ಪಂಜ ಸರಕಾರಿ ಶಾಲೆಗೆ ಗಣಕಯಂತ್ರ ಕೊಡುಗೆ, ದೇಣಿಗೆ ವಿತರಣೆ

ಪಕ್ಷಿಕೆರೆ: ಸಾರ್ವಜನಿಕ ಶಿಕ್ಷಣ ಇಲಾಖೆ ದ.ಕ. ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಪಂಜ ಮಂಗಳೂರು ಉತ್ತರ ವಲಯ ಇದರ ಸಭಾಂಗಣದಲ್ಲಿ ಪಂಜ ಶಾಲೆಗೆ ಉದ್ಯಮಿ ದಯಾನಂದ ಶೆಟ್ಟಿ ಅಧ್ಯಕ್ಷರು ಪಂಜ ಬಾಕಿ ಮಾರುಗುತ್ತು ಅವರು ಗಣಕಯಂತ್ರ ನೀಡಿದರು.

ಸದಾನಂದ ಶೆಟ್ಟಿ ಪಂಜ ಶಾಲೆಗೆ ದೇಣಿಗೆಯಾಗಿ 72 ಸಾವಿರ ನೀಡಿದರು. ಈ ಸಂದರ್ಭದಲ್ಲಿ ಪಂಚಾಯತ್ ಮಾಜಿ ಸದಸ್ಯರಾದ ಸುರೇಶ್ ಪಂಜ, ಶಾಲಾ ಎಸ್ .ಡಿ .ಎಂ ಸಿ ಅಧ್ಯಕ್ಷ ನವೀನ್ ಸಾಲಿಯನ್ ಪಂಜ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ್. ಎಂ .ಶೆಟ್ಟಿ ಬೈಲಗುತ್ತು, ಚಂದ್ರಹಾಸ ಶೆಟ್ಟಿ ಮೊಗಾಪಾಡಿ, ಗಣೇಶ್ ಶೆಟ್ಟಿ ಪಂಜ ಬಾಕಿಮಾರುಗುತ್ತು, ಅವಿನಾಶ್ ಶೆಟ್ಟಿ ಪಂಜ ಬಾಕಿ ಮಾರುಗುತ್ತು ,ಶಾಲಾ ಮುಖ್ಯ ಶಿಕ್ಷಕಿ ವಸಂತಿ. ಕೆ, ಸಹ ಶಿಕ್ಷಕರಾದ ಪಲ್ಲವಿ, ಹಾಗೂ ಮತ್ತಿತರರು ಉಪಸ್ಥಿತರಿದ್ದರು.

error: Content is protected !!