
ಮಂಗಳೂರು, ಜೂನ್ 26: ಕಳೆದ 18ಕ್ಕೂ ಹೆಚ್ಚು ವರ್ಷಗಳಿಂದ ರೋಟರಿ ಮೂಲಕ ಸಮಾಜಸೇವೆ, ಸಮುದಾಯ ಅಭಿವೃದ್ಧಿ ಹಾಗೂ ನಾಯಕತ್ವದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಆರ್‌ಟಿಎನ್ ಸತೀಶ್ ಬೋಳಾರ್ ,ದಕ್ಷಿಣ ಕನ್ನಡ, ಕೊಡಗು, ಮೈಸೂರು ಹಾಗೂ ಚಾಮರಾಜ ನಗರ ಜಿಲ್ಲೆಗಳನ್ನು ಒಳಗೊಂಡಿರುವ ರೋಟರಿ ಜಿಲ್ಲೆ 3181ರ 2026-27ನೇ ಸಾಲಿನ ಜಿಲ್ಲಾ ಗವರ್ನರ್ ಆಗಿ ರೊ.ಸತೀಶ್ ಬೋಳಾರ್ ಅವರು ಆಯ್ಕೆ ಗೊಂಡಿ ದ್ದಾರೆ. ಅವರು ಜೂನ್ 28ರಂದು ಭಾನುವಾರ ಮಂಗಳೂರಿನ ಪಿಲಿಕುಳ ಸೌಟ್ಸ್ ಮತ್ತು ಗೈಡ್ಸ್ ತರಬೇತಿ ಕೇಂದ್ರದಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ.