ಎರಡು ಕಾಲುಗಳನ್ನು ಕಳೆದುಕೊಂಡ ಅಶ್ವಿನಿಗೆ ಆಶ್ರಯವಾದ ಬಿಜೆಪಿ, ಮಾಜಿ ಸಂಸದರ ಮುತುವರ್ಜಿಯಲ್ಲಿ 23 ಲಕ್ಷ ರೂ. ವೆಚ್ಚದ ಕೃತಕ ಕಾಲುಗಳಿಗೆ ಸಹಾಯಹಸ್ತ


ಮಂಗಳೂರು: ಮಂಜನಾಡಿ ದುರಂತದಲ್ಲಿ ಇಬ್ಬರು ಮಕ್ಕಳು ಹಾಗೂ ತನ್ನೆರಡೂ ಕಾಲುಗಳನ್ನು ಕಳೆದುಕೊಂಡ ಅಶ್ವಿನಿ ಅವರಿಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಿರ್ದೇಶನದಂತೆ ಮಹಾರಾಷ್ಟ್ರದ ಲೋಧ ಚಾರಿಟೇಬಲ್ ಟ್ರಸ್ಟ್ 23ಲಕ್ಷ ರೂ. ಮೊತ್ತವನ್ನು ಒದಗಿಸಿ ಅಶ್ವಿನಿಯವರಿಗೆ ಕೃತಕ ಕಾಲುಗಳಿಗೆ ಒದಗಿಸಿಲಾಗಿದ್ದು ಮಂಗಳವಾರ ದಕ್ಷಿಣ ಕನ್ನಡ ಮಾಜಿ ಸಂಸದ ನಳಿನ್ ಕಟೀಲ್ ಸಹಾಯಧನದ ಚೆಕ್ ಅನ್ನು ಹಸ್ತಾಂತರಿಸುವ ಮೂಲಕ ಕೊಂಚ ನಿರಾಳತೆ ಸಿಕ್ಕಿದೆ.
ಇಂದಿಗೆ ಭರ್ತಿ ಒಂದು ವರ್ಷ, ಒಂದು ತಿಂಗಳ ಹಿಂದೆ ಧಾರಾಕಾರ ಮಳೆಗೆ ಮನೆಯ ಮೇಲೆ ಗುಡ್ಡ ಕುಸಿದು ಮನೆ ಧರಾಶಾಹಿಯಾಗಿ ಮಣ್ಣಿನೊಳಗೆ ಕಾಲು ಸಿಲುಕಿ ಹಾಕಿಕೊಂಡು ತನ್ನ ಎರಡು ಕಾಲುಗಳನ್ನು ಆಸ್ಪತ್ರೆಯಲ್ಲಿ ಅದ್ಯಾವ ಚಿಕಿತ್ಸೆ ನೀಡಿದರೂ ಫಲಿಸದೆ ಕಳೆದುಕೊಂಡ ಅಶ್ವಿನಿಯವರ ಹರೇಕಳದ ತಾಯಿ ಮನೆಯಲ್ಲಿ ಕಣ್ಣೀರು ಸುರಿಸುತ್ತಾ ಜೀವನ ಸಾಗಿಸುತ್ತಿದ್ದಾಕೆಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ನೆರಳಾಗಿ ಬಂದಿದೆ.
ನಡೆದಾಡಲು ಸಾಧ್ಯವಾಗುವಂತೆ ಕೃತಕ ಕಾಲುಗಳಿಗೆ 23 ಲಕ್ಷ ರೂ. ಗಳ ಅಗತ್ಯತೆ ಮನಗಂಡು ಕಾರ್ಯಕರ್ತರ ಮನವಿಗೆ ಸ್ಪಂದಿಸಿದ ಸಂಘದ ಪ್ರಮುಖರಾದ ಪ್ರಕಾಸ್ ಪಿ.ಎಸ್ ಅವರು ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರಲ್ಲಿ ಜೀವನದ ಪ್ರಮುಖ ಘಟ್ಟವನ್ನೇ ಕಳೆದುಕೊಂಡಿದ್ದ ಅಶ್ವಿನಿ ಅವರ ಕುರಿತಾಗಿ ಚರ್ಚಿಸಿ ದೊಡ್ಡ ಮೊತ್ತ ತರಿಸುವಲ್ಲಿ ಯಶಸ್ವಿಯಾಗಿದ್ದು ಚಿರಕಾಲ ಮರೆಯದ ಸೇವೆಗೆ ಸೇರಿದ ಜನಸ್ತೋಮ ಕೃತಜ್ಞತೆ ಸಲ್ಲಿಸಿದೆ.
