ನಿರ್ಮಾಪಕ ಬಾ.ಮ. ಹರೀಶ್ ಪುತ್ರ ಕೊಡಚಾದ್ರಿಯಲ್ಲಿ ಹೃದಯಾಘಾತಕ್ಕೆ ಬಲಿ!

ಕೊಲ್ಲೂರು: ಕನ್ನಡ ಚಲನಚಿತ್ರದ ಹೆಸರಾಂತ ನಿರ್ಮಾಪಕ ಬಾ.ಮ ಹರೀಶ್ ಪುತ್ರ ಉಲ್ಲಾಸ್ (28) ಕೊಲ್ಲೂರಿನ ಕೊಡಚಾದ್ರಿ ಬೆಟ್ಟದಲ್ಲಿ ಟ್ರೆಕ್ಕಿಂಗ್ ಹೋಗಿದ್ದ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಇಂದು ನಡೆದಿದೆ.


ಉಲ್ಲಾಸ್ ತಮ್ಮ ಸ್ನೇಹಿತ ಸುರೇಶ್ ಜೊತೆ ಇಂದು ಬೆಳಗ್ಗೆ 6-30ಕ್ಕೆ ಕೊಡಚಾದ್ರಿ ಬೆಟ್ಟಕ್ಕೆ ಟ್ರೆಕ್ಕಿಂಗ್‌ಗೆ ಬಂದಿದ್ದರು. ಸರ್ವಜ್ಞ ಪೀಠಕ್ಕೆ ಭೇಟಿ ನೀಡಿದ ಬಳಿಕ ವಾಪಸ್ಸಾಗುವ ವೇಳೆ ಪ್ರವಾಸಿ ಮಂದಿರದ ಮುಂಭಾಗ ತೀವ್ರ ಹೃದಯಾಘಾತಕ್ಕೆ ಒಳಗಾಗಿ ಹಠತ್ತಾಗಿ ಕುಸಿದು ಬಿದ್ದಿದ್ದಾರೆ. ಕೂಡಲೇ ಸರ್ಕಾರಿ ಆಸ್ಪತ್ರೆಗೆ ಅಂಬ್ಯುಲೆನ್ಸ್ ಮೂಲಕ ಸ್ಥಳಾಂತರಿಸಿದ್ದಾರೆ. ಹೆಚ್ಚಿನ ಚಿಕ್ಕಿತ್ಸೆಗಾಗಿ ಹೊಸನಗರ ಸರ್ಕಾರಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯ ಉಲ್ಲಾಸ್ ಸಾವನ್ನಪ್ಪಿದ್ದಾರೆ.
ಉಲ್ಲಾಸ್ ಅವರಿಗೆ ಇತ್ತೀಚೆಗಷ್ಟೇ ವಿವಾಹ ನಿಶ್ಚಿತಾರ್ಥದ ಸರಳ ಕಾರ್ಯಕ್ರಮ ನಡೆದಿತ್ತು. ಮುಂಬರುವ ಡಿಸೆಂಬರ್ ತಿಂಗಳಲ್ಲಿ ಮದುವೆ ನಡೆಯಬೇಕಿತ್ತು.

error: Content is protected !!