
ಉ.ಕ.: ಕುಮಟಾ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಆರೋಗ್ಯ ಸಚಿವ ಯು.ಟಿ.ಖಾದರ್ ಇಂದು ಬೆಳಗ್ಗೆ ದಿಢೀರ್ ಭೇಟಿ ನೀಡಿ ವ್ಯವಸ್ಥೆ ಹಾಗೂ ಪ್ರಗತಿಯ ಕುರಿತು ಸಮಗ್ರ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಕುಮಟಾ ಶಾಸಕರಾದ ದಿನಕರ್ ಶೆಟ್ಟಿ ಮತ್ತು ಭಟ್ಕಳ ಶಾಸಕರಾದ ಮಾಂಕಾಳ್ ವೈದ್ಯ ಮತ್ತು ಮಾಜಿ ಕುಮಟಾ ಶಾಸಕರಾದ ಶಾರದಾ ಮೋಹನ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