ಬುಧವಾರ ಸಂಘ ಪರಿವಾರದೊಂದಿಗೆ ಆಗಮಿಸಿದ ನಳಿನ್ ಕಟೀಲ್ ಅವರು ಚೆಕ್ ಹಸ್ತಾಂತರಿಸಿ ರಾ¶ÖçÃಯ ಸ್ವಯಂ ಸೇವಕ ಸಂಘದ ನಿರ್ದೇಶನದಂತೆ ನನ್ನಿಂದಾದ ಸೇವೆಯನ್ನು ತಾಯಿ ಭಾರತಿ ಸುತೆ ಅಶ್ವಿನಿ ಅವರಿಗಾಗಿ ಮಾಡಿಸಿದ್ದಾಳೆ. ಮಂಜನಾಡಿಯ ಕೊಪ್ಪಳ ಪ್ರದೇಶದಲ್ಲಿ ಕಳೆದ ವರ್ಷ ನೆರೆ ಹಾವಳಿಯಿಂದ ಮನೆ ಕುಸಿತದಿಂದ ತನ್ನ ಎರಡು ಕರುಳ ಬಳ್ಳಿಯನ್ನು ಕಳೆದುಕೊಂಡದ್ದಲ್ಲದೆ ಎರಡು ಕಾಲು, ತನ್ನ ಮಾವ ಒಂದು ಕಾಲು ಕಳೆದುಕೊಂಡಿರುವುದು ಹಾಗೂ ಅಶ್ವಿನಿಯವರ ಅತ್ತೆಯ ಸಾವು ಅವರನ್ನು ದಿಗ್ಭçಮೆಗೊಳಪಡಿಸಿತ್ತು ಇದೀಗ ಕೊಂಚ ನೆಮ್ಮದಿ ಕರುಣಿಸುವ ಪ್ರಯತ್ನದಲ್ಲಿ ಯಶ¸ÀÄì ಕಂಡಿದ್ದೇವೆ ಎಂದು ನೋವಿನ ನಡುವೆಯೂ ಸಂತಸ ವ್ಯಕ್ತಡಿಸಿದ್ದಾರೆ.
ಒಂದು ವರ್ಷದಿಂದ ಕುಟುಂಬ ಸಂಕಷ್ಟದಲ್ಲಿತ್ತು. ಎರಡು ಕೃತಕ ಕಾಲುಗಳನ್ನು ಒದಗಿಸುವುದು ಕುಟುಂಬದ ಬೇಡಿಕೆಯಾಗಿತ್ತು. ಕೃತಕ ಕಾಲುಗಳಿಗೆ 23ರೂ. ಲಕ್ಷ ತಗಲುವುದರಿಂದ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ಮಂಡಲ ಅಧ್ಯಕ್ಷ ಜಗದೀಶ್ ಕುವೆತ್ತಬೈಲ್ ಬೇಡಿಕೆ ಮುಂದಿಟ್ಟಿದ್ದರು. ಅದರಂತೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂತೋಷ್ ಅವರು ಖುದ್ದಾಗಿ ಕರೆ ಮಾಡಿ ಕುಟುಂಬದ ಜೊತೆ ನಿಲ್ಲುವಂತೆ ಸೂಚಿಸಿದ್ದರು. ಹಾಗಾಗಿ ಮಹಾರಾಷ್ಟ್ರ ಸರಕಾರದ ಮಾನ್ಯ ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆ ಸಚಿವರಾದ ಮಂಗಲ್ ಪ್ರಭಾತ್ ಲೋಧ ಅವರ ಲೋಧ ಚಾರಿಟೇಬಲ್ ಟ್ರಸ್ಟ್ಗೆ ಮನವಿ ಮಾಡಿದ ತಕ್ಷಣ ಅವರು ಸ್ಪಂದಿಸಿ ಕೃತಕ ಕಾಲುಗಳಿಗೆ ತಗಲುವ 23ಲಕ್ಷ ರೂ. ವನ್ನು ಒದಗಿಸಿದ್ದೇನೆ.
