್ನು ಆಚರಿಸಲಾಯಿತು.
ಹುಲಿಯ ವೇಷದಲ್ಲಿ ಕಂಗೊಳಿಸಿದ ಪುಟಾಣಿ ಮಕ್ಕಳ ಮುಗ್ಧತೆ, ಕಾಡಿನ ಸೌಂದರ್ಯ ಮತ್ತು ವನ್ಯಜೀವಿಗಳ ಮಹತ್ವವನ್ನು ಎಲ್ಲರ ಮನಸ್ಸಿನಲ್ಲಿ ಜೀವಂತಗೊಳಿಸಿತು. ಶಿಕ್ಷಕಿ ಶ್ರೀಮತಿ ಪ್ರತಿಮಾ ಅವರು ಸಂವಾದಾತ್ಮಕವಾಗಿ ಹುಲಿಯ ಮಹತ್ವ, ಪ್ರಕೃತಿಯ ಸಮತೋಲನದಲ್ಲಿ ಅದರ ಅನನ್ಯ ಪಾತ್ರ ಹಾಗೂ ಮುಂದಿನ ಪೀಳಿಗೆಗಾಗಿ ಹುಲಿಗಳನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರದ್ದೆಂದು ಮಕ್ಕಳ ಮನಸ್ಸಿಗೆ ಮುಟ್ಟುವಂತೆ ವಿವರಿಸಿದರು.
“ಹುಲಿ ಉಳಿದರೆ ಕಾಡು ಉಳಿಯುತ್ತದೆ; ಕಾಡು ಉಳಿದರೆ ಜೀವಜಗತ್ತು ಉಳಿಯುತ್ತದೆ” ಎಂಬ ಸಂದೇಶ ಕಾರ್ಯಕ್ರಮದ ಸಾರವಾಗಿತ್ತು.
ಶಾಲೆಯ ಮುಖ್ಯೋಪಾಧ್ಯಾಯಿನಿ ಉಜ್ವಲ್ ಮಲ್ಯ ಅವರು ಇಂತಹ ಮೌಲ್ಯಾಧಾರಿತ ಕಾರ್ಯಕ್ರಮಗಳಿಗೆ ಸದಾ ಪ್ರೋತ್ಸಾಹ ನೀಡುತ್ತಾ, ಮಕ್ಕಳಲ್ಲಿ ಪ್ರಕೃತಿ ಪ್ರೇಮ ಮತ್ತು ಪರಿಸರ ಸಂರಕ್ಷಣೆಯ ಅರಿವು ಬೆಳೆಸುವ ಪ್ರಯತ್ನವನ್ನು ಶ್ಲಾಘಿಸಿದರು.


ವಿಶ್ವ ಹುಲಿ ದಿನದ ಈ ಆಚರಣೆ ಮಕ್ಕಳ ಮನದಲ್ಲಿ ವನ್ಯಜೀವಿಗಳ ಮೇಲಿನ ಪ್ರೀತಿ, ಕಾಳಜಿ ಮತ್ತು ಪ್ರಕೃತಿಯನ್ನು ಕಾಪಾಡುವ ಸಂಕಲ್ಪದ ಬೀಜವನ್ನು ಬಿತ್ತಿದ ಸ್ಮರಣೀಯ ಕ್ಷಣವಾಗಿ ಉಳಿಯಿತು.

error: Content is protected !!