
ಪಡುಬಿದ್ರಿ: ಇಲ್ಲಿನ ದೀನ್ ಸ್ಟ್ರೀಟ್ ನಿವಾಸಿ ಯುವ ಉದ್ಯಮಿ ರಿಯಾಜ್(46) ಅವರು ನಿನ್ನೆ ಬೆಳಗ್ಗೆ ಸೌದಿ ಅರೇಬಿಯಾದ ಯಾನ್ಬುವಿನಲ್ಲಿ ಹೃದಯಾಘಾತದಿಂದ ನಿಧನರಾದರು.
ರಿಯಾಜ್ ಹಲವಾರು ವರ್ಷಗಳಿಂದ ಸೌದಿ ಅರೇಬಿಯಾದಲ್ಲಿ ವ್ಯವಹಾರವನ್ನು ಹೊಂದಿದ್ದರು.

ರಿಯಾಜ್ ಪಡುಬಿದ್ರಿಯ ದೀನ್ ಸ್ಟ್ರೀಟ್‌ನಲ್ಲಿರುವ ಮುಹಮ್ಮದನ್ ಸ್ಪೋರ್ಟ್ಸ್ ಕ್ಲಬ್‌ನ ಸಕ್ರಿಯ ಸದಸ್ಯರಾಗಿದ್ದರು. ಅವರ ತಾಯಿ, ಪತ್ನಿ ಮತ್ತು ಮೂವರು ಹೆಣ್ಣುಮಕ್ಕಳನ್ನು ಅಗಲಿದ್ದಾರೆ.