ಮಾಜಿ ಸಂಸದರು ನಳಿನ್ ಕುಮಾರ್ ಕಟೀಲ್
ಆಂಡ್ರೋಲೈಟ್ ಎಂಬ ಸಂಸ್ಥೆ ಕೃತಕ ಕಾಲು ಜೋಡಣೆಗೆ ಮುಂದಾಗಿದೆ. ಆರ್ಥಿಕ ಸಂಕಷ್ಟಕ್ಕೆ ಬಿಜೆಪಿ ಕುಟುಂಬದ ಜೊತೆ ನಿಂತು ಕಾರ್ಯವನ್ನು ಮಾಡಿದೆ. ಟ್ರಸ್ಟ್ ಮುಖ್ಯಸ್ಥರು ಮಂಗಲ್ ಪ್ರಭಾತ್ ಲೋಧ ನೇರ ಅಶ್ವಿನಿ ಜೊತೆಗೆ ಮಾತನಾಡಿದ್ದಾರೆ. ಈಗಾಗಲೇ ಎರಡು ಬೇಡಿಕೆಗಳನ್ನು ಮನೆಮಂದಿ ಮುಂದಿಟ್ಟಿದ್ದಾರೆ. ದುರ್ಘಟನೆಯಲ್ಲಿ ಮನೆಯನ್ನು ಕಳೆದು ಕೊಂಡಿರುವುದರಿಂದ ಮನೆ ಮತ್ತು ಜಾಗವನ್ನು ಒದಗಿಸುವಂತೆ ಕೇಳಿಕೊಂಡಿದ್ದಾರೆ. ಜಿಲ್ಲಾಕಾರಿಗಳು ಹಾಗೂ ಈ ಭಾಗದ ಶಾಸಕರು ಸಚಿವರಾಗಿದ್ದು, ಅವರು ಜಾಗ ಒದಗಿಸಿಕೊಟ್ಟಲ್ಲಿ ಮನೆ ಕಟ್ಟಿಕೊಡುವ ಕೆಲಸವನ್ನು ಬಿಜೆಪಿ ಮಾಡಲಿದೆ.
ಉದಯ ಶಂಕರ್ ಶೆಟ್ಟಿ ಬಲೆತ್ತೋಡು, ಚಂದ್ರಶೇಖರ್ ಹಾಗೂ ಸುಮಲತಾ ಅವರು ವಿಶೇಷ ಮುತುವರ್ಜಿ ವಹಿಸಿಕೊಂಡು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಕಾಶ್ ಪಿ.ಎಸ್., ಸಂತೋಷ್ ಅವರ ಗಮನಕ್ಕೆ ತರುವ ಮುಖಾಂತರ ಮಾಜಿ ಸಂಸದ ನಳಿನ್ ಕಟೀಲ್ ದೊಡ್ಡ ಆಸರೆಯಾಗಿದ್ದಾರೆ.

ಮಾಜಿ ಸಂಸದರ ಜೊತೆಗೆ ಬಿಜೆಪಿ ಜಿಲ್ಲಾಧ್ಯಕ್ಷರು ಸತೀಶ್ ಕುಂಪಲ, ಬಿಜೆಪಿ ಮಂಗಳೂರು ಮಂಡಲ ಅಧ್ಯಕ್ಷ ಜಗದೀಶ್ ಆಳ್ವ ಕುವೆತ್ತಬೈಲ್, ಪ್ರಧಾನ ಕಾರ್ಯದರ್ಶಿಗಳಾದ ಮೋಹನ್ರಾಜ್ ಕೆ. ಆರ್. ಹಾಗೂ ದಯಾನಂದ ತೊಕ್ಕೊಟ್ಟು, ಮಂಡಲ ಕೋಶಾಕಾರಿ ಸುಮಲತ ಕೊಣಾಜೆ,ಚಂದ್ರಶೇಖರ್ ಶೆಟ್ಟಿ ಮರಿಕ್ಕಳ, ಸೇವಾ ಭಾರತಿ ಸ್ವಯಂಸೇವಕ, ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರು ಉದಯಶಂಕರ್ ಶೆಟ್ಟಿ ಬಲೆತ್ತೋಡು, ಮುರಳೀಧರ್ ಕೊಣಾಜೆ ಯುವ ಮೋರ್ಛಾ ಅಧ್ಯಕ್ಷರು ಸುಧಾಕರ ಗಟ್ಟಿ ಹಾಗೂ ರಮೇಶ್ ಬೆದ್ರೊಳಿಕೆ ಜೊತೆಗಿದ್ದರು.

error: Content is protected !!