ರೋಟರಿ ಇಂಟರಾಕ್ಟ್ ಕ್ಲಬ್, ರೋಟರಿ ಕ್ಲಬ್ ಮಂಗಳೂರು ಮೆಟ್ರೋ ನೇತ್ರತ್ವದಲ್ಲಿ 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ

ಮಂಗಳೂರು: ರೋಟರಿ ಇಂಟರಾಕ್ಟ್ ಕ್ಲಬ್ 2026-27 ರೋಟರಿ ಕ್ಲಬ್ ಮಂಗಳೂರು ಮೆಟ್ರೊ ಇವರ ನೇತ್ರತ್ವದಲ್ಲಿ 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣದ ಕಾರ್ಯಕ್ರಮ ಕೆನರಾ ಶಾಲೆ, ಡೊಂಗರಕೇರಿಯಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ರೊಟೇರಿಯನ್ ಶಿವಾನಿ ಬಾಳಿಗಾ ಅವರು ಭಾಗವಹಿಸಿದ್ದರು. ಅದಲ್ಲದೆ ರೋಟರಿ ಕ್ಲಬ್ ಮಂಗಳೂರು ಮೆಟ್ರೊ ಇದರ ಅಧ್ಯಕ್ಷರಾದ ಶ್ಯಾಮ್ ಪ್ರಕಾಶ್, ಅಡ್ವೈಸರ್ ರೊಟೇರಿಯನ್ ಕೆ ಸುರೇಶ್ ಕಾಮತ್, ರೊಟೇರಿಯನ್ ರಜನಿ ಭಟ್ ಹಾಗೂ ಇತರರು ಭಾಗವಹಿಸಿದ್ದರು. 2026-27ನೇ ಸಾಲಿನ ಇಂಟರಾಕ್ಟ್ ಕ್ಲಬ್ ನ ಅಧ್ಯಕ್ಷರಾಗಿ ಕುಮಾರಿ ಕ್ರಪಾ ಹಾಗೂ ಕಾರ್ಯದರ್ಶಿಯಾಗಿ ಕುಮಾರಿ ಭೂಮಿಕ ಆಯ್ಕೆಯಾದರು. 2027-28ನೇ ಸಾಲಿನ ಅಧ್ಯಕ್ಷೆಯಾಗಿ ಕುಮಾರಿ ನಿಷ್ಕಾ ಆಯ್ಕೆಗೊಂಡರು.

ಶಿಕ್ಷಕಿ ಸಂಯೋಜಕರಾದ ಶ್ರೀಮತಿ ಸುಜಾತ ಟಿ ಹಾಗೂ ಶ್ರೀಮತಿ ಪೂಜಾ ಅವರ ಮಾರ್ಗದರ್ಶನದಲ್ಲಿ ಶಾಲಾ ಮಕ್ಕಳಾದ ಕುಮಾರಿ ವಂಶಿ ಡಿ. ಶೆಟ್ಟಿ, ಕುಮಾರಿ ನವ್ಯಶ್ರೀ, ಕುಮಾರಿ ಚಾರ್ವಿ ಚೊಕ್ಕವಾಗಿ, ಚೆನ್ನಾಗಿ ಕಾರ್ಯಕ್ರಮವನ್ನು ನಿರ್ವಹಿಸಿದರು.

error: Content is protected !!